ಮಕ್ಕಳ ಉದ್ಯಾನವನ ಉದ್ಘಾಟಿಸಿದ ಸಚಿನ್ ತೆಂಡೂಲ್ಕರ್

ಬಾಂದ್ರಾ ಉಪನಗರದಲ್ಲಿರುವ 'ಮಕ್ಕಳ ಉದ್ಯಾನ'

Last Updated : Mar 8, 2019, 10:37 AM IST
ಮಕ್ಕಳ ಉದ್ಯಾನವನ ಉದ್ಘಾಟಿಸಿದ ಸಚಿನ್ ತೆಂಡೂಲ್ಕರ್ title=
Pic Courtesy: PTI

ಮುಂಬೈ: ದೇಶದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರುವಾರ ಬಾಂದ್ರಾ ಉಪನಗರದಲ್ಲಿನ 'ಮಕ್ಕಳ ಉದ್ಯಾನ'ವನ್ನು ಉದ್ಘಾಟಿಸಿದರು. 

ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ತಂಡೂಲ್ಕರ್ ತಮ್ಮ MPLAD ನಿಧಿ ಬಳಸಿ ಈ ಉದ್ಯಾನವನ್ನು ಪುನರ್ ನಿರ್ಮಿಸಿದ್ದಾರೆ.

ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್,   "ಮೊದಲಿಗೆ ಇದು ಆಟದ ಮೈದಾನವಾಗಿತ್ತು, ನಂತರದ ದಿನಗಳಲ್ಲಿ ಇಲ್ಲಿ ಕಸ ಹಾಕುತ್ತಿದ್ದರು. ಈ ಪ್ರದೇಶದಲ್ಲಿ ಮಕ್ಕಳ ಉದ್ಯಾನವನ್ನು ಪುನಃಸ್ಥಾಪಿಸುವ ಬಗ್ಗೆ ನನಗೆ ಯೋಚನೆ ಬಂದಿತು." ಈ ಹಿನ್ನೆಲೆಯಲ್ಲಿ ನನ್ನ ಕೆಲವು ಹಳೆಯ ಸ್ನೇಹಿತರನ್ನು ಭೇಟಿಯಾಗಿ ಉದ್ಯಾನವನ ಪುನಃಸ್ಥಾಪಿಸುವ ಕೆಲಸ ಮಾಡಲಾಯಿತು ಎಂದು ಹೇಳಿದರು.

Trending News