T20 World Cup 2024: ಯಾರಾಗಲಿದ್ದಾರೆ ಲೀಡಿಂಗ್ ಬ್ಯಾಟ್ಸ್ಮನ್ ಹಾಗೂ ಬೌಲರ್...? ರಿಕ್ಕಿ ಪಾಟಿಂಗ್ ಹೆಸರಿಸಿದ ಆ ಆಟಗಾರರು ಯಾರು ಗೊತ್ತೇ?

ಟಿ೨೦ ವಿಶ್ವಕಪ್ ನಲ್ಲಿ ಲೀಡಿಂಗ್ ರನ್ ಸ್ಕೋರರ್ ಹಾಗೂ ಅತಿ ಹೆಚ್ಚು ವಿಕೆಟ್ ಕಬಳಿಸಬಲ್ಲ ಆಟಗಾರರ ಬಗ್ಗೆ ಈಗ ಆಸ್ಟ್ರೇಲಿಯಾದ ದಂತಕಥೆ ರಿಕ್ಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

Written by - Manjunath N | Last Updated : May 30, 2024, 06:52 PM IST
  • "ಟಿ೨೦ ವಿಶ್ವಕಪ್ ನಲ್ಲಿ ಮುಂಚೂಣಿಯಲ್ಲಿರುವ ರನ್ ಸ್ಕೋರರ್ ಪಟ್ಟಿಯಲ್ಲಿ ನನ್ನ ಆಯ್ಕೆ ಟ್ರಾವಿಸ್ ಹೆಡ್ ಆಗಿರುತ್ತದೆ.
  • ಕಳೆದ ಎರಡು ವರ್ಷಗಳಲ್ಲಿ ಅವರು ಕೆಂಪು-ಬಾಲ್ ಅಥವಾ ವೈಟ್-ಬಾಲ್ ಆಗಿರಲಿ,ಅವರು ನಿರ್ಭಯದಿಂದ ಕ್ರಿಕೆಟ್ ಆಡುತ್ತಿದ್ದಾರೆ ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.
  • ಈ ಬಾರಿಯ ಐಪಿಎಲ್ ನಲ್ಲಿ 191.55 ಸ್ಟ್ರೈಕ್ ರೇಟ್‌ನಲ್ಲಿ 567 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪರವಾಗಿ ಮಹತ್ತರ ಪಾತ್ರವನ್ನು ವಹಿಸಿದರು.
 T20 World Cup 2024: ಯಾರಾಗಲಿದ್ದಾರೆ ಲೀಡಿಂಗ್ ಬ್ಯಾಟ್ಸ್ಮನ್ ಹಾಗೂ ಬೌಲರ್...? ರಿಕ್ಕಿ ಪಾಟಿಂಗ್ ಹೆಸರಿಸಿದ ಆ ಆಟಗಾರರು ಯಾರು ಗೊತ್ತೇ? title=
file photo

ನವದೆಹಲಿ: ಟಿ೨೦ ವಿಶ್ವಕಪ್ ನಲ್ಲಿ ಲೀಡಿಂಗ್ ರನ್ ಸ್ಕೋರರ್ ಹಾಗೂ ಅತಿ ಹೆಚ್ಚು ವಿಕೆಟ್ ಕಬಳಿಸಬಲ್ಲ ಆಟಗಾರರ ಬಗ್ಗೆ ಈಗ ಆಸ್ಟ್ರೇಲಿಯಾದ ದಂತಕಥೆ ರಿಕ್ಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ- ಹಿಂದಿ ಟೀಚರ್ ನಿಂದ ಹೀನಾಯ ಕೃತ್ಯ: ನೊಂದ ಬಾಲಕನಿಗೆ 1 ಲಕ್ಷ ರೂ. ಪರಿಹಾರ

ಹೌದು, ಈಗ ರಿಕ್ಕಿ ಪಾಂಟಿಂಗ್ ಹೇಳಿರುವ ಭವಿಷ್ಯವಾಣಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಕಾರಣವಿಷ್ಟೇ ಅವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಆಗಲಿ ಅಥವಾ ರೋಹಿತ್ ಶರ್ಮಾ ಆಗಲಿ ಇಲ್ಲದೆ ಇರುವುದು.ಚುಟುಕು ಮಾದರಿಯ ವಿಶ್ವಕಪ್ ನಲ್ಲಿ ಭಾರತದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಇಂದಿಗೂ ಸಹ ಆ ದಾಖಲೆಗಳು ಅವರ ಹೆಸರಿನಲ್ಲಿವೆ.ಹಾಗಾಗಿ ಈ ಬಾರಿಯೂ ಸಹ ಅವರು ದಾಖಲೆಗಳನ್ನು ನಿರ್ಮಿಸಬಹುದು ಎನ್ನುವ ನಿರೀಕ್ಷೆ ಭಾರತೀಯ ಅಭಿಮಾನಿಗಳದ್ದು.ಆದರೆ ಈಗ ರಿಕ್ಕಿ ಪಾಂಟಿಂಗ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬದಲಾಗಿ ಟ್ರಾವೆಸ್ ಹೆಡ್ ಅತಿ ಹೆಚ್ಚು ರನ್ ಗಳಿಸುವ ಆಟಗಾರನಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್

"ಟಿ೨೦ ವಿಶ್ವಕಪ್ ನಲ್ಲಿ ಮುಂಚೂಣಿಯಲ್ಲಿರುವ ರನ್ ಸ್ಕೋರರ್ ಪಟ್ಟಿಯಲ್ಲಿ ನನ್ನ ಆಯ್ಕೆ ಟ್ರಾವಿಸ್ ಹೆಡ್ ಆಗಿರುತ್ತದೆ.ಕಳೆದ ಎರಡು ವರ್ಷಗಳಲ್ಲಿ ಅವರು ಕೆಂಪು-ಬಾಲ್ ಅಥವಾ ವೈಟ್-ಬಾಲ್ ಆಗಿರಲಿ,ಅವರು ನಿರ್ಭಯದಿಂದ ಕ್ರಿಕೆಟ್ ಆಡುತ್ತಿದ್ದಾರೆ ಎಂದು ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.ಈ ಬಾರಿಯ ಐಪಿಎಲ್ ನಲ್ಲಿ 191.55 ಸ್ಟ್ರೈಕ್ ರೇಟ್‌ನಲ್ಲಿ 567 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪರವಾಗಿ ಮಹತ್ತರ ಪಾತ್ರವನ್ನು ವಹಿಸಿದರು.

ಇನ್ನೂ ಅತಿ ಹೆಚ್ಚು ವಿಕೆಟ್ ತೆಗೆಯಬಲ್ಲಂತ ಬೌಲರ್ ಬಗ್ಗೆ ಮಾತನಾಡಿದ ರಿಕ್ಕಿ ಪಾಂಟಿಂಗ್ "ಟೂರ್ನಮೆಂಟ್‌ನಲ್ಲಿ ನನ್ನ ಪ್ರಮುಖ ವಿಕೆಟ್ ಟೇಕರ್ ಜಸ್‌ಪ್ರೀತ್ ಬುಮ್ರಾ ಆಗಿರುತ್ತಾರೆ. ಅವರು ಇದೀಗ ಅತ್ಯುತ್ತಮ ಐಪಿಎಲ್‌ನಿಂದ ಹೊರಬಂದಿದ್ದಾರೆ. ಅವರು ಹೊಸ ಚೆಂಡಿನೊಂದಿಗೆ ಏನೆಲ್ಲಾ ಮ್ಯಾಜಿಕ್ ಮಾಡಬಹುದು ಎನ್ನುವುದು ಗೊತ್ತಿದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News