T20 World Cupನಲ್ಲಿ ಟೀಂ ಇಂಡಿಯಾದ ರನ್ ರೇಟ್ ಹೇಗಿದೆ ಗೊತ್ತಾ? ಅತೀ ಹೆಚ್ಚು ರನ್ ಗಳಿಸಿದವರ್ಯಾರು?

T20 World Cup Run Rate: ಅಷ್ಟೇ ಅಲ್ಲದೆ, ಪ್ರತೀ ಪಂದ್ಯವು ರೋಮಾಂಚನಕಾರಿಯಾಗಿರುತ್ತವೆ. ಹೀಗಿರುವಾಗ ಈ ವರದಿಯಲ್ಲಿ ಕೆಲವೊಂದು ದಾಖಲೆ, ಅಂತಿಮ ಓವರ್ ಗಳನ್ನು ಸದುಪಯೋಗಪಡಿಸಿಕೊಂಡ ತಂಡಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : Nov 10, 2022, 03:45 PM IST
    • 16-20 ಓವರ್ ಗಳ ಮಧ್ಯೆ ಅತೀ ಹೆಚ್ಚು ರನ್ ಗಳಿಕೆಯಾದ ಪಂದ್ಯಗಳಿವು
    • ಅಂತಿಮ ನಾಲ್ಕು ಓವರ್ ಗಳಲ್ಲಿ ಹೆಚ್ಚು ಮತ್ತು ಕಡಿಮೆ ಬ್ಯಾಟಿಂಗ್ ರನ್ ರೇಟ್ ಪಡೆದ ತಂಡ
    • ಈ ಎಲ್ಲಾ ಮಾಹಿತಿಯ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ
T20 World Cupನಲ್ಲಿ ಟೀಂ ಇಂಡಿಯಾದ ರನ್ ರೇಟ್ ಹೇಗಿದೆ ಗೊತ್ತಾ? ಅತೀ ಹೆಚ್ಚು ರನ್ ಗಳಿಸಿದವರ್ಯಾರು? title=
world cup

T20 World Cup Statistics: ಟಿ20 ವಿಶ್ವಕಪ್ ಫೈನಲ್ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಒಂದು ಹೆಜ್ಜೆ ಬಾಕಿ ಇದ್ದು, ಇದೇ ಭಾನುವಾರದಂದು ಅದಕ್ಕೂ ಸಹ ಅಂತ್ಯ ಬೀಳಲಿದೆ. ಇನ್ನು ಟಿ20 ವಿಶ್ವಕಪ್ ಎಂದರೆ ಅಲ್ಲಿ ದಾಖಲೆಗಳಿಗೆ ಏನೂ ಕೊರತೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಪ್ರತೀ ಪಂದ್ಯವು ರೋಮಾಂಚನಕಾರಿಯಾಗಿರುತ್ತವೆ. ಹೀಗಿರುವಾಗ ಈ ವರದಿಯಲ್ಲಿ ಕೆಲವೊಂದು ದಾಖಲೆ, ಅಂತಿಮ ಓವರ್ ಗಳನ್ನು ಸದುಪಯೋಗಪಡಿಸಿಕೊಂಡ ತಂಡಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: IND vs ENG Matches: ಭಾರತ-ಇಂಗ್ಲೆಂಡ್ ಕ್ರಿಕೆಟ್ ಸಮರದಲ್ಲಿ ಹೆಚ್ಚು ಪಂದ್ಯ ಗೆದ್ದವರ್ಯಾರು ಗೊತ್ತಾ?

ಟಿ 20 ವಿಶ್ವಕಪ್ ಸೂಪರ್ 12 ಪಂದ್ಯಗಳಲ್ಲಿ 16-20 ಓವರ್ ಗಳ ಮಧ್ಯೆ ಅತೀ ಹೆಚ್ಚು ರನ್ ಗಳಿಕೆಯಾದ ಪಂದ್ಯಗಳಿವು

  • 79/1 – ಭಾರತ ಮತ್ತು ಜಿಂಬಾಬ್ವೆ (MCG)
  • 65/0 – ಭಾರತ ಮತ್ತು ನೆದರ್ಲ್ಯಾಂಡ್ (SCG)
  • 65/3 – ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ (SCG)
  • 65/4 – ಪಾಕಿಸ್ತಾನ ಮತ್ತು ಸೌತ್ ಆಫ್ರಿಕಾ (SCG)
  • 60/2 – ಭಾರತ ಮತ್ತು ಪಾಕಿಸ್ತಾನ (MCG)

ಅಂತಿಮ ನಾಲ್ಕು ಓವರ್ ಗಳಲ್ಲಿ ಹೆಚ್ಚು ಮತ್ತು ಕಡಿಮೆ ಬ್ಯಾಟಿಂಗ್ ರನ್ ರೇಟ್ ಪಡೆದ ತಂಡ:

ಹೆಚ್ಚು ರನ್ ರೇಟ್:

  • 11.60 - ಭಾರತ
  • 10.40 - ನ್ಯೂಜಿಲ್ಯಾಂಡ್
  • 9.81 - ಪಾಕಿಸ್ತಾನ
  • 9.22 - ಆಸ್ಟ್ರೇಲಿಯಾ

ಕಡಿಮೆ ರನ್ ರೇಟ್

  • 7.02 - ಜಿಂಬಾಬ್ವೆ
  • 7.07 - ಶ್ರೀಲಂಕಾ
  • 7.43 - ನೆದರ್ಲ್ಯಾಂಡ್
  • 7.50 – ಸೌತ್ ಆಫ್ರಿಕಾ

ಟಿ20 ವಿಶ್ವಕಪ್ ಪಂದ್ಯಗಳ ಸಂದರ್ಭಲ್ಲಿ ಬ್ಯಾಟಿಂಗ್ ಪವರ್‌ಪ್ಲೇ ರನ್-ರೇಟ್ ಹೀಗಿದೆ

ಕಡಿಮೆ ರನ್ ರೇಟ್:

  • 5.37 – ನೆದರ್ಲ್ಯಾಂಡ್ಸ್ ಮತ್ತು ಜಿಂಬಾಬ್ವೆ
  • 5.97 - ಭಾರತ
  • 6.40 - ಶ್ರೀಲಂಕಾ

ಹೆಚ್ಚು ರನ್ ರೇಟ್:

  • 8.23 - ದಕ್ಷಿಣ ಆಫ್ರಿಕಾ
  • 8.13 - ಇಂಗ್ಲೆಂಡ್
  • 7.79 - ಐರ್ಲೆಂಡ್
  • 7.53 – ಬಾಂಗ್ಲಾದೇಶ

ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ನಡುವೆ ಸೆಮಿಸ್ ಸಮರ: ಪಾಕ್ ವಿರುದ್ಧ ಫೈನಲ್ ಆಡುವವರು ಯಾರು?

ಇವೆಲ್ಲದರ ಹೊರತಾಗಿ ವಿಶ್ವಕಪ್2022 ರಲ್ಲಿ ಭಾರತದ ಓವರ್ ಅನುಸಾರ ರನ್ ರೇಟ್ ಹೀಗಿದೆ. 1-6 ಓವರ್ ಗಳಲ್ಲಿ 5.97 ರನ್ ರೇಟ್, 7-15 ಓವರ್ ಗಳಲ್ಲಿ 8.29 ರನ್ ರೇಟ್, 16-20 ಓವರ್ ಗಳಲ್ಲಿ 11.60 ರನ್ ರೇಟ್ ಇದೆ. ಇನ್ನು ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ 15 ಓವರ್ಗಳಲ್ಲಿ ಟೀಂ ಇಂಡಿಯಾ 100 ರನ್ ಕಲೆ ಹಾಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News