IPL ಮಧ್ಯೆಯೇ ಕಾವ್ಯಾ ಮಾರನ್ ತಂಡಕ್ಕೆ ಬಿಗ್ ಶಾಕ್! ಸ್ಟಾರ್ ಬೌಲರ್ ಸಂಪೂರ್ಣ ಟೂರ್ನಿಯಿಂದಲೇ ಔಟ್!

Wanindu Hasaranga: ಹಸರಂಗ ಕುರಿತು ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಡಿ ಸಿಲ್ವಾ, 'ಹಿಮ್ಮಡಿಯಲ್ಲಿ ಊತವಿದ್ದು, ಚುಚ್ಚುಮದ್ದು ಹಾಕಿಕೊಂಡು ಆಟವಾಡುತ್ತಿದ್ದಾರೆ. ಹೀಗಾಗಿ ವಿಶ್ವಕಪ್‌’ಗೂ ಮುನ್ನ ಚೇತರಿಸಿಕೊಳ್ಳಲು ನಿರ್ಧರಿಸಿದ್ದು, ಈ ವರ್ಷ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ” ಎಂದಿದ್ದಾರೆ.

Written by - Bhavishya Shetty | Last Updated : Mar 31, 2024, 08:39 PM IST
    • ವನಿಂದು ಹಸರಂಗ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ
    • ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ
    • ಹಸರಂಗ ಕುರಿತು ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಡಿ ಸಿಲ್ವಾ
IPL ಮಧ್ಯೆಯೇ ಕಾವ್ಯಾ ಮಾರನ್ ತಂಡಕ್ಕೆ ಬಿಗ್ ಶಾಕ್! ಸ್ಟಾರ್ ಬೌಲರ್ ಸಂಪೂರ್ಣ ಟೂರ್ನಿಯಿಂದಲೇ ಔಟ್! title=
Wanindu Hasaranga

Wanindu Hasaranga: ಶ್ರೀಲಂಕಾದ T20 ನಾಯಕ ಮತ್ತು IPL 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಭಾಗವಾಗಿರುವ ವನಿಂದು ಹಸರಂಗ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇದು ಹೈದರಾಬಾದ್ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಎಡ ಹಿಮ್ಮಡಿಯ ಗಾಯದಿಂದಾಗಿ ಹಸರಂಗ ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಸಿಇಒ ಆಶ್ಲೇ ಡಿ ಸಿಲ್ವಾ ಇದನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ:  ಎಳನೀರಿಗೆ ಈ ಬೀಜ ಬೆರೆಸಿ ಕುಡಿದರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್ ಶುಗರ್! ಆದ್ರೆ ಕುಡಿಯುವ ಸಮಯ ಇದೇ ಆಗಿರಲಿ

ಹಸರಂಗ ಕುರಿತು ಮಾತನಾಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಡಿ ಸಿಲ್ವಾ, 'ಹಿಮ್ಮಡಿಯಲ್ಲಿ ಊತವಿದ್ದು, ಚುಚ್ಚುಮದ್ದು ಹಾಕಿಕೊಂಡು ಆಟವಾಡುತ್ತಿದ್ದಾರೆ. ಹೀಗಾಗಿ ವಿಶ್ವಕಪ್‌’ಗೂ ಮುನ್ನ ಚೇತರಿಸಿಕೊಳ್ಳಲು ನಿರ್ಧರಿಸಿದ್ದು, ಈ ವರ್ಷ ಐಪಿಎಲ್‌ನಿಂದ ಹೊರಗುಳಿಯಲಿದ್ದಾರೆ” ಎಂದಿದ್ದಾರೆ. ಐಪಿಎಲ್ ಹರಾಜಿನಲ್ಲಿ ಹಸರಂಗಾ ಅವರನ್ನು ಹೈದರಾಬಾದ್ 1.5 ಕೋಟಿಗೆ ಖರೀದಿಸಿತ್ತು.

ಇದನ್ನೂ ಓದಿ: ಮನೆಯ ಸುತ್ತ ಈ ಎಣ್ಣೆ ಚೆಲ್ಲಿದರೆ ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!

ಟಿ20 ಮಾದರಿಯಲ್ಲಿ ಹಸರಂಗ ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಇದುವರೆಗೆ 172 ಟಿ20 ಪಂದ್ಯಗಳನ್ನು ಆಡಿದ್ದು, 241 ವಿಕೆಟ್‌’ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ವರೂಪದಲ್ಲಿ ಅತ್ಯುತ್ತಮ ಸ್ಪೆಲ್ 9 ರನ್‌ಗಳಿಗೆ 6 ವಿಕೆಟ್‌’ಗಳು. ಬೌಲಿಂಗ್ ಮಾತ್ರವಲ್ಲ, ಈ ಮಾದರಿಯಲ್ಲಿ ಬ್ಯಾಟ್‌’ನಿಂದಲೂ ಅದ್ಭುತಗಳನ್ನು ಮಾಡಿದ್ದಾರೆ. ಟಿ20 ಮಾದರಿಯಲ್ಲಿ 2010ರ ರನ್‌ಗಳನ್ನು ಅವರ ಹೆಸರಿನಲ್ಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News