Rohit Sharma: ಇತಿಹಾಸ ಸೃಷ್ಟಿಯ ಸನಿಹದಲ್ಲಿ ರೋಹಿತ್! ಧೋನಿ ಹಿಂದಿಕ್ಕಿ ವಿಶೇಷ ಮೈಲಿಗಲ್ಲು ಸಾಧಿಸ್ತಾರಾ ಹಿಟ್ ಮ್ಯಾನ್?

Rohit Sharma Milestone: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಜಾಗ್ ಟೆಸ್ಟ್’ನಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಅಷ್ಟೇ ಅಲ್ಲದೆ, ಈ ಒಂದು ವಿಷಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೂಡ ಹಿಂದಿಕ್ಕುವ ಅವಕಾಶವಿದೆ.

Written by - Bhavishya Shetty | Last Updated : Jan 31, 2024, 10:04 PM IST
    • ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ
    • ರೋಹಿತ್ ಶರ್ಮಾ ವೈಜಾಗ್ ಟೆಸ್ಟ್’ನಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ
    • ರೋಹಿತ್ ಶರ್ಮಾ ಇದುವರೆಗೆ 295 ಪಂದ್ಯಗಳನ್ನು ಗೆದ್ದಿದ್ದಾರೆ
Rohit Sharma: ಇತಿಹಾಸ ಸೃಷ್ಟಿಯ ಸನಿಹದಲ್ಲಿ ರೋಹಿತ್! ಧೋನಿ ಹಿಂದಿಕ್ಕಿ ವಿಶೇಷ ಮೈಲಿಗಲ್ಲು ಸಾಧಿಸ್ತಾರಾ ಹಿಟ್ ಮ್ಯಾನ್? title=
Rohit Sharma

Rohit Sharma Milestone: ಫೆಬ್ರವರಿ 2 ರಿಂದ ವಿಶಾಖಪಟ್ಟಣಂನ ಡಾ ವೈ ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಟೆಸ್ಟ್‌’ನಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 0-1 ಹಿನ್ನಡೆಯಲ್ಲಿದೆ.

ಇದನ್ನೂ ಓದಿ:  ಈ ರಾಶಿಯವರ ಜಾತಕದಲ್ಲಿ ಶ್ರೇಷ್ಠ ರಾಜಯೋಗ: ಇವರ ಪಾಲಾಗುವುದು ರಾಜವೈಭೋಗ… ಇನ್ನೇನಿದ್ದರೂ ಗೆಲುವಿನ ಓಟವೇ!

ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೈಜಾಗ್ ಟೆಸ್ಟ್’ನಲ್ಲಿ ಇತಿಹಾಸ ಸೃಷ್ಟಿಸುವ ಸನಿಹದಲ್ಲಿದ್ದಾರೆ. ಅಷ್ಟೇ ಅಲ್ಲದೆ, ಈ ಒಂದು ವಿಷಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೂಡ ಹಿಂದಿಕ್ಕುವ ಅವಕಾಶವಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದುವರೆಗೆ 295 ಪಂದ್ಯಗಳನ್ನು ಗೆದ್ದಿದ್ದಾರೆ. ಎಂಎಸ್ ಧೋನಿ ಕೂಡ 295 ಪಂದ್ಯಗಳನ್ನು ಗೆದ್ದಿದ್ದಾರೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದರೆ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಮೂರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹೆಸರು ಮೊದಲ ಸ್ಥಾನದಲ್ಲಿದೆ. ವಿರಾಟ್ ಕೊಹ್ಲಿ 313 ಪಂದ್ಯಗಳನ್ನು ಗೆದ್ದಿದ್ದರೆ, ಸಚಿನ್ ತೆಂಡೂಲ್ಕರ್ ಹೆಸರು ಎರಡನೇ ಸ್ಥಾನದಲ್ಲಿದೆ. ಅವರು 307 ಪಂದ್ಯಗಳನ್ನು ಗೆದ್ದಿದ್ದಾರೆ.

ಭಾರತದ ಪರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಆಟಗಾರರು

ವಿರಾಟ್ ಕೊಹ್ಲಿ- 313 ಗೆಲುವು

ಸಚಿನ್ ತೆಂಡೂಲ್ಕರ್- 307 ಗೆಲುವು

ರೋಹಿತ್ ಶರ್ಮಾ- 295 ಗೆಲುವು

ಎಂಎಸ್ ಧೋನಿ- 295 ಗೆಲುವು

ಯುವರಾಜ್ ಸಿಂಗ್- 227 ಗೆಲುವು

ಇದನ್ನೂ ಓದಿ:  ಅಡುಗೆ ಮನೆಯಲ್ಲಿರುವ ಕಾಫಿ ಪುಡಿ ಸಾಕು… ಬಿಳಿಕೂದಲನ್ನು ಕ್ಷಣದಲ್ಲೇ ಕಪ್ಪಾಗಿಸಬಹುದು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News