IND vs SA ODI: ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ!

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಬಾರಿಸಿತ್ತು. ತಂಡದ ಪರವಾಗಿ ಕ್ಲಸೀನ್ 65 ಬಾಲ್ ಗೆ 74 ರನ್ ಬಾರಿಸಿದರೆ, ಮಿಲ್ಲರ್ 63 ಎಸೆತಕ್ಕೆ 75 ರನ್ ಪೇರಿಸಿದ್ದರು.

Written by - Bhavishya Shetty | Last Updated : Oct 6, 2022, 10:45 PM IST
    • ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ
    • ಮೊದಲ ಪಂದ್ಯ ಗೆದ್ದು 1-0 ಅಂತರ ಕಾಯ್ದುಕೊಂಡ ದ. ಆಫ್ರಿಕಾ
    • ಲಕ್ನೋದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್
IND vs SA ODI: ಮೊದಲ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ: ಅಯ್ಯರ್-ಸಂಜು ಅಬ್ಬರ ವ್ಯರ್ಥ! title=
india

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಇಂದು ಲಕ್ನೋದ ಭಾರತ ರತ್ನ ಶ್ರೀಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆದ್ದು 1-0 ಅಂತರ ಕಾಯ್ದುಕೊಂಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಗೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 249 ರನ್ ಬಾರಿಸಿತ್ತು. ತಂಡದ ಪರವಾಗಿ ಕ್ಲಸೀನ್ 65 ಬಾಲ್ ಗೆ 74 ರನ್ ಬಾರಿಸಿದರೆ, ಮಿಲ್ಲರ್ 63 ಎಸೆತಕ್ಕೆ 75 ರನ್ ಪೇರಿಸಿದ್ದರು. ಈ ಮೂಲಕ ಇಬ್ಬರು ಆಟಗಾರರು ಅರ್ಧ ಶತಕ ಬಾರಿಸಿ ದಕ್ಷಿಣ ಆಫ್ರಿಕಾಗೆ ಉತ್ತಮ ಮೊತ್ತದ ಕೊಡುಗೆ ನೀಡಿದರು. ಇನ್ನುಳಿದಂತೆ ಜೇನ್ ಮ್ಯಾನ್ ಮಲನ್ 22 ರನ್,  ಡಿ ಕಾಕ್ 48 ರನ್, ಬವುಮಾ 8 ರನ್ ಬಾರಿಸಿದ್ದಾರೆ.

ಇದನ್ನೂ ಓದಿ: ಐಸಿಸಿ 'ಪ್ಲೇಯರ್ ಆಫ್ ದಿ ಮಂತ್'ಗೆ ನಾಮನಿರ್ದೇಶನಗೊಂಡ ಹರ್ಮನ್‌ಪ್ರೀತ್, ಮಂಧಾನ, ಅಕ್ಸರ್

