ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ(Virat Kohli) ನಿಸ್ಸಂದೇಹವಾಗಿ ಫಿಟ್ನೆಸ್ ಫ್ರೀಕ್. ಇದರಲ್ಲಿ ಎರಡೂ ಮಾತಿಲ್ಲ. ನಿಯಮಿತವಾಗಿ ವರ್ಕೌಟ್ ಮಾಡುವ ರನ್ ಮಷಿನ್ ಕೊಹ್ಲಿ ವಿಶ್ವದ ಅತ್ಯುತ್ತಮ ಫಿಟ್ನೆಸ್ ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಹಿಂದೆ ಅವರು ತಮ್ಮ ಆರೋಗ್ಯದ ಬಗ್ಗೆ ಅಷ್ಟೇನೂ ಕಾಳಜಿ ಹೊಂದಿರಲಿಲ್ಲ. ಆದರೆ ಈಗ ಅವರು ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ಯಾವಾಗಲೂ ಫಿಟ್ ಆಗಿರುವಂತೆ ನೋಡಿಕೊಳ್ಳುತ್ತಾರೆ.
ವಿರಾಟ್ ಕೊಹ್ಲಿ(Virat Kohli) ಆಹಾರದ ವಿಷಯದಲ್ಲಿ ಕೆಲ ಬದಲಾಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಬದಲಾವಣೆ ಕೇವಲ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಯಾವಾಗಲೂ ಫಿಟ್ ಆಗಿರಲು ಬಯಸುವ ಅವರು ‘ಬ್ಲ್ಯಾಕ್ ವಾಟರ್’(Block Water) ಕುಡಿಯುತ್ತಾರಂತೆ. ಇದರ ಬೆಲೆ ಪ್ರತಿ ಲೀಟರ್ಗೆ ಸುಮಾರು 3000-4000 ರೂ. ಆಗುತ್ತದಂತೆ. ಈ ನೀರು ನೈಸರ್ಗಿಕ-ಕಪ್ಪು ಕ್ಷಾರೀಯ ನೀರನ್ನು ಹೊಂದಿರುತ್ತದಂತೆ. ಇದು ಯವಾಗಲೂ ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ಈ ‘ಬ್ಲ್ಯಾಕ್ ವಾಟರ್’ನಲ್ಲಿ pH ಪ್ರಮಾಣ ಅಧಿಕವಾಗಿದೆ. ಅದಕ್ಕಾಗಿಯೇ ಇದಕ್ಕೆ ದುಬಾರಿ ಬೆಲೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: IND vs ENG: ಮೊಹಮ್ಮದ್ ಸಿರಾಜ್ ‘ಸಿಗ್ನೇಚರ್ ಸ್ಟೈಲ್’ ನ ಕಟೌಟ್ ನಿಲ್ಲಿಸಿದ ಅಭಿಮಾನಿಗಳು..!
ಕೊಹ್ಲಿ ಮಾತ್ರವಲ್ಲದೆ ಬಾಲಿವುಡ್ ನಟಿ ಊರ್ವಶಿ ರೌಟೆಲಾ(Urvashi Rautela) ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್ಡೌನ್ ಸಮಯದಲ್ಲಿ ತಮ್ಮ ಪ್ರತಿರಕ್ಷೆಯನ್ನು ಸುಧಾರಿಸಲು ಹಾಗೂ ಫಿಟ್ ಆಗಿರಲು ‘ಬ್ಲ್ಯಾಕ್ ವಾಟರ್’ ಕುಡಿಯುವುದನ್ನು ರೂಢಿಸಿಕೊಂಡಿದ್ದಾರಂತೆ. ಈ ‘ಕಪ್ಪು ನೀರು’ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.
ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ನ ಫಿಟ್ಟೆಸ್ಟ್ ಕ್ರಿಕೆಟರ್(Fittest Cricketers in the World)ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಫಿಟ್ ಆಗಿರಲು ಅವರು ಉತ್ತಮ ಆಹಾರ ಕ್ರಮದ ಜೊತೆಗೆ ದುಬಾರಿ ಬೆಲೆಯ ನೀರನ್ನು ಕುಡಿಯುತ್ತಾರೆ ಅಂತಾ ಫಿಟ್ನೆಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಈ ಹಿಂದೆ ಫ್ರಾನ್ಸ್ ನಿಂದ ವಿಶೇಷವಾಗಿ ಆಮದು ಮಾಡಿಸಿಕೊಳ್ಳುವ ‘ಇವಿಯಾನ್’ ಎಂಬ ಬ್ರಾಂಡ್ ನ ಬಾಟಲಿ ನೀರು ಸೇವಿಸಿ ಸುದ್ದಿಯಾಗಿದ್ದರು. ಇದರ ಬೆಲೆ ಒಂದು ಲೀಟರ್ ಗೆ 600 ರೂ. ಆಗಿದೆ. ಇಷ್ಟು ದುಬಾರಿ ಬೆಲೆಯ ಶುದ್ಧ ನೀರು ಕುಡಿಯುವುದೇ ವಿರಾಟ್ ಆರೋಗ್ಯದ ಗುಟ್ಟಾಗಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನ್ ದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟರ್ ಸ್ಟೀವ್ ಸ್ಮಿತ್...!
ವಿರಾಟ್ ಕೊಹ್ಲಿ ತಮ್ಮ ಜೀವನದಲ್ಲಿ ಯಾವಾಗಲೂ ಅತ್ಯುತ್ತಮವಾದಕ್ಕೆ ಮಾತ್ರ ಶ್ರಮಿಸುತ್ತಾರೆ. ಹೀಗಾಗಿ ಅವರು ಜೀವನದಲ್ಲಿ ಮಾಡುವ ಆಯ್ಕೆಗಳು ಯಾವಾಗಲೂ ಸರಿಯಾಗಿಯೇ ಇರುತ್ತವೆ. ಕೊಹ್ಲಿ ಉತ್ತಮ ಗುಣಮಟ್ಟದ ನೀರು ಸೇವಿಸಲು ಆಧ್ಯತೆ ನೀಡಲು ಮತ್ತೊಂದು ಕಾರಣವೇ ಇದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