T20 World Cup 2022: DLS ನಿಯಮದಡಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ಗೆ ಭರ್ಜರಿ ಗೆಲುವು..!

ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ ಅಂತರದಲ್ಲಿ ಸೋಲಿಸಿದ್ದ ಐರ್ಲೆಂಡ್, ಇದೀಗ ಸೂಪರ್ 12ರ ಪಂದ್ಯದಲ್ಲೂ ಅದ್ಬುತ ಪ್ರದರ್ಶನ ತೋರಿದೆ.

Written by - Puttaraj K Alur | Last Updated : Oct 26, 2022, 05:34 PM IST
  • ಬಲಿಷ್ಠ ಇಂಗ್ಲೆಂಡ್ ವಿರುದ್ಧ 5 ರನ್‍ಗಳ ಭರ್ಜರಿ ಜಯ ಸಾಧಿಸಿದ ಐರ್ಲೆಂಡ್
  • ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ ಎದುರು ಸೋತ ಆಂಗ್ಲರು
  • ಬಲಿಷ್ಠ ತಂಡವನ್ನು ಮಣಿಸಿ ಸಂಭ್ರಮಾಚರಣೆ ಮಾಡಿದ ಐರ್ಲೆಂಡ್ ಆಟಗಾರರು
T20 World Cup 2022: DLS ನಿಯಮದಡಿ ಇಂಗ್ಲೆಂಡ್ ವಿರುದ್ಧ ಐರ್ಲೆಂಡ್‌ಗೆ ಭರ್ಜರಿ ಗೆಲುವು..! title=
ಇಂಗ್ಲೆಂಡ್ ವಿರುದ್ಧ ಜಯ ಸಾಧಿಸಿದ ಐರ್ಲೆಂಡ್!

ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬುಧವಾರ ನಡೆದ ಟಿ-20 ವಿಶ್ವಕಪ್‍ನ ಗ್ರೂಪ್- A ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ 5 ರನ್‌ಗಳಿದ ಭರ್ಜರಿ ಗೆಲವು ಸಾಧಿಸಿದ ಐರ್ಲೆಂಡ್ ಸಂಭ್ರಮಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್‍ಗೆ  19.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 157 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ಐರ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ(62) ಆಕರ್ಷಕ ಅರ್ಧಶತಕ ಸಿಡಿಸಿದರು. ಲೊರ್ಕನ್ ಟುಕರ್(34), ಕರ್ಟಿಸ್ ಕ್ಯಾಂಫರ್(18), ಪಾಲ್ ಸ್ಟಿರ್ಲಿಂಗ್(14) ಮತ್ತು ಗರೆಥ್ ಡೆಲಾನಿ(ಅಜೇಯ 12) ರನ್ ಗಳಿಸಿದರು.

ಇದನ್ನೂ ಓದಿ: ಜೀವನದಲ್ಲಿ ಕಿಂಗ್ ಕೊಹ್ಲಿಯ ಈ 5 ಗುಣ ಅಳವಡಿಸಿಕೊಂಡ್ರೆ ಖಂಡಿತ ಯಶಸ್ಸು ಸಿಗುತ್ತಂತೆ..!

158 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‍ಗೆ ಮಳೆರಾಯಣ ಅಡ್ಡಿಯಾಯಿತು. ಇಂಗ್ಲೆಂಡ್ 14.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದ್ದಾಗ ಮಳೆ ಆರಂಭವಾಯಿತು. ಮಳೆ ನಿಂತ ಬಳಿಕವೂ ಔಟ್‌ಫೀಲ್ಡ್ ಒದ್ದೆಯಾಗಿದ್ದರಿಂದ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐರ್ಲೆಂಡ್ 5 ರನ್‌ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು.

ಅರ್ಹತಾ ಸುತ್ತಿನಲ್ಲಿ 2 ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು 9 ವಿಕೆಟ್ ಅಂತರದಲ್ಲಿ ಸೋಲಿಸಿದ್ದ ಐರ್ಲೆಂಡ್, ಇದೀಗ ಸೂಪರ್ 12ರ ಪಂದ್ಯದಲ್ಲೂ ಬಲಿಷ್ಠ ಇಂಗ್ಲೆಂಡ್ ಎದುರು ಅದ್ಬುತ ಪ್ರದರ್ಶನ ತೋರಿದೆ. ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ ಐರ್ಲೆಂಡ್ ಆಟಗಾರರು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದರು. ಇತ್ತ ಇಂಗ್ಲೆಂಡ್ ಆಟಗಾರರು DLS ನಿಯಮಕ್ಕೆ ಶಾಪ ಹಾಕಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕಾಲೆಳೆದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ರಿಷಬ್‌ ಪಂತ್‌ ಪ್ರೇಯಸಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News