IPL Auction 2023 : ಐಪಿಎಲ್‌ನಲ್ಲೆ ಅತೀ ಹೆಚ್ಚು ಮೊತ್ತಕ್ಕೆ ಸೆಲ್ ಆದ ಸ್ಯಾಮ್ ಕರ್ರಾನ್!

IPL Auction, Sam Curran to PBKS : ಈ ಆಟಗಾರ ಐಪಿಎಲ್‌ ನ ಮುಂದಿನ ಸೀಸನ್ ಮೊದಲು, ಮಿನಿ ಹರಾಜಿನಲ್ಲಿ (IPL-2023 ಮಿನಿ ಹರಾಜು) ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದಾರೆ.

Written by - Channabasava A Kashinakunti | Last Updated : Dec 23, 2022, 04:02 PM IST
  • ಈ ಆಟಗಾರ ಐಪಿಎಲ್‌ ನ ಮುಂದಿನ ಸೀಸನ್ ಮೊದಲು
  • ಐಪಿಎಲ್‌ ಮಿನಿ ಹರಾಜಿನಲ್ಲಿ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದಾರೆ.
  • 18.5 ಕೋಟಿ ಸ್ಯಾಮ್ ಸೆಲ್
IPL Auction 2023 : ಐಪಿಎಲ್‌ನಲ್ಲೆ ಅತೀ ಹೆಚ್ಚು ಮೊತ್ತಕ್ಕೆ ಸೆಲ್ ಆದ ಸ್ಯಾಮ್ ಕರ್ರಾನ್! title=

IPL Auction, Sam Curran to PBKS : ಈ ಆಟಗಾರ ಐಪಿಎಲ್‌ ನ ಮುಂದಿನ ಸೀಸನ್ ಮೊದಲು, ಮಿನಿ ಹರಾಜಿನಲ್ಲಿ (IPL-2023 ಮಿನಿ ಹರಾಜು) ಎಲ್ಲಾ ದಾಖಲೆಗಳನ್ನು ಸರಿಗಟ್ಟಿದ್ದಾರೆ. 24ರ ಹರೆಯದ ಆಲ್‌ರೌಂಡರ್‌ಗೆ ಹರಾಜಿನಲ್ಲಿ ಹಿಂದೆಂದೂ ಸೆಲ್ ಆದ ದೊಡ್ಡ ಮೊತ್ತಕ್ಕೆ ಬಿಡ್ ಆಗಿದ್ದಾರೆ. ಈ ಆಟಗಾರರನನ್ನು ಪಂಜಾಬ್ ಕಿಂಗ್ಸ್ ತನ್ನ ತಂಡಕ್ಕೆ ಖರೀದಿಸಿದೆ.

18.5 ಕೋಟಿ ಸ್ಯಾಮ್ ಸೆಲ್

ಒಂದು ಬಾರಿಯೂ ಪ್ರಶಸ್ತಿ ಗೆಲ್ಲದ ಪಂಜಾಬ್ ತಂಡ 18.5 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಸ್ಯಾಮ್ ಕರ್ರಾನ್ ನನ್ನ ಖರೀದಿಸಿದೆ. ಸ್ಯಾಮ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 24 ಟೆಸ್ಟ್, 18 ODI ಮತ್ತು 35 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 3 ಅರ್ಧ ಶತಕಗಳ ಸಹಾಯದಿಂದ 815 ರನ್, ODIಗಳಲ್ಲಿ ಒಂದು ಅರ್ಧ ಶತಕದೊಂದಿಗೆ 206 ರನ್ ಮತ್ತು ಟಿ20 ಅಂತರಾಷ್ಟ್ರೀಯ ಸ್ವರೂಪದಲ್ಲಿ ಒಟ್ಟು 158 ರನ್ ಗಳಿಸಿದ್ದಾರೆ. ಇದಲ್ಲದೆ ಟೆಸ್ಟ್‌ನಲ್ಲಿ 47, ಏಕದಿನದಲ್ಲಿ 16 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ : IPL 2023 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಈ ಮಾರಕ ಬೌಲರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News