ಭಾರತ ಪರವಾಗಿ ಬೌಲಿಂಗ್ ಮಾಡಿದ ಶಾರ್ದುಲ್ ಟಾಕೂರ್ ಎರಡು ವಿಕೆಟ್ ಕಬಳಿಸಿದರೆ, ರವಿ ಬಿಶ್ನೋಯ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ನ್ನು ದಕ್ಷಿಣ ಆಫ್ರಿಕಾ ನೀಡಿದ ಗುರಿ ಬೆನ್ನತ್ತಿದ ಭಾರತ 40 ಓವರ್ ನಲ್ಲಿ ಎಂಟು ವಿಕೆಟ್ ನಷ್ಟಕ್ಕೆ 240 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಮಳೆಯ ಕಾರಣದಿಂದ 40 ಓವರ್ ಗೆ ಸೀಮಿತಗೊಳಿಸಲಾಗಿದ್ದ ಪಂದ್ಯದಲ್ಲಿ ಆರಂಭಿಕರಾಗಿ ನಾಯಕ ಶಿಖರ್ ಧವನ್ ಮತ್ತು ಶುಭ್ಮನ್ ಗಿಲ್ ಕಣಕ್ಕಿಳಿದರು. ಆದರೆ ಶುಭ್ಮನ್ ಕೇವಲ 3 ರನ್ ಬಾರಿಸಿ ಪೆವಿಲಿಯನ್ ಕಡೆ ಮುಖಮಾಡಿದರು. ಆ ಬಳಿಕ ಅಂಗಣಕ್ಕಿಳಿದ ರುತುರಾಜ್ ಗಾಯಕ್ವಾಡ್, ಧವನ್ ಜೊತೆಗೂಡಿ ಆಟವಾಡಿದರು. ಆದರೆ 15 ಬಾಲ್ ಗೆ ಕೇವಲ 4 ರನ್ ಬಾರಿಸಿ ಧವನ್ ಔಟಾದರು. ಆ ಬಳಿಕ ಇಶಾನ್ ಕಿಶನ್ ಕಣಕ್ಕಿಳಿದರು. ಆದರೆ 20 ರನ್ ಬಾರಿಸಿದ ಅವರು ಜೇನ್ ಮ್ಯಾನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ಮರಳಿದರು. ಇನ್ನೊಂದೆಡೆ ರುತುರಾಜ್ ಗಾಯಕ್ವಾಡ್ ಸಹ 19 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರ ಶ್ರೇಯಸ್ ಅಯ್ಯರ್ ಮತ್ತ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಪರ ಆಟವಾಡಿದರು. ಆದರೆ 50 ರನ್ ಬಾರಿಸಿ ಅಯ್ಯರ್ ಔಟಾದರು. ಆ ಬಳಿಕ ಕಣಕ್ಕಿಳಿದಿದ್ದು, ಶಾರ್ದುಲ್ ಠಾಕುರ್. ಶಾರ್ದುಲ್ ಮತ್ತು ಸಂಜು ಜೊತೆಯಾಟ ಟೀಂ ಇಂಡಿಯಾಗೆ ಗೆಲುವಿನ ಭರವಸೆಯನ್ನು ನೀಡಿತು. ಆದರೆ ಶಾರ್ದುಲ್ 33 ರನ್ ಬಾರಿಸಿ ಪೆವಿಲಿಯನ್ ಸೇರಿದರು, ಇನ್ನುಳಿದಂತೆ ಬಂದ ಕುಲ್ದೀಪ್ ಯಾದವ್ ಶೂನ್ಯಕ್ಕೆ ಔಟಾದರೆ, ಆವೇಶ್ ಖಾನ್  ಕೇವಲ 1 ರನ್ ಸಿಡಿಸಿದರು. ನಂತರ ಆಗಮಿಸಿ ರವಿ ಬಿಶ್ನೋಯ್ 4 ರನ್ ಬಾರಿಸಿದರೆ ಸಂಜು ಸ್ಯಾಮ್ಸನ್ ಭರ್ಜರಿ 86 ರನ್ ಗಳಿಸಿದರು

ಮಳೆಯ ಕಾರಣದಿಂದ ತಡವಾಗಿ ಪಂದ್ಯ ಆರಂಭವಾಗಿತ್ತು. ಪ್ರತಿ ತಂಡವು ತಲಾ 40 ಓವರ್‌ಗಳನ್ನು ಆಡಬೇಕಾಗಿದ್ದು, ಪ್ರತಿ ಬೌಲರ್‌ಗೆ ಗರಿಷ್ಠ 8 ಓವರ್‌ಗಳನ್ನು ನಿಗದಿಪಡಿಸಲಾಗಿದೆ. ಪವರ್‌ಪ್ಲೇ 1-8 ಓವರ್‌ಗಳು, ಪವರ್‌ಪ್ಲೇ 2 - 24 ಓವರ್‌ಗಳು, ಪವರ್‌ಪ್ಲೇ 3 - 8 ಓವರ್‌ಗಳು ಎಂದು ಫಿಕ್ಸ್ ಮಾಡಿರುವುದಾಗಿ ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿತ್ತು. 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News