RCB ಆಟಗಾರನಿಗೆ ಟಿ20 ನಾಯಕತ್ವ… ಅಂದು ಏಷ್ಯಾಕಪ್-ವಿಶ್ವಕಪ್’ನಿಂದ ಹೊರಬಿದ್ದಿದ್ದ ಸ್ಪಿನ್ನರ್’ಗೆ ಕ್ಯಾಪ್ಟನ್ಸಿ ಪಟ್ಟ

Vanindu Hasaranga, Sri Lanka Cricket: ಜಿಂಬಾಬ್ವೆ ವಿರುದ್ಧದ ತವರಿನಲ್ಲಿ ನಡೆಯಲಿರುವ ವೈಟ್ ಬಾಲ್ ಸರಣಿಯಲ್ಲಿ ಕುಸಲ್ ಮೆಂಡಿಸ್ ಏಕದಿನ ನಾಯಕರಾಗಿ ಮತ್ತು ವನಿಂದು ಹಸರಂಗ ಟಿ20 ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

Written by - Bhavishya Shetty | Last Updated : Dec 30, 2023, 05:34 PM IST
    • ODI ಸರಣಿ ಮತ್ತು T20 ಅಂತರಾಷ್ಟ್ರೀಯ ಸರಣಿಗಾಗಿ ಶ್ರೀಲಂಕಾ ಪ್ರವಾಸ
    • ವೈಟ್ ಬಾಲ್ ಸರಣಿಯು ಜನವರಿ 6 ರಿಂದ ಜನವರಿ 18 ರವರೆಗೆ ನಡೆಯಲಿದೆ.
    • ಚರಿತ್ ಅಸಲಂಕಾ ಏಕದಿನ ಮತ್ತು ಟಿ20 ಉಪನಾಯಕ
RCB ಆಟಗಾರನಿಗೆ ಟಿ20 ನಾಯಕತ್ವ… ಅಂದು ಏಷ್ಯಾಕಪ್-ವಿಶ್ವಕಪ್’ನಿಂದ ಹೊರಬಿದ್ದಿದ್ದ ಸ್ಪಿನ್ನರ್’ಗೆ ಕ್ಯಾಪ್ಟನ್ಸಿ ಪಟ್ಟ title=
Vanindu Hasaranga

Vanindu Hasaranga, Sri Lanka Cricket: ಜಿಂಬಾಬ್ವೆ ತಂಡವು ಮೂರು ಪಂದ್ಯಗಳ ODI ಸರಣಿ ಮತ್ತು T20 ಅಂತರಾಷ್ಟ್ರೀಯ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ಮತ್ತು ಜಿಂಬಾಬ್ವೆ ನಡುವಿನ ಈ ಆರು ಪಂದ್ಯಗಳ ವೈಟ್ ಬಾಲ್ ಸರಣಿಯು ಜನವರಿ 6 ರಿಂದ ಜನವರಿ 18 ರವರೆಗೆ ನಡೆಯಲಿದೆ.

ಇದನ್ನೂ ಓದಿ: ಕ್ರಿಕೆಟ್‌ ಪಂದ್ಯದ ನಡುವೆ ಸ್ಟೇಡಿಯಂನಲ್ಲಿಯೇ "ಪ್ರೇಮಿಗಳ ಕುಚುಕುಚು"..! ಪ್ರೇಕ್ಷಕರಿಗೆ ಫ್ರೀ ಶೋ

ಜಿಂಬಾಬ್ವೆ ವಿರುದ್ಧದ ತವರಿನಲ್ಲಿ ನಡೆಯಲಿರುವ ವೈಟ್ ಬಾಲ್ ಸರಣಿಯಲ್ಲಿ ಕುಸಲ್ ಮೆಂಡಿಸ್ ಏಕದಿನ ನಾಯಕರಾಗಿ ಮತ್ತು ವನಿಂದು ಹಸರಂಗ ಟಿ20 ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಚರಿತ್ ಅಸಲಂಕಾ ಏಕದಿನ ಮತ್ತು ಟಿ20 ಉಪನಾಯಕರಾಗಿರುತ್ತಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಈ ಆದೇಶದ ಬೆನ್ನಲ್ಲೇ, ದಸುನ್ ಶನಕ ವೈಟ್-ಬಾಲ್ ಕ್ರಿಕೆಟ್‌ ನಾಯಕತ್ವ ಅಂತ್ಯವಾಗಿದೆ. ಆಗಸ್ಟ್‌’ನಲ್ಲಿ ಲಂಕಾ ಪ್ರೀಮಿಯರ್ ಲೀಗ್‌ ವೇಳೆ ಮಂಡಿರಜ್ಜು ಗಾಯದಿಂದ ವನಿಂದು ಹಸರಂಗ ಹೊರಗುಳಿದಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರನ್ನು ಏಷ್ಯಾ ಕಪ್ ಮತ್ತು 2023ರ ವಿಶ್ವಕಪ್‌’ನಿಂದ ಹೊರಗಿಡಲಾಗಿತ್ತು. ಆದರೆ ಇದೀಗ ನೇರವಾಗಿ ನಾಯಕತ್ವಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ.

ಲೆಗ್ ಸ್ಪಿನ್ ಬೌಲಿಂಗ್ ಆಲ್‌ ರೌಂಡರ್ ವನಿಂದು ಹಸರಂಗ ಈಗ ಜಿಂಬಾಬ್ವೆ ವಿರುದ್ಧದ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ಮರಳಲು ಸಿದ್ಧರಾಗಿದ್ದಾರೆ. 2024ರ ಪುರುಷರ T20 ವಿಶ್ವಕಪ್‌’ಗೆ ತಯಾರಿ ನಡೆಸುತ್ತಿರುವ ಬೆನ್ನಲ್ಲೇ ಶ್ರೀಲಂಕಾದ T20 ಸರಣಿಯಲ್ಲಿ ನಾಯಕತ್ವ ವಹಿಸಲಿದ್ದಾರೆ. T20 ವಿಶ್ವಕಪ್ 2024 ಜೂನ್ 4 ರಿಂದ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ ನಡೆಯಲಿದೆ.

ಇದನ್ನೂ ಓದಿ: BBK10: ದೊಡ್ಮನೆಗೆ ಕಾಲಿಟ್ಟ ಕಾಂತಾರ ಮೂಗುತಿ ಸುಂದರಿ! ಇದು ವೈಲ್ಡ್ ಕಾರ್ಡ್ ಎಂಟ್ರಿನಾ? 

ಜಿಂಬಾಬ್ವೆ ವಿರುದ್ಧದ ODI ಮತ್ತು T20I ಎರಡಕ್ಕೂ ಅಂತಿಮ ತಂಡವನ್ನು ಪ್ರಾಥಮಿಕ ಪಟ್ಟಿಯಿಂದ ಸರಿಯಾದ ಸಮಯದಲ್ಲಿ ಆಯ್ಕೆ ಮಾಡಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ (SLC) ತಿಳಿಸಿದೆ. ಆತಿಥೇಯರು ತಮ್ಮ ಎಲ್ಲಾ ವೈಟ್-ಬಾಲ್ ಪಂದ್ಯಗಳನ್ನು ಜಿಂಬಾಬ್ವೆ ವಿರುದ್ಧ 6 ರಿಂದ 18 ರವರೆಗೆ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಲಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News