ಹುತಾತ್ಮ ಬಾಲಕ ಬಾಜಿ ರೌತ್ ರನ್ನು ಸ್ಮರಿಸಿದ ಸೆಹ್ವಾಗ್ಗೆ ಅಭಿನಂದನೆಗಳ ಸುರಿಮಳೆ

                         

Last Updated : Nov 15, 2017, 01:12 PM IST
ಹುತಾತ್ಮ ಬಾಲಕ ಬಾಜಿ ರೌತ್ ರನ್ನು ಸ್ಮರಿಸಿದ ಸೆಹ್ವಾಗ್ಗೆ ಅಭಿನಂದನೆಗಳ ಸುರಿಮಳೆ

ನವದೆಹಲಿ: ಭಾರತದ ಮಾಜಿ ಸ್ಪೋಟಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಆಗಾಗ ತಮ್ಮ ವ್ಯಂಗ್ಯಮಿಶ್ರಿತ ಟ್ವೀಟ್ ಮೂಲಕ ಟ್ವೀಟಾರ್ತಿಗಳನ್ನೂ  ಗಮನ ಸೆಳೆಯುತ್ತಲೇ ಇರುತ್ತಾರೆ. ಆದರೆ ಈ ಬಾರಿಗೆ ಗಂಭೀರ ವಿಚಾರವನ್ನು ಟ್ವೀಟ್ ಮಾಡುವುದರ ಮೂಲಕವಾಗಿ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದಾರೆ.
ನವಂಬರ್ 14 ದೇಶದಲ್ಲೆಡೆ ಪಂಡಿತ್ ನೆಹರುರವರ ಹುಟ್ಟುಹಬ್ಬವನ್ನು ರಾಷ್ಟ್ರೀಯ  ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇಂತಹ ಮಹತ್ವದ ದಿನದಂದು ಸೆಹ್ವಾಗ್ ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ಗುಂಡಿಗೆ ಹುತಾತ್ಮನಾದ ಬಾಲಕ ಬಾಜಿ ರೌತ್ ಕುರಿತಾಗಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

 

ಹಾಗಾದರೆ ಯಾರೀ ಹುತಾತ್ಮ ಬಾಲಕ ಬಾಜಿ ರೌತ್?

ಆ ಹುಡುಗ ಹುತಾತ್ಮನಾದಾಗ ಅವನಿಗೆ ಕೇವಲ 12 ವರ್ಷ  ವಯಸ್ಸು. ಒಂದು ಕಡೆ ಅವನ ಬಾಲ್ಯದ ಕಾಲಘಟ್ಟ, ಮತ್ತೊಂದೆಡೆ ಭಾರತ ಸ್ವಾತಂತ್ರ ಸಂಗ್ರಾಮ ಉತ್ತುಂಗದಲ್ಲಿದ್ದಂತ ಅವಧಿ. ಈ ತರುಣ ಬಾಲಕ  1938 ಅಕ್ಟೋಬರ್ 11 ರ ರಾತ್ರಿಯ ವೇಳೆ ಓಡಿಸ್ಸಾದ ಧೆಂಕಾನಲ್ಜಿಲ್ಲೆಯಲ್ಲಿರುವ ನಿಲಕಾಂತಪುರ ಘಾಟ  ಹತ್ತಿರುವ ಬ್ರಾಹ್ಮಣಿ ನದಿಯಲ್ಲಿ ಧೈರ್ಯದಿಂದ ಬ್ರಿಟಿಷರಿಗೆ ದೋಣಿ ಸವಾರಿಗೆ ನಿರಾಕರಿಸಿದ ಪರಿಣಾಮವಾಗಿ ಅವನ್ನು ಗುಂಡಿಟ್ಟು ಕೊಲ್ಲಲಾಯಿತು. ಬನಾರ್ ಸೇನಾ ಪ್ರಜಾಮಂಡಲದ ಕ್ರಿಯಾಶೀಲ ಸದಸ್ಯನಾಗಿದ್ದ ಈ ಬಾಲಕ ರಾತ್ರಿವೇಳೆಯಲ್ಲಿ ಈ ನದಿಗೆ ವೀಕ್ಷಕನಾಗಿದ್ದ. ಈತ ಬ್ರಿಟಿಷ್ ಪೋಲಿಸರು ದೋಣಿಯ ಮೂಲಕ ಅವರನ್ನು ಸಾಗಿಸಬೇಕೆಂದು ಕೇಳಿಕೊಂಡಾಗ ಸಾರಾಸಗಟಾಗಿ ಅವರ ಮನವಿಯನ್ನು ತಿರಸ್ಕರಿಸಿದನು. ಆ ಕಾರಣಕ್ಕಾಗಿ ಬಾಜಿ ರೌತ್ ನನ್ನು ಮತ್ತು ಇವನ ಜೊತೆಗೆ ಲಕ್ಷ್ಮಣ್ ಮಾಲಿಕ್, ಫಾಗು ಸಾಹುರನ್ನು ಗುಂಡಿಟ್ಟು ಕೊಲ್ಲಲಾಯಿತು.

