ಪಾರ್ವತಿ, ಪರಮೇಶ್ವರರ ಕಲ್ಯಾಣ ನಡೆದ ಈ ಪವಿತ್ರ ನೆಲದಲ್ಲಿ ಈಗಲೂ ಉರಿಯುತ್ತಿದೆ ಹವನಕುಂಡ !ಜೀವನದಲ್ಲಿ ಒಮ್ಮೆ ಭೇಟಿ ನೀಡಲೇ ಬೇಕಾದ ದೇವಾಲಯವಿದು !

ಈ ಗೌರಿ ಕುಂಡ ಈಗಿನ ಉತ್ತರಾಖಂಡ ರಾಜ್ಯದಲ್ಲಿದೆ. ಯಾವ ಸ್ಥಳದಲ್ಲಿ ಪಾರ್ವತಿ-ಪರಮೇಶ್ವರರ ವಿವಾಹವಾಗಿತ್ತೋ, ಆ ಸ್ಥಳದಲ್ಲೀಗ ತ್ರಿಯುಗ ನಾರಾಯಣ ಮಂದಿರವಿದೆ. 

Written by - Ranjitha R K | Last Updated : Nov 25, 2024, 04:26 PM IST
  • ನಮ್ಮ ಧರ್ಮ ಗ್ರಂಥಗಳಲ್ಲಿ ಹೇಳಿರುವ ಪ್ರತಿಯೊಂದಕ್ಕೂ ಘಟನೆಗೂ ಸಾಕ್ಷ್ಯಗಳು ಸಿಗುತ್ತವೆ.
  • ಆಸ್ತಿಕರಿಗೆ ಅದು ಪರಮ ಶ್ರದ್ದೆಯ ವಿಚಾರ.
  • ಇದು ಪಾರ್ವತಿ ಪರಮೇಶ್ವರರ ಕಲ್ಯಾಣ ನಡೆದ ಪವಿತ್ರ ನೆಲ
ಪಾರ್ವತಿ, ಪರಮೇಶ್ವರರ ಕಲ್ಯಾಣ ನಡೆದ ಈ ಪವಿತ್ರ ನೆಲದಲ್ಲಿ ಈಗಲೂ ಉರಿಯುತ್ತಿದೆ ಹವನಕುಂಡ !ಜೀವನದಲ್ಲಿ ಒಮ್ಮೆ  ಭೇಟಿ ನೀಡಲೇ ಬೇಕಾದ ದೇವಾಲಯವಿದು !  title=

ನಮ್ಮ ಧರ್ಮ ಗ್ರಂಥಗಳಲ್ಲಿ ಹೇಳಿರುವ ಪ್ರತಿಯೊಂದಕ್ಕೂ ಘಟನೆಗೂ ಸಾಕ್ಷ್ಯಗಳು ಸಿಗುತ್ತವೆ. ಆಸ್ತಿಕರಿಗೆ ಅದು ಪರಮ ಶ್ರದ್ದೆಯ ವಿಚಾರ. ಶಿವ ಪಾರ್ವತಿ ಕಲ್ಯಾಣ ನಡೆದಿದೆ ಎನ್ನುವುದಕ್ಕೂ ಸಾಕ್ಷಿಯಿದೆ. ಹಾಗಾದರೆ, ಶಿವ-ಪಾರ್ವತಿ ಕಲ್ಯಾಣವಾಗಿದ್ದು ಎಲ್ಲಿ? ಮಾತೆ ಪಾರ್ವತಿಯು  ಪರಮೇಶ್ವರನನ್ನು ಒಲಿಸಿಕೊಳ್ಳಲು ತಪಸ್ಸುಮಾಡಿದ ಆ ಸ್ಥಳ ಯಾವುದು? ಇಲ್ಲಿದೆ ನೋಡಿ ಮಾಹಿತಿ. 

ಇದು ಪಾರ್ವತಿ ಪರಮೇಶ್ವರರ ಕಲ್ಯಾಣ ನಡೆದ ಪವಿತ್ರ ನೆಲ:
ಪರಮೇಶ್ವರನ ಒಲುಮೆಗೆ ಪಾರ್ವತಿ ತಪಸ್ಸು ಮಾಡಿದ ಸ್ಥಳ ಈಗ ಗೌರಿಕುಂಡ ಎಂದು ಪ್ರಸಿದ್ದಿ ಪಡೆದಿದೆ. ಈ ಗೌರಿ ಕುಂಡ ಈಗಿನ ಉತ್ತರಾಖಂಡ ರಾಜ್ಯದಲ್ಲಿದೆ. ಯಾವ ಸ್ಥಳದಲ್ಲಿ ಪಾರ್ವತಿ-ಪರಮೇಶ್ವರರ ವಿವಾಹವಾಗಿತ್ತೋ, ಆ ಸ್ಥಳದಲ್ಲೀಗ ತ್ರಿಯುಗ ನಾರಾಯಣ ಮಂದಿರವಿದೆ. 

ಇದನ್ನೂ ಓದಿ : ಕಡೇ ಕಾರ್ತಿಕ ಸೋಮವಾರ: ಕೊಂಗಳ್ಳಿ ಬೆಟ್ಟದಲ್ಲಿ ಪುರುಷ ಭಕ್ತಸಾಗರ!! ಮಾದಪ್ಪನ ಬೆಟ್ಟದಲ್ಲಿ ಮಹಾಜ್ಯೋತಿಗೆ ಕ್ಷಣಗಣನೆ

ಈಗಲೂ ಉರಿಯುತ್ತಿದೆ ಕಲ್ಯಾಣಕ್ಕೆ ಸಾಕ್ಷಿಯಾಗಿದ್ದ  ಅಗ್ನಿಕುಂಡ :
ತ್ರಿಯುಗ ನಾರಾಯಣದಲ್ಲಿ ಶಂಕರ-ಪಾರ್ವತಿ ಸತಿಪತಿಯರಾದರು ಎನ್ನುತ್ತದೆ  ನಮ್ಮ ಧರ್ಮ ಗ್ರಂಥ. ಅದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಂದು ಅಗ್ನಿ ಜ್ಯೋತಿ ನಿರಂತರ ಉರಿಯುತ್ತಿರುತ್ತದೆ. ಈ ಅಗ್ನಿ ತ್ರೇತಾಯುಗದಿಂದ ಆರಂಭವಾಗಿ ಇಲ್ಲಿಯವರೆಗೂ ಉರಿಯುತ್ತಲೇ ಇದೆ ಎಂದು ಹೇಳುತ್ತಾರೆ. ಇದು ಶಿವಪಾರ್ವತಿ ಕಲ್ಯಾಣ ನಡೆದ ಹವನ ಕುಂಡ ಎಂದು ಹೇಳಲಾಗುತ್ತದೆ.ಇದೇ ಹವನಕುಂಡದಲ್ಲಿ ಅಗ್ನಿದೇವನನ್ನೇ ಸಾಕ್ಷಿಯಾಗಿಟ್ಟುಕೊಂಡು ಪಾರ್ವತಿ ಪರಮೇಶ್ವರರ ಕಲ್ಯಾಣವಾಗಿತ್ತಂತೆ.

ತಪಸ್ಸು ನಡೆದ ಸ್ಥಳವೇ ಈಗಿನ ಗೌರಿಕುಂಡ :
ಪೌರಾಣಿಕ ಕಥೆಗಳನ್ನುನೋಡುವುದಾದರೆ, ಪರ್ವತರಾಜನ ಮಗಳಾಗಿ ಪಾರ್ವತಿ  ಜನ್ಮ ತಳೆಯುತ್ತಾಳೆ. ಈ ಜನ್ಮದಲ್ಲಿ ಶಿವನನ್ನು ವರಿಸಲು ಪಾರ್ವತಿ ಕಠಿಣ ತಪಸ್ಸು ಮತ್ತು ಧ್ಯಾನ ದಲ್ಲಿ ತೊಡಗುತ್ತಾರೆ. ಯಾವ ಸ್ಥಳದಲ್ಲಿ ಪರಮೇಶ್ವರನನ್ನು ಒಲಿಸಲು ಪಾರ್ವತಿ ತಪಸ್ಸು ಮಾಡಿದರೋ, ಆ ಸ್ಥಳ ಇಂದು ಗೌರಿ ಕುಂಡವೆಂದು ಹೆಸರು ಪಡೆದಿದೆ. ತ್ರಿಯುಗನಾರಾಯಣಕ್ಕೆ ತೆರಳುವವರು ಗೌರಿಕುಂಡಕ್ಕೆ ಬಂದು ದರ್ಶನ ಪಡೆಯುತ್ತಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ತ್ರಿಯುಗನಾರಾಯಣ ಹಳ್ಳಿಯಲ್ಲಿದೆ ಮೂರು ಕುಂಡ :
ಮಂದಾಕಿನಿ, ಸೋನ ಮತ್ತು ಗಂಗಾ ಈ ತ್ರಿವೇಣಿ ಸಂಗಮದಲ್ಲಿದೆ ತ್ರಿಯುಗ ನಾರಾಯಣ ಹಳ್ಳಿ. ಈ ಮದುವೆಗೆ ದೇವಾದಿದೇವತೆಗಳೆಲ್ಲಾ ಬಂದಿದ್ದರಂತೆ. ಅವರೆಲ್ಲಾ ಇದೇ  ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರಂತೆ. ಈಗಲೂ ಇಲ್ಲಿ ನೀರಿನ ಮೂರು  ಕುಂಡಗಳಿರುವುದು ನೋಡಬಹುದು. ಒಂದನ್ನು ರುದ್ರಕುಂಡ, ಮತ್ತೊಂದು ವಿಷ್ಣು ಕುಂಡ ಮತ್ತು ಮೂರನೆಯದ್ದನ್ನು ಬ್ರಹ್ಮ ಕುಂಡ ಎಂದು ಕರೆಯಲಾಗುತ್ತದೆ. ಈ ಮೂರೂ ಕುಂಡಗಳಿಗೆ ಸರಸ್ವತಿ ಕುಂಡದಿಂದ  ಜಲಧಾರೆ ಬಂದು ಸೇರುತ್ತದೆ.

ಈ ಕುಂಡದಿಂದ  ಸ್ನಾನಮಾಡಿದರೆ, ಸಂತಾನವಿಲ್ಲದವರಿಗೆ ಸಂತಾನ ಭಾಗ್ಯವಾಗುತ್ತದೆ ಎಂದು ಹೇಳುತ್ತಾರೆ. ಇದೇ ಸ್ಥಳದಲ್ಲಿ ಮಹಾವಿಷ್ಣು ವಾಮನ ಅವತಾರ ತಳೆದು ಬಲೀಂದ್ರನನ್ನು ಮೆಟ್ಟಿದ ಎಂದೂ ಹೇಳಲಾಗುತ್ತದೆ.ಕಥೆ, ಪ್ರತೀತಿಗಳು ಯಾವುದೇ ಇರಲಿ, ಈ ಸ್ಥಳಗಳು ಈಗಲೂ ಹೆಸರುವಾಸಿ. ಸಾಕಷ್ಟು ಭಕ್ತರು ಇಲ್ಲಿಗೆ ಬರುತ್ತಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News