ನವದೆಹಲಿ: ಕ್ರಿಕೆಟ್ ಆಟವನ್ನು ಜೆಂಟಲ್ ಗೇಮ್ ಎಂದು ಕರೆಯುತ್ತಾರೆ ಕೆಲವು ಸಂದರ್ಭದಲ್ಲಿ ಅದು ಸೃಷ್ಟಿಸುವ ಸನ್ನಿವೇಶಗಳು ಮಾತ್ರ ಹೊಟ್ಟೆ ಹುನ್ನಾಗಿಸುತ್ತವೆ.ಈಗ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮಾರ್ಕಸ್ ತ್ರೆಸ್ಕೊತಿಕ್ಸ್ ಅವರು ವಿಕೆಟ್ ಮಧ್ಯ ಓಡುವ ಸಂದರ್ಭದಲ್ಲಿ ಎರಡು ಬದಿಯಲ್ಲಿ ಎಡವಿ ಬಿದ್ದಿದ್ದಾರೆ. ಈಗ ಇದನ್ನು ಇಂಗ್ಲೆಂಡ್ ತಂಡದ ಇನ್ನೊಬ್ಬ ಮಾಜಿ ಆಟಗಾರ ಮೈಕಲ್ ವಾನ್ ಈ ವಿಡಿಯೋವೊಂದನ್ನು ಶೇರ್ ಮಾಡಿ " ಇದು ವಿಕೆಟ್ ಮಧ್ಯ ಓಡುವ ಕಲೆ " ಎಂದು ಬರೆದುಕೊಂಡಿದ್ದಾರೆ.
1993 ರಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಟ್ರೆಸ್ಕೊಥಿಕ್. 26,000 ಕ್ಕೂ ಅಧಿಕ ರನ್ ಗಳನ್ನು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಗಳಿಸಿದ್ದಾರೆ. ಇಂಗ್ಲೆಂಡ್ ಪರವಾಗಿ 76 ಟೆಸ್ಟ್ ಪಂದ್ಯಗಳನ್ನು ಆಡಿ 5,825 ರನ್ಗಳನ್ನು ಗಳಿಸಿದ್ದಾರೆ. 2005 ರ ಇಂಗ್ಲೆಂಡ್ ನ ಆಶಸ್ ವಿಜೇತ ತಂಡದ ಸದಸ್ಯರಾಗಿದ್ದರು.