IND vs SA ODI: ಸೋತರೂ ದಾಖಲೆ ಬರೆದ ಟೀಂ ಇಂಡಿಯಾ: ಏಕದಿನ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಇವರೇ

ಆದರೆ ಸೋತರೂ ಸಹ ಟೀಂ ಇಂಡಿಯಾ ದಾಖಲೆ ಬರೆದಿದೆ. ಏಕದಿನ ಸರಣಿಯಲ್ಲಿ ವೃತ್ತಿಜೀವನದ ಅತ್ಯಧಿಕ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ ಭಾರತೀಯರ ಪಟ್ಟಿ ಹೀಗಿದೆ. 7 ಇನ್ನಿಂಗ್ಸ್ ಗಳ ಪರಿಗಣನೆಗೆ ತೆಗೆದುಕೊಂಡು ಈ ದಾಖಲೆಯ ಲೆಕ್ಕಾಚಾರ ಮಾಡಲಾಗಿದೆ.

Written by - Bhavishya Shetty | Last Updated : Oct 6, 2022, 11:33 PM IST
    • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡ ಟೀಂ ಇಂಡಿಯಾ
    • ಸೋತರೂ ಸಹ ಟೀಂ ಇಂಡಿಯಾ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರರು
    • ಏಕದಿನ ಸರಣಿಯಲ್ಲಿ ವೃತ್ತಿಜೀವನದ ಅತ್ಯಧಿಕ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ ಭಾರತೀಯರ ಪಟ್ಟಿ ಹೀಗಿದೆ
IND vs SA ODI: ಸೋತರೂ ದಾಖಲೆ ಬರೆದ ಟೀಂ ಇಂಡಿಯಾ: ಏಕದಿನ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಇವರೇ title=
India vs South Africa

India vs South Africa ODI: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಇಂದು ಲಕ್ನೋದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ 9 ರನ್ ಗಳಿಂದ ಸೋಲು ಕಂಡಿದೆ. ಈ ಮೂಲಕ ಸೌತ್ ಆಫ್ರಿಕಾ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: IND vs SA ODI: ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ!

ಆದರೆ ಸೋತರೂ ಸಹ ಟೀಂ ಇಂಡಿಯಾ ದಾಖಲೆ ಬರೆದಿದೆ. ಏಕದಿನ ಸರಣಿಯಲ್ಲಿ ವೃತ್ತಿಜೀವನದ ಅತ್ಯಧಿಕ ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ ಭಾರತೀಯರ ಪಟ್ಟಿ ಹೀಗಿದೆ. 7 ಇನ್ನಿಂಗ್ಸ್ ಗಳ ಪರಿಗಣನೆಗೆ ತೆಗೆದುಕೊಂಡು ಈ ದಾಖಲೆಯ ಲೆಕ್ಕಾಚಾರ ಮಾಡಲಾಗಿದೆ.

65.50 – ಸಂಜು ಸ್ಯಾಮ್ಸನ್

62.75 - ಶುಭ್ಮನ್ ಗಿಲ್

57.68 - ವಿರಾಟ್ ಕೊಹ್ಲಿ

50.23 - ಎಂಎಸ್ ಧೋನಿ

ಇಂದು ನಡೆದ ಪಂದ್ಯದಲ್ಲಿ ಅಬ್ಬರಿಸಿರುವ ಸಂಜು ಕೇವಲ 63 ಬಾಲ್ ಗೆ 86 ರನ್ ಬಾರಿಸಿದ್ದರು. ಈ ಸಂದರ್ಭದಲ್ಲಿ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 136.50 ಆಗಿತ್ತು.

ಇದನ್ನೂ ಓದಿ: Sachin Tendulkar-MS Dhoni: ಕ್ರಿಕೆಟ್ ದೇವರನ್ನು ಭೇಟಿಯಾದ ಥಾಲಾ! ಕಾರಣವೇನು ಗೊತ್ತಾ?

ಇನ್ನು ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎಡಗೈ ಸ್ಪಿನ್ನರ್‌ಗಳ ಪಟ್ಟಿಯನ್ನೂ ಮಾಡಲಾಗಿದ್ದು, ಇದರಲ್ಲಿ ಭಾರತೀಯನೂ ಸ್ಥಾನ ಪಡೆದಿದ್ದಾನೆ. ಮೊದಲ ಸ್ಥಾನವನ್ನು ಬ್ರಾಡ್ ಹಾಗ್ ಪಡೆದುಕೊಂಡಿದ್ದು, ಇವರು 156 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನುಳಿದಂತೆ 113 ವಿಕೆಟ್ ಪಡೆದಿರುವ ಭಾರತೀಯ ಆಟಗಾರ ಕುಲ್ದೀಪ್ ಯಾದವ್ ಎರಡನೇ ಸ್ಥಾನದಲ್ಲಿದ್ದಾರೆ., ಮೂರನೇ ಸ್ಥಾನದಲ್ಲಿರುವ ತಬ್ರೈಜ್ ಶಮ್ಸಿ 50 ವಿಕೆಟ್ ಕಬಳಿಸಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಸೌತ್ ಆಫ್ರಿಕಾ ತಂಡದ ಒಂದು ವಿಕೆಟ್ ಕಬಳಿಸಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News