ಬಾಜಿ ರೌತ್ ರ ತೆರೆಮರೆಯ ವ್ಯಕ್ತಿಯ ಇತಿಹಾಸವನ್ನು ಸೆಹ್ವಾಗ್ ತಮ್ಮ ಸರಣಿ ಟ್ವೀಟ್ ಗಳಲ್ಲಿ ಮಕ್ಕಳ ದಿನಾಚರಣೆಯ ದಿನದಂದು ಜನರಿಗೆ ಪರಿಚಯಿಸುವುದರ ಮೂಲಕ ಎಲ್ಲಡೆಯಿಂದ ಸೆಹ್ವಾಗ್ಗೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ. ಈ ಸೆಹ್ವಾಗರ ಟ್ವೀಟ್ ಗೆ ಮರು ಟ್ವೀಟ್ ಮಾಡಿರುವ ಕೇಂದ್ರ ಮಂತ್ರಿ ಧರ್ಮೇಂದ್ರ ಪ್ರಧಾನ್ "ಭಾರತದ ಕಿರಿಯ ಸ್ವಾತಂತ್ರ್ಯ ಹೋರಾಟಗಾರ ಬಾಜಿ ರೌತ್ ರ ಇತಿಹಾಸವನ್ನ್ನು ವಿವರವಾಗಿ ತಿಳಿಸಿಕೊಟ್ಟಿರುವುದಕ್ಕೆ ಇಡೀ ಒಡಿಯಾ ಸಮುದಾಯದ ಪರವಾಗಿ ನಿಮಗೆ ಧನ್ಯವಾದಗಳನ್ನು ಹೇಳಲಿಚ್ಚಿಸುತ್ತೇನೆ. ಬಾಜಿ ರೌತ್ ಓಡಿಸ್ಸಾದ ಹೆಮ್ಮೆ ಮತ್ತು ಹೆಗ್ಗುರುತು, ವೀರು ಇಂದು ಅವರ ಹೆಸರನ್ನು ಜಾಗತಿಕವಾಗಿ ಪ್ರಚಾರಗೊಳಿಸಿದ್ದಾರೆ" ಎಂದು ಟ್ವೀಟ್ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಓಡಿಸ್ಸಾದ ಮುಖ್ಯಮಂತ್ರಿ ನವೀನ ಪಟ್ನಾಯಕ್ ಸಹ ಬಾಜಿ ರೌತ್ ರ ಶೌರ್ಯ ಪರಾಕ್ರಮಗಳನ್ನು ಸ್ಮರಿಸಿದ್ದಕ್ಕಾಗಿ ಅವರಿಗೆ ಟ್ವೀಟ್ ಮೂಲಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

More Stories

Trending News