ಫೀಲ್ಡಿಂಗ್ ವೇಳೆ ಗಂಭೀರ ಗಾಯ: ಕೊಹ್ಲಿ ಬಳಿಕ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೂಡ ಟೆಸ್ಟ್’ನಿಂದ ಹೊರಕ್ಕೆ!

Shubman Gill News: ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಶುಭ್ಮನ್ ಗಿಲ್ ಅವರ ಬಲಗೈಯ ತೋರು ಬೆರಳಿಗೆ ಗಾಯವಾಗಿತ್ತು. ಆದರೆ, ಗಾಯ ಅಷ್ಟೊಂದು ಗಂಭೀರವಾಗಿರದ ಕಾರಣ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದರು.

Written by - Bhavishya Shetty | Last Updated : Feb 5, 2024, 11:48 AM IST
    • ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ
    • ಎರಡನೇ ಟೆಸ್ಟ್‌’ನಲ್ಲಿ ಗೆಲ್ಲಲು ಭಾರತ ಇಂಗ್ಲೆಂಡ್‌’ಗೆ 399 ರನ್‌ಗಳ ದೊಡ್ಡ ಗುರಿ ನೀಡಿದೆ
    • ಏಷ್ಯಾದಲ್ಲಿ ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಧಿಕ ಗುರಿಯೆಂದರೆ 395
ಫೀಲ್ಡಿಂಗ್ ವೇಳೆ ಗಂಭೀರ ಗಾಯ: ಕೊಹ್ಲಿ ಬಳಿಕ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಕೂಡ ಟೆಸ್ಟ್’ನಿಂದ ಹೊರಕ್ಕೆ!  title=
shubman gill

Shubman Gill News: 104 ರನ್‌’ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದ ಶುಭ್ಮನ್ ಗಿಲ್ ಟೀಂ ಇಂಡಿಯಾಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌’ಗೆ 399 ರನ್‌’ಗಳ ದೊಡ್ಡ ಗುರಿಯನ್ನು ನೀಡಿದೆ. ಆದರೆ ಅಷ್ಟರಲ್ಲಿ ಟೀಂ ಇಂಡಿಯಾಗೆ ದೊಡ್ಡ ಪೆಟ್ಟು ಬಿದ್ದಿದ್ದು, ಶತಕ ಸಿಡಿಸಿದ ಶುಭ್ಮನ್ ಗಿಲ್ ಗಾಯಗೊಂಡಿದ್ದಾರೆ.

ಇದನ್ನೂ ಓದಿ: Instant Dosa Recipe: ಕೇವಲ 5 ನಿಮಿಷದಲ್ಲಿ ದಿಢೀರ್‌ ದೋಸೆ ತಯಾರಿಸುವ ವಿಧಾನ

ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಶುಭ್ಮನ್ ಗಿಲ್ ಅವರ ಬಲಗೈಯ ತೋರು ಬೆರಳಿಗೆ ಗಾಯವಾಗಿತ್ತು. ಆದರೆ, ಗಾಯ ಅಷ್ಟೊಂದು ಗಂಭೀರವಾಗಿರದ ಕಾರಣ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದರು. ಆದರೆ, ಈಗ ತಂಡದ ಆಡಳಿತವು ಗಿಲ್‌’ಗೆ ವಿಶ್ರಾಂತಿ ನೀಡಲು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ನಡೆಯಲಿರುವ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ.

ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ 147 ಎಸೆತಗಳಲ್ಲಿ 104 ರನ್ ಗಳಿಸಿದರು. ಇದು ಅವರ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 10ನೇ ಶತಕ ಮತ್ತು ಟೆಸ್ಟ್ ವೃತ್ತಿಜೀವನದ ಮೂರನೇ ಶತಕವಾಗಿದೆ. ಈ ವೇಳೆ ಗಿಲ್ 11 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು.

ಎರಡನೇ ಟೆಸ್ಟ್‌’ನಲ್ಲಿ ಗೆಲ್ಲಲು ಭಾರತ ಇಂಗ್ಲೆಂಡ್‌’ಗೆ 399 ರನ್‌ಗಳ ದೊಡ್ಡ ಗುರಿ ನೀಡಿದೆ. ಮೂರನೇ ದಿನವಾದ ಭಾನುವಾರ ಎರಡನೇ ಇನಿಂಗ್ಸ್’ನಲ್ಲಿ ಟೀಂ ಇಂಡಿಯಾ 255 ರನ್’ಗಳಿಗೆ ಕುಸಿದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಯಶಸ್ವಿ ಜೈಸ್ವಾಲ್ ಅವರ ದ್ವಿಶತಕದ ನೆರವಿನಿಂದ 396 ರನ್ ಗಳಿಸಿತ್ತು. ಇದಾದ ಬಳಿಕ ಭಾರತದ ಬೌಲರ್‌’ಗಳು ಇಂಗ್ಲೆಂಡ್‌ನ್ನು 253 ರನ್‌ಗಳಿಗೆ ಕಟ್ಟಿಹಾಕಿದ್ದರು.

ಇಂಗ್ಲೆಂಡ್ ಮುಂದೆ ಕಠಿಣ ಗುರಿ

ಇಂಗ್ಲೆಂಡ್‌’ಗೆ 399 ರನ್‌’ಗಳ ಗುರಿ ತುಂಬಾ ಕಷ್ಟಕರವಾಗಲಿದೆ. ಇದಕ್ಕೂ ಮೊದಲು, ಜುಲೈ 2022ರಲ್ಲಿ ಎಜ್‌ಬಾಸ್ಟನ್‌’ನಲ್ಲಿ ನಡೆದ ಐದನೇ ಟೆಸ್ಟ್‌’ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 378 ರನ್‌’ಗಳ ಗುರಿಯನ್ನು ಸಾಧಿಸಿತ್ತು. ತವರಿನಲ್ಲಿ ಭಾರತದ ವಿರುದ್ಧ ಎದುರಾಳಿ ತಂಡ ಮಾಡಿದ ಅತ್ಯಧಿಕ ಯಶಸ್ವಿ ಚೇಸ್ ಅನ್ನು ವೆಸ್ಟ್ ಇಂಡೀಸ್ ದಾಖಲಿಸಿದೆ. 1987 ರಲ್ಲಿ, ವೆಸ್ಟ್ ಇಂಡೀಸ್ ತಂಡವು ನವದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ (ಈಗಿನ ಅರುಣ್ ಜೇಟ್ಲಿ ಸ್ಟೇಡಿಯಂ) 276/5 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. 2008 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ 387 ರನ್ ಗಳಿಸಿದ ಭಾರತದ ಅತ್ಯಧಿಕ ಯಶಸ್ವಿ ಚೇಸಿಂಗ್ ದಾಖಲೆಯಾಗಿದೆ.

ಇದನ್ನೂ ಓದಿ: ಬಾಲಿವುಡ್‌ಗೆ ಜೋಗಿ ಪೇಮ್ ಎಂಟ್ರೀ?‌ ಸಲ್ಲುಗೆ ಸ್ಯಾಂಡಲ್‌ವುಡ್‌ ಡೈರೆಕ್ಟರ್‌ನಿಂದ ಆಕ್ಷನ್‌ ಕಟ್!

ಅಂದಹಾಗೆ ಏಷ್ಯಾದಲ್ಲಿ ನಾಲ್ಕನೇ ಇನ್ನಿಂಗ್ಸ್‌’ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಧಿಕ ಗುರಿಯೆಂದರೆ 395, ಇದನ್ನು ವೆಸ್ಟ್ ಇಂಡೀಸ್ 2021 ರಲ್ಲಿ ಚಿತ್ತಗಾಂಗ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ದಾಖಲಿಸಿತ್ತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News