ಶ್ರೀಲಂಕಾ ಏಕದಿನ ಸರಣಿ: ಕೊಹ್ಲಿಗೆ ವಿಶ್ರಾಂತಿ,ರೋಹಿತ್ ಶರ್ಮಾಗೆ ನಾಯಕತ್ವದ ಹೊಣೆ

           

Last Updated : Nov 27, 2017, 05:55 PM IST
ಶ್ರೀಲಂಕಾ ಏಕದಿನ ಸರಣಿ: ಕೊಹ್ಲಿಗೆ ವಿಶ್ರಾಂತಿ,ರೋಹಿತ್ ಶರ್ಮಾಗೆ ನಾಯಕತ್ವದ ಹೊಣೆ  title=

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾದ  ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ನಾಯಕ  ವಿರಾಟ್ ಕೊಹ್ಲಿಗೆ ವಿಶ್ರಾಂತಿಯನ್ನು ನೀಡಲಾಗಿದೆ ಮತ್ತು ರೋಹಿತ್ ಶರ್ಮಾಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿದೆ.

ಡಿಸೆಂಬರ್ 10ರಿಂದ ಧರ್ಮಶಾಲಾದಲ್ಲಿ ಪ್ರಾರಂಭವಾಗಲಿರುವ ಮೂರು ಪಂದ್ಯಗಳ ಎಕದಿನ ಸರಣಿಗೆ ಕೊಹ್ಲಿಯವರಿಗೆ ವಿಶ್ರಾಂತಿ ನೀಡಲಾಗಿದೆ,ಇತ್ತೀಚಿಗೆ ಕೊಹ್ಲಿ  ಬಿಸಿಸಿಐನ ಬಿಡುವಿಲ್ಲದ ವೇಳಾಪಟ್ಟಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಅವರು ವಿದೇಶಿ ಪ್ರವಾಸದ ಸಂಧರ್ಭದಲ್ಲಿ ಆಟಗಾರಿಗೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಮತ್ತು ಕ್ರಿಕೆಟ್ ಅಭ್ಯಾಸ ಮಾಡಲು ಸ್ವಲ್ಪ ಕಾಲಾವಧಿ ಅಗತ್ಯವೆಂದು ಅಭಿಪ್ರಾಯಪಟ್ಟಿದ್ದರು

.
ಭಾರತವು 2018ರ ಜನವರಿ 5 ರಿಂದ ಫೆಬ್ರವರಿ 24ರವರೆಗೆ ಮೂರು ಟೆಸ್ಟ್ ,ಆರು ಏಕದಿನ ಪಂದ್ಯ ಮತ್ತು ಮೂರು T20 ಪಂದ್ಯಗಳನ್ನು ಆಡಲಿದ್ದು, ಆದ್ದರಿಂದ ಇಂತಹ ದೀರ್ಘವಾದ ವಿದೇಶಿ ಪ್ರವಾಸಕ್ಕೆ ಸಮಯ ಅಗತ್ಯವೆಂದಿದ್ದರು ಅಲ್ಲದೆ ಇನ್ನು ಮುಂದುವರೆದು ನನಗೆ ವಿಶ್ರಾಂತಿ ಅಗತ್ಯ ನಾನೇನು ರೋಬೋಟ್ ಅಲ್ಲ ಎಂದು ಕಟುವಾಗಿ ಬಿಸಿಸಿಐನ ನಡೆಯನ್ನು ಖಂಡಿಸಿದ್ದರು.

ಶ್ರೀಲಂಕಾ ವಿರುದ್ದದ ಏಕದಿನ ಸರಣಿಗೆ  ಭಾರತ ತಂಡ ಇಂತಿದೆ

ಭಾರತ ತಂಡ: ರೋಹಿತ್ ಶರ್ಮಾ (ನಾಯಕ) ಶಿಖರ್ ಧವನ್ ,ಆಜಿಂಕ್ಯ ರಹಾನೆ ,ಶ್ರೇಯಸ್ ಅಯ್ಯರ್ , ಮನೀಶ್ ಪಾಂಡೆ,ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್ ,ಕುಲದೀಪ್ ಯಾದವ್ ,ಯುಜ್ವೆಂದ್ರಾ ಚಾಹಲ್,ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಸಿದ್ಧಾರ್ಥ್ ಕೌಲ್.    

Trending News