T20 World Cup 2021: ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಬದಲಾವಣೆ! ಇಂದಿನ ಪಂದ್ಯದಲ್ಲಿ ಇದು ಟೀಮ್ ಇಂಡಿಯಾದ ಪ್ಲೇಯಿಂಗ್ 11 !

T20 World Cup 2021:  ಸತತ ಎರಡು ಸೋಲಿನ ನಂತರ ಟೀಂ ಇಂಡಿಯಾ ಇಂದು ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ರಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಕಾಣಬಹುದು.  

Written by - Yashaswini V | Last Updated : Nov 3, 2021, 09:02 AM IST
  • ಇಂದು ಭಾರತ ಅಫ್ಘಾನಿಸ್ತಾನವನ್ನು ಎದುರಿಸಲಿದೆ
  • ಟೀಂ ಇಂಡಿಯಾದ ಪ್ಲೇಯಿಂಗ್ 11 ಹೀಗಿರುತ್ತದೆ
  • ವಿರಾಟ್ ಈ ದೊಡ್ಡ ಬದಲಾವಣೆಗಳನ್ನು ಮಾಡಲಿದ್ದಾರೆ
T20 World Cup 2021: ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಬದಲಾವಣೆ! ಇಂದಿನ ಪಂದ್ಯದಲ್ಲಿ ಇದು ಟೀಮ್ ಇಂಡಿಯಾದ ಪ್ಲೇಯಿಂಗ್ 11 ! title=
T20 World Cup 2021

T20 World Cup 2021: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್ ಗಳ ಸೋಲು ಎದುರಿಸಬೇಕಾಯಿತು. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳಿಂದ ಸೋತಿದ್ದ ಭಾರತ ತಂಡಕ್ಕೆ ಇದು ಸತತ ಎರಡನೇ ಸೋಲು. ಇದೀಗ ಟೀಂ ಇಂಡಿಯಾ ಕೊನೆಯ ಭರವಸೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಬೇಕಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಹೊಡೆತ ತಿಂದಿರುವ ಭಾರತ ಇಂದಿನ ಪಂದ್ಯದಲ್ಲಿ ಪ್ಲೇಯಿಂಗ್ 11ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೆಲವು ದೊಡ್ಡ ಬದಲಾವಣೆಗಳನ್ನು ಮಾಡಲು ಸಜ್ಜಾಗಿದೆ.

ರೋಹಿತ್ ಜೊತೆಗೆ ಇಶಾನ್ ಓಪನರ್ ಆಗಿರಲ್ಲ :
ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಪ್ಲೇಯಿಂಗ್ XI (Team India Playing XI) ಅನ್ನು ಪ್ರಕಟಿಸಿಲ್ಲ. ಆದರೆ ಕಳೆದ ಪಂದ್ಯದ ವೈಫಲ್ಯದ ನಂತರ, ಕೆ.ಎಲ್. ರಾಹುಲ್ ಅವರೊಂದಿಗೆ ರೋಹಿತ್ ಶರ್ಮಾ ಮಾತ್ರ ಓಪನಿಂಗ್ ಮಾಡಲು ಬರುತ್ತಾರೆ ಎಂಬುದು ಖಚಿತವಾಗಿದೆ. ಅದೇ ಸಮಯದಲ್ಲಿ ಇಶಾನ್ ಕಿಶನ್ ಮಧ್ಯಮ ಕ್ರಮಾಂಕಕ್ಕೆ ಶಿಫ್ಟ್ ಆಗಲಿದ್ದಾರೆ. ರೋಹಿತ್ ಮತ್ತು ಕೆಎಲ್ ರಾಹುಲ್ ಓಪನಿಂಗ್‌ಗೆ ಫಿಟ್ ಆಗಿದ್ದರೆ, ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಮೂರನೇ ಸ್ಥಾನಕ್ಕೆ ಇಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ 4ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಐದನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಆಡಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ- Khel Ratna: ನೀರಜ್ ಚೋಪ್ರಾ ಸೇರಿದಂತೆ 12 ಆಟಗಾರರಿಗೆ ಖೇಲ್ ರತ್ನ, ಶಿಖರ್ ಧವನ್‌ಗೆ ಅರ್ಜುನ ಪ್ರಶಸ್ತಿ

ಆಲ್‌ರೌಂಡರ್‌ಗಳಲ್ಲಿ ಬದಲಾವಣೆಗೆ ಅವಕಾಶವಿಲ್ಲ:
ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್‌ಗೆ ಆಲ್‌ರೌಂಡರ್‌ಗಳಾಗಿ ಮತ್ತೊಮ್ಮೆ ಅವಕಾಶ ನೀಡಬಹುದು. ನ್ಯೂಜಿಲೆಂಡ್ ಪಂದ್ಯದಂತೆ ಹಾರ್ದಿಕ್ ಇಂದು ಬೌಲಿಂಗ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು. ಇದು ಆಗದಿದ್ದರೆ ವಿರಾಟ್ ಕೊಹ್ಲಿ (Virat Kohli) ಆರನೇ ಬೌಲರ್ ಆಗಿ ಜವಾಬ್ದಾರಿ ವಹಿಸಿಕೊಳ್ಳಬಹುದು. ನ್ಯೂಜಿಲೆಂಡ್ ವಿರುದ್ಧ ಹಾರ್ದಿಕ್ ಎಸೆತಗಳು ವಿಶೇಷ ಏನನ್ನೂ ಮಾಡದಿದ್ದರೂ, ಬಹಳ ಸಮಯದ ನಂತರ ಅವರ ಬೌಲಿಂಗ್ ಅನ್ನು ನೋಡಿ ಅಭಿಮಾನಿಗಳು ಸಂತೋಷಪಟ್ಟರು. 

ಚಕ್ರವರ್ತಿ ಔಟ್ ಆಗುವುದು ಖಚಿತ :
ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸ್ಪೆಷಲಿಸ್ಟ್ ವೇಗದ ಬೌಲರ್‌ಗಳಾಗಿ ತಂಡದಲ್ಲಿ ಉಳಿಯುತ್ತಾರೆ, ಅವರಿಗೆ ಶಾರ್ದೂಲ್ ಠಾಕೂರ್ ಅವರ ಬೆಂಬಲವೂ ಸಿಗುತ್ತದೆ. ಇನ್ನು ಸ್ಪಿನ್ನರ್ ಬಗ್ಗೆ ಹೇಳುವುದಾದರೆ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಾಪಸಾತಿ ಈಗ ಫಿಕ್ಸ್ ಆಗಿದೆ. ವಾಸ್ತವವಾಗಿ ಇದು ವರುಣ್ ಚಕ್ರವರ್ತಿ ಮೊದಲ ಎರಡು ಪಂದ್ಯಗಳಲ್ಲಿ ಏನನ್ನೂ ಮಾಡಲು ಸಾಧ್ಯವಾಗದ ಕಾರಣ ಚಕ್ರವರ್ತಿ ಇದುವರೆಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅದೇ ಸಮಯದಲ್ಲಿ ರವೀಂದ್ರ ಜಡೇಜಾ ಕೂಡ ಸ್ಪಿನ್ ಬೌಲಿಂಗ್‌ಗೆ ಹಾಜರಾಗಲಿದ್ದಾರೆ.  

ಇದನ್ನೂ ಓದಿ- World Boxing Championship: ಸೆಮಿಫೈನಲ್ ತಲುಪಿದ ಆಕಾಶ್ ಕುಮಾರ್, ಮೆಡಲ್ ಪಕ್ಕಾ

ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಇಶಾನ್ ಕಿಶನ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News