RCB ಸೋಲಿಗೆ ಕಾರಣನಾದ SRH ಟೀಂನ ಈ 21 ವರ್ಷದ ಯುವ ಬ್ಯಾಟ್ಸ್‌ಮನ್!

ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯುವ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾಗೆ ಮೊದಲ ಭಾರಿ ಅವಕಾಶ ನೀಡಲಾಯಿತು. ಇದನ್ನು ಸಂಪೂರ್ಣ ಬಳಸಿಕೊಂಡು ಅಭಿಷೇಕ್, ನಾನು ಯಾವಾಗಲೂ ಈ ಸ್ಥಾನದಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. 

Written by - Channabasava A Kashinakunti | Last Updated : Apr 24, 2022, 05:42 PM IST
  • ಆರ್‌ಸಿಬಿ ವಿರುದ್ಧ ಸ್ಫೋಟಕ ಇನ್ನಿಂಗ್ಸ್‌ ಆಡಿದೆ
  • ಐಪಿಎಲ್ 2022 ರಲ್ಲಿ ಅತ್ಯುತ್ತಮ ಪ್ರದರ್ಶನ
  • SRH ತಂಡ ಆತ್ಮವಿಶ್ವಾಸ ತೋರಿತು
RCB ಸೋಲಿಗೆ ಕಾರಣನಾದ SRH ಟೀಂನ ಈ 21 ವರ್ಷದ ಯುವ ಬ್ಯಾಟ್ಸ್‌ಮನ್! title=

Abhishek Sharma Innings vs RCB : ಐಪಿಎಲ್ 2022 ರ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (SRH) ಭರ್ಜರಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲರ್‌ಗಳ ಬೌಲಿಂಗ್ ದಾಳಿಗೆ ಬೆಂಗಳೂರು ಟೀಂ 68 ರನ್‌ಗಳಿಗೆ ಆಲೌಟ್ ಆಯ್ತು. ಬೌಲಿಂಗ್ ಬಳಿಕ ಹೈದರಾಬಾದ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯುವ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮಾಗೆ ಮೊದಲ ಭಾರಿ ಅವಕಾಶ ನೀಡಲಾಯಿತು. ಇದನ್ನು ಸಂಪೂರ್ಣ ಬಳಸಿಕೊಂಡು ಅಭಿಷೇಕ್, ನಾನು ಯಾವಾಗಲೂ ಈ ಸ್ಥಾನದಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. 

ಆರ್‌ಸಿಬಿ ವಿರುದ್ಧ ಸ್ಫೋಟಕ ಇನ್ನಿಂಗ್ಸ್‌ ಆಡಿದೆ

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಗೆಲುವಿಗೆ 20 ಓವರ್‌ಗಳಲ್ಲಿ ಕೇವಲ 69 ರನ್‌ಗಳ ಅಗತ್ಯವಿತ್ತು. ಗುರಿಯು ತುಂಬಾ ಚಿಕ್ಕದಾಗಿತ್ತು. ಅದನ್ನ ಬೆನ್ನಟ್ಟಲು 21 ವರ್ಷದ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತೆಗೆದುಕೊಂಡಿದ್ದು ಕೇವಲ 8 ಓವರ್‌. ಅಭಿಷೇಕ್ ಶರ್ಮಾ ಕೇವಲ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಸ್ಫೋಟಕ ಆಟವಾಡಿ ಗೆಲುವು ತನ್ನದಾಗಿಸಿಕೊಂಡಿತ್ತು. 

ಇದನ್ನೂ ಓದಿ : ಕ್ರಿಕೆಟ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ: IPL ನೋಡಲು ಎಲ್ಲರಿಗೂ ಎಂಟ್ರಿ

ಐಪಿಎಲ್ 2022 ರಲ್ಲಿ ಅತ್ಯುತ್ತಮ ಪ್ರದರ್ಶನ

ಐಪಿಎಲ್ 2022 ರಲ್ಲಿ ಅಭಿಷೇಕ್ ಶರ್ಮಾ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇದುವರೆಗೆ 7 ಪಂದ್ಯಗಳಲ್ಲಿ 31.43 ಸರಾಸರಿಯಲ್ಲಿ 220 ರನ್ ಗಳಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಇನ್ನಿಂಗ್ಸ್‌ನ ನಂತರ ಅಭಿಷೇಕ್, 'ತಂಡದ ಗೆಲುವಿಗೆ ಕೊಡುಗೆ ನೀಡುವುದು ಅದ್ಭುತವಾಗಿದೆ. ನಾನು ನನ್ನ ಹೊಡೆತಗಳನ್ನು ಆಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಯಾವಾಗಲೂ ಈ ಸ್ಥಾನದಲ್ಲಿ ಆಡಲು ಬಯಸುತ್ತೇನೆ ಮತ್ತು ಈ ಅವಕಾಶಕ್ಕಾಗಿ ಕಾಯುತ್ತಿದ್ದೆ. ಹಾಗಾಗಿ ತೆರೆಯಲು ಕೇಳಿದಾಗ, ನಾನು ತುಂಬಾ ಉತ್ಸುಕನಾದೆ. ಬ್ರಿಯಾನ್ ಲಾರಾ ಮತ್ತು ಟಾಮ್ ಮೂಡಿ ಅವರಂತಹ ದಿಗ್ಗಜರಿಂದ ನಾನು ಸಾಕಷ್ಟು ಸಹಾಯವನ್ನು ಪಡೆಯುತ್ತಿದ್ದೇನೆ.

SRH ತಂಡ ಆತ್ಮವಿಶ್ವಾಸ ತೋರಿತು

2022 ರ ಐಪಿಎಲ್ ಮೆಗಾ ಹರಾಜಿನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ (SRH) 6.5 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಕೂಡ ಮೆಗಾ ಹರಾಜಿನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದವು. 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ತಮ್ಮ ಆಟದಿಂದ ಎಲ್ಲರ ಮನ ಗೆದ್ದಿದ್ದರು. ಅವರು ಚೆಂಡು ಮತ್ತು ಬ್ಯಾಟ್‌ನಿಂದ ಅದ್ಭುತಗಳನ್ನು ಮಾಡಿದರು. ಅಭಿಷೇಕ್ 2018 ರಿಂದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಅವರು 2019 ರಿಂದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಭಾಗವಾಗಿದ್ದಾರೆ, ಅದಕ್ಕೂ ಮೊದಲು ಅವರು ದೆಹಲಿಗಾಗಿ ಆಡಿದ್ದರು.

ಇದನ್ನೂ ಓದಿ : IPL 2022 ಹರಾಜಿನಲ್ಲಿ ಈ 3 ಆಟಗಾರರನ್ನು ಕೈಬಿಟ್ಟಿದಕ್ಕೆ 'ಮುಂಬೈ'ಗೆ ಈ ಕೆಟ್ಟ ಪರಿಸ್ಥಿತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News