Viral video: ಮರ್ಮಾಂಗಕ್ಕೆ ಕೋಲು ಬಡಿದು ಫೈನಲ್‌ನಿಂದ ಹೊರಬಿದ್ದ ಪೋಲ್‌ವಾಲ್ಟ್ ಸ್ಪರ್ಧಿ!

Paris Olympics Pole Vault: ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಭರವಸೆಯ ಸ್ಪರ್ಧಿಯಾಗಿದ್ದ ಅಂಥೋನಿ ಅಮ್ಮಿರತಿ ತವರು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ಎಡವಟ್ಟಿನಿಂದ ಮುಜುಗರದ ಜೊತೆಗೆ ನೋವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Written by - Puttaraj K Alur | Last Updated : Aug 4, 2024, 05:20 PM IST
  • ಮರ್ಮಾಂಗಕ್ಕೆ ಕೋಲು ಬಡಿದು ಫೈನಲ್‌ನಿಂದ ಹೊರಬಿದ್ದ ಪೋಲ್‌ವಾಲ್ಟ್ ಸ್ಪರ್ಧಿ!
  • ದುರದುಷ್ಟಕರ ಘಟನೆಯಿಂದ ನೋವಿನಿಂದಲೇ ಸ್ಪರ್ಧೆಯಿಂದ ಸ್ಪರ್ಧಿ ಔಟ್‌
  • ಪದಕ ಗೆಲ್ಲುವ ಭರವಸೆಯ ಸ್ಪರ್ಧಿಯಾಗಿದ್ದ ಅಂಥೋನಿ ಅಮ್ಮಿರತಿ ವಿಡಿಯೋ ವೈರಲ್
Viral video: ಮರ