“ಇದನ್ನು ನಾನು ನಿರೀಕ್ಷಿಸಿರಲಿಲ್ಲ...” ಟೆಸ್ಟ್ ಕ್ರಿಕೆಟ್ ಬಗ್ಗೆ ಗಂಗೂಲಿ ಹೇಳಿಕೆಗೆ ಛೀಮಾರಿ ಹಾಕಿದ ಈ ಅನುಭವಿ!

Saurav Ganguly: ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಟೀಂ ಇಂಡಿಯಾ ಸೋತ ನಂತರ, ನಾಯಕ ರೋಹಿತ್ ಬಗ್ಗೆ ಸೌರವ್ ಗಂಗೂಲಿ, “ನನಗೆ ರೋಹಿತ್ ಮೇಲೆ ಸಂಪೂರ್ಣ ನಂಬಿಕೆ ಇದೆ. ಅವರು ಮತ್ತು ಎಂಎಸ್ ಧೋನಿ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಐಪಿಎಲ್ ಕಠಿಣ ಟೂರ್ನಿಯಾಗಿರುವುದರಿಂದ ಗೆಲ್ಲುವುದು ಸುಲಭವಲ್ಲ.

Written by - Bhavishya Shetty | Last Updated : Jun 16, 2023, 01:16 PM IST
    • ಗಂಗೂಲಿ ಹೇಳಿಕೆಗೆ ಮಾಜಿ ಕ್ರಿಕೆಟಿಗ ಛೀಮಾರಿ
    • 'ವಿಶ್ವ ದರ್ಜೆಯ ಆಟಗಾರ ಮತ್ತು ನಾಯಕ ಈ ರೀತಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ
    • ರೋಹಿತ್ ಬಗ್ಗೆ ಸೌರವ್ ಗಂಗೂಲಿ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಾಗ್ದಾಳಿ
“ಇದನ್ನು ನಾನು ನಿರೀಕ್ಷಿಸಿರಲಿಲ್ಲ...” ಟೆಸ್ಟ್ ಕ್ರಿಕೆಟ್ ಬಗ್ಗೆ ಗಂಗೂಲಿ ಹೇಳಿಕೆಗೆ ಛೀಮಾರಿ ಹಾಕಿದ ಈ ಅನುಭವಿ! title=
Sourav Ganguly

Saurav Ganguly: ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ 209 ರನ್‌ ಗಳ ದೊಡ್ಡ ಅಂತರದಿಂದ ಸೋಲನ್ನು ಎದುರಿಸಬೇಕಾಯಿತು. ಇದಾದ ಬಳಿಕ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ. ಈಗ ಗಂಗೂಲಿ ಹೇಳಿಕೆಗೆ ಮಾಜಿ ಕ್ರಿಕೆಟಿಗ ಛೀಮಾರಿ ಹಾಕಿದ್ದು, 'ವಿಶ್ವ ದರ್ಜೆಯ ಆಟಗಾರ ಮತ್ತು ನಾಯಕ ಈ ರೀತಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ: Biparjoy Update: ಗುಜರಾತ್ ನಲ್ಲಿ 94,427 ಜನರು ಶಿಫ್ಟ್, 1521 ಹೋಮ್ ಶೇಲ್ಟರ್ ಗಳ ನಿರ್ಮಾಣ

ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಟೀಂ ಇಂಡಿಯಾ ಸೋತ ನಂತರ, ನಾಯಕ ರೋಹಿತ್ ಬಗ್ಗೆ ಸೌರವ್ ಗಂಗೂಲಿ, “ನನಗೆ ರೋಹಿತ್ ಮೇಲೆ ಸಂಪೂರ್ಣ ನಂಬಿಕೆ ಇದೆ. ಅವರು ಮತ್ತು ಎಂಎಸ್ ಧೋನಿ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಐಪಿಎಲ್ ಕಠಿಣ ಟೂರ್ನಿಯಾಗಿರುವುದರಿಂದ ಗೆಲ್ಲುವುದು ಸುಲಭವಲ್ಲ. ಐಪಿಎಲ್ ಗೆಲ್ಲುವುದು ವಿಶ್ವಕಪ್ ಗೆಲ್ಲುವುದಕ್ಕಿಂತ ಹೆಚ್ಚು ಕಷ್ಟಕರವಾಗಿದೆ ಏಕೆಂದರೆ 14 ಪಂದ್ಯಗಳಿವೆ, ನಂತರ ನೀವು ಪ್ಲೇಆಫ್‌ ಗಳಲ್ಲಿ ಭಾಗವಹಿಸುತ್ತೀರಿ. ವಿಶ್ವಕಪ್‌ ನಲ್ಲಿ ಸೆಮಿಫೈನಲ್‌ ಗೆ ಪ್ರವೇಶಿಸಲು ಕೇವಲ 4-5 ಪಂದ್ಯಗಳನ್ನು ಆಡಬೇಕಾಗುತ್ತದೆ. ಐಪಿಎಲ್‌ ನಲ್ಲಿ ನೀವು ಚಾಂಪಿಯನ್ ಆಗಲು 17 ಪಂದ್ಯಗಳನ್ನು ಆಡಬೇಕು” ಎಂದು ಹೇಳಿದ್ದಾರೆ.

ರೋಹಿತ್ ಬಗ್ಗೆ ಸೌರವ್ ಗಂಗೂಲಿ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ವಾಗ್ದಾಳಿ ನಡೆಸಿದ್ದಾರೆ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಸಲ್ಮಾನ್, “ವಿಶ್ವ ದರ್ಜೆಯ ಆಟಗಾರ ಮತ್ತು ನಾಯಕ ಈ ರೀತಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನೀವು ಲೀಗ್ ಕ್ರಿಕೆಟ್ ಅನ್ನು ಟೆಸ್ಟ್ ಅಂತರಾಷ್ಟ್ರೀಯ ಕ್ರಿಕೆಟ್ನೊಂದಿಗೆ ಹೇಗೆ ಹೋಲಿಸುತ್ತೀರಿ? ಇವೆರಡರ ನಡುವೆ ಯಾವುದೇ ಹೋಲಿಕೆ ಇಲ್ಲ. ನೀವು ಕ್ರಿಕೆಟ್‌ ನ ಅಂತಿಮ ಸ್ವರೂಪವನ್ನು ಚಿಕ್ಕ ಸ್ವರೂಪದೊಂದಿಗೆ ಹೋಲಿಸುತ್ತಿದ್ದೀರಿ. ಒಂದು ತಂಡದಲ್ಲಿ ಕೇವಲ ನಾಲ್ಕು ಅಂತರಾಷ್ಟ್ರೀಯ ಆಟಗಾರರು ಎಲ್ಲಿದ್ದಾರೆ? ಅವರ ನಡುವೆ ಯಾವುದೇ ಹೋಲಿಕೆ ಇಲ್ಲ” ಎಂದು ಹೇಳಿದ್ದಾರೆ

ಇದನ್ನೂ ಓದಿ: Namratha Gowda: ಕಿರುತೆರೆ ನಟಿ ನಮ್ರತಾ ಗೌಡ ಬೆಡ್‌ರೂಮ್‌ ವಿಡಿಯೋ ವೈರಲ್‌.!

ರೋಹಿತ್ ನಾಯಕತ್ವದ ಬಗ್ಗೆಯೂ ಗಂಗೂಲಿ ಹೇಳಿದ್ದು, “ವಿರಾಟ್ ನಿರ್ಗಮನದ ನಂತರ ಆಯ್ಕೆದಾರರಿಗೆ ನಾಯಕನ ಅಗತ್ಯವಿತ್ತು ಮತ್ತು ಆ ಸಮಯದಲ್ಲಿ ರೋಹಿತ್ ಅತ್ಯುತ್ತಮರಾಗಿದ್ದರು. ಅವರು 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಏಷ್ಯಾಕಪ್ ಕೂಡ ಗೆದ್ದಿದ್ದರು. ಸೋತರೂ ಸಹ ಭಾರತ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಿದೆ” ಎಂದು ಹೇಳಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News