ಯುಪಿ ಯೋಧಾಸ್‌ಗೆ ಶರಣಾದ ತಮಿಳು ತಲೈವಾಸ್

ಕಂಠೀರವ ಕ್ರೀಡಾಂಗಣದಲ್ಲಿ‌ ಇಂದು ನಡೆದ  ವಿವೋ ಪ್ರೋ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾಸ್‌ ತಂಡ ತಮಿಳು ತಲೈವಾಸ್‌ ವಿರುದ್ಧ 41-24 ಅಂತರದಲ್ಲಿ ಜಯ ಗಳಿಸಿತು.

Written by - VISHWANATH HARIHARA | Edited by - Manjunath N | Last Updated : Oct 23, 2022, 11:34 PM IST
  • ಎಂದಿನಂತೆ ಪ್ರದೀಪ್‌ ನರ್ವಾಲ್‌ (6) ಹಾಗೂ ಸುರೇಂದರ್‌ ಗಿಲ್‌ (4) ತಮ್ಮ ನೈಜ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ನೆರವಾದರು.
  • ತಮಿಳು ತಲೈವಾಸ್‌ ಪರ ಹಿಮಾಂಶು ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು.
  • ಆದರೆ ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿದ್ದು ತಲೈವಾಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.
ಯುಪಿ ಯೋಧಾಸ್‌ಗೆ ಶರಣಾದ ತಮಿಳು ತಲೈವಾಸ್ title=

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ‌ ಇಂದು ನಡೆದ  ವಿವೋ ಪ್ರೋ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಬಲಿಷ್ಠ ಯುಪಿ ಯೋಧಾಸ್‌ ತಂಡ ತಮಿಳು ತಲೈವಾಸ್‌ ವಿರುದ್ಧ 41-24 ಅಂತರದಲ್ಲಿ ಜಯ ಗಳಿಸಿತು.

ಇದನ್ನೂ ಓದಿ: Rohit Sharma Emotional Expression: ರಾಷ್ಟ್ರಗೀತೆ ಕೇಳುತ್ತಿದ್ದಂತೆ ಮೈದಾನದಲ್ಲೇ ಕಣ್ಣೀರು ಹಾಕಿದ ರೋಹಿತ್ ಶರ್ಮಾ! ವಿಡಿಯೋ ನೋಡಿ

ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮುನ್ನಡೆ ಕಂಡಿತ್ತು. ಅಶು ಸಿಂಗ್‌ (6) ಹಾಗೂ ಸುಮಿತ್‌ (7) ಟ್ಯಾಕಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು ಯೋಧಾಸ್‌ ಜಯದ ಹೈಲೈಟ್ಸ್‌ ಆಗಿತ್ತು. ಎಂದಿನಂತೆ ಪ್ರದೀಪ್‌ ನರ್ವಾಲ್‌ (6) ಹಾಗೂ ಸುರೇಂದರ್‌ ಗಿಲ್‌ (4) ತಮ್ಮ ನೈಜ ಆಟ ಪ್ರದರ್ಶಿಸಿ ತಂಡದ ಜಯಕ್ಕೆ ನೆರವಾದರು. ತಮಿಳು ತಲೈವಾಸ್‌ ಪರ ಹಿಮಾಂಶು ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಗಳಿಸಿದರು.ಆದರೆ ರೈಡಿಂಗ್‌ನಲ್ಲಿ ಸಂಪೂರ್ಣ ವಿಫಲವಾಗಿದ್ದು ತಲೈವಾಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.

ಇದನ್ನೂ ಓದಿ: Rohit Sharma: ಎಂಟು T20 ವಿಶ್ವಕಪ್ ನಲ್ಲಿ ಆಡಿದ ಟೀಂ ಇಂಡಿಯಾದ ಮೊದಲ ಸ್ಟಾರ್ ಆಟಗಾರ ಈತ!

ಪ್ರದೀಪ್‌ ನರ್ವಾಲ್‌ ದಾಖಲೆ:

ಸ್ಟಾರ್‌ ರೈಡರ್‌ ಪ್ರದೀಪ್‌ ನರ್ವಾಲ್‌ ಪ್ರೋ ಕಬಡ್ಡಿ ಇತಿಹಾದಲ್ಲೇ 1400 ರೈಡಿಂಗ್‌ ಅಂಕಗಳನ್ನು ಗಳಿಸುವ ಮೂಲಕ ಹೊಸ ಇತಿಹಾಸ ಬರೆದರು. ತಮಿಳು ತಲೈವಾಸ್‌ ವಿರುದ್ಧದ ಪಂದ್ಯದಲ್ಲಿ ಎರಡನೇ ಅಂಕ ಗಳಿಸುವ ಮೂಲಕ ಪ್ರದೀಪ್‌ ಈ ಹೊಸ ಮೈಲಿಗಲ್ಲು ದಾಟಿದರು. ಏಕಮುಖವಾಗಿ ನಡೆದ ಪಂದ್ಯದಲ್ಲಿ ಯುಪಿ ಯೋಧಾಸ್‌ ಪ್ರಥಮಾರ್ಧದಲ್ಲಿ 23-11 ಅಂತರದಲ್ಲಿ ಮೇಲುಗೈ ಸಾಧಿಸಿತು. ಯೋಧಾಸ್‌ ಟ್ಯಾಕಲ್‌ನಲ್ಲಿ 9 ಅಂಕಗಳನ್ನು ಗಳಿಸಿ ಎರಡು ಬಾರಿ ತಮಿಳು ತಲೈವಾಸ್‌ ಪಡೆಯನ್ನು ಆಲೌಟ್‌ ಮಾಡಿತು. ಆರಂಭದಲ್ಲೇ ಪ್ರದೀಪ್‌ ನರ್ವಾಲ್‌ ಅವರನ್ನು ಟ್ಯಾಕಲ್‌ನಲ್ಲಿ ಬಂಧಿಸುವ ಮೂಲಕ ತಮಿಳು ತಲೈವಾಸ್‌ ಉತ್ತಮ ಪ್ರದರ್ಶನ ತೋರುವ ಲಕ್ಷಣ ತೋರಿತ್ತು.ಆದರೆ ಪಂದ್ಯ ಸಾಗುತ್ತಿದ್ದಂತೆ ತನ್ನ ನೈಜ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News