Tokyo Olympics 2020 Updates: ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಸೆಮಿಫೈನಲ್ ಹಂತ ತಲುಪಿದ ರವಿ ದಹಿಯಾ, ದೀಪಕ್ ಪುನಿಯಾ

Tokyo Olympics 2020 Updates: ಟೋಕಿಯೋ ಒಲಿಂಪಿಕ್ 2020 (Tokyo Olympics 2020) ಪಂದ್ಯಾವಳಿಯ 12ನೇ  ದಿನವಾದ ಇಂದು ಅಂದರೆ ಬುಧವಾರ ಭಾರತೀಯ ಅಭಿಮಾನಿಗಳಿಗೆ ಖುಷಿಯ ದಿನ ಸಾಬೀತಾಗುವ ಸಾಧ್ಯತೆ ಇದೆ. 

Written by - Nitin Tabib | Last Updated : Aug 4, 2021, 10:26 AM IST
  • ಟೋಕಿಯೋ ಒಲಿಂಪಿಕ್ ಪಂದ್ಯಾವಳಿಯಲ್ಲಿ ಇಂದಿನ ದಿನ ಭಾರತದ ಪಾಲಿಗೆ ದೊಡ್ಡ ದಿನ.
  • ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಸೆಮಿಫೈನಲ್ ಗೆ ಲಗ್ಗೆ ಇಟ್ಟ ರವಿ ದಹಿಯಾ, ದೀಪಕ್ ಪುನಿಯಾ.
  • ಸೆಮಿಫೈನಲ್ ಪಂದ್ಯವನ್ನು ಗೆದ್ದು ಫೈನಲ್ ಗೆ ಲಗ್ಗೆ ಇಡುವ ನಿರೀಕ್ಷೆಯಲ್ಲಿ ಬಾಕ್ಸರ್ ಲೋವ್ಲಿನಾ
Tokyo Olympics 2020 Updates: ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಸೆಮಿಫೈನಲ್ ಹಂತ ತಲುಪಿದ ರವಿ ದಹಿಯಾ, ದೀಪಕ್ ಪುನಿಯಾ title=
Tokyo Olympics 2020 Updates (File Photo)

Tokyo Olympics 2020 Updates: ಟೋಕಿಯೋ ಒಲಿಂಪಿಕ್ 2020 (Tokyo Olympics 2020) ಪಂದ್ಯಾವಳಿಯ 12ನೇ  ದಿನವಾದ ಇಂದು ಅಂದರೆ ಬುಧವಾರ ಭಾರತೀಯ ಅಭಿಮಾನಿಗಳಿಗೆ ಖುಷಿಯ ದಿನ ಸಾಬೀತಾಗುವ ಸಾಧ್ಯತೆ ಇದೆ. ಏಕೆಂದರೆ ಇಂದು ಹಲವು ಆಟಗಾರರಿಂದ ಪದಕ ನಿರೀಕ್ಷಿಸಬಹುದಾಗಿದೆ. ಇವರಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಲವಲೀನಾ ಬೋರ್ಗೋಹೇನ್ ಭಾರತೀಯ ಹಾಕಿ ತಂಡ (Indian Women Hockey Team)ಈ ಮೊದಲೇ ತನ್ನ ಉತ್ತಮ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ಹಂತ ತಲುಪಿದ್ದು, ಫೈನಲ್ ತಲುಪಿ ತನ್ನ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ- Tokyo Olympics Hockey: ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿ ಹೊಸ ಇತಿಹಾಸ ಸೃಷ್ಟಿಸಿದ ಭಾರತದ ವನಿತೆಯರು

ಇದೆ ಸ್ಥಿತಿ ಲವ್ಲೀನಾಗೂ(Lovlina) ಇದೆ. ತನ್ನ ಮೊದಲ ಒಲಿಂಪಿಕ್ ಪಂದ್ಯದಲ್ಲಿ ಕಂಚಿನ ಪದಕ ಸುನೀಸ್ಚಿತಗೊಳಿಸಿರುವ ಲವಲೀನಾ, ಇದೀಗ ಬೆಳ್ಳಿ ಹಾಗೂ ಚಿನ್ನ ಸುನೀಸ್ಚಿತಗೊಲಿಸುವ ದಾರಿಯಲ್ಲಿದ್ದಾರೆ. ಜಾವಲೀನ್ ಥ್ರೋ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ತಲುಪಿರುವ ನೀರಜ್ ಚೋಪ್ರಾ (Neeraj Chopra) ತನ್ನ ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 

ಇದನ್ನೂ ಓದಿ-Tokyo Olympics : ಪದಕ ಗೆದ್ದ ಪಿ ವಿ ಸಿಂಧೂಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

ಇನ್ನೊಂದೆಡೆ ಫ್ರೀ ಸ್ಟೈಲ್ ಕುಸ್ತಿ (Freestyle Wrestling) ಸ್ಪರ್ಧೆಯಲ್ಲಿ ಭಾರತೀಯ ಮಲ್ಲರ ಉತ್ತಮ ಪ್ರದರ್ಶನ ಮುಂದುವರೆದಿದೆ. 57 ಕಿ. ಗ್ರಾಂ ವರ್ಗದಲ್ಲಿ ರವಿ ದಹಿಯಾ (Ravi Dahia) ಹಾಗೂ 86 ಕಿ.ಗ್ರಾಂ ವರ್ಘದಲ್ಲಿ ದೀಪಕ್ ಪುನಿಯಾ (Deepak Punia) ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ. ರವಿ ಬಲ್ಗೇರಿಯಾ ವಿರುದ್ಧ 14-4 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಪಂದ್ಯದ ಕೊನೆಯ ಕೆಲ ಸೆಕೆಂಡಗಳಲ್ಲಿ ಚೀನಾದ ಶೇನ್ ಅವರನ್ನು 6-3 ಅಂತರದಿಂದ ಸೋಲಿಸುವ ಮೂಲಕ ದೀಪಕ್ ಪುನಿಯಾ ಸೆಮಿ ಫೈನಲ್ ತಲುಪಿದ್ದಾರೆ. ಸೆಮಿಫೈನಲ್ ಹಂತದಲ್ಲಿ ಅವರು ಅಮೆರಿಕಾದ ಡೇವಿಡ್ ಮಾರಿಸ್ ಟೇಲರ್ ಅವರನ್ನು ಎದುರಿಸಲಿದ್ದಾರೆ. ಇನ್ನೊಂದೆಡೆ ಸೆಮಿಫೈನಲ್ ಹಂತದಲ್ಲಿ ರವಿ ಕಜಾಕಿಸ್ತಾನದ ನೂರ್ ಇಸ್ಮೈಲ್ ಸನಾಯೇವ್ ಅವರನ್ನು ಎದುರಿಸಲಿದ್ದಾರೆ. 

ಇದನ್ನೂ ಓದಿ-Tokyo Olympics 2020: ಮ್ಯಾಚ್ ಗೂ ಮುನ್ನ ಜುಡೋ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ, ಆಶ್ಚರ್ಯಕ್ಕೊಳಗಾದ ಪ್ರೇಕ್ಷಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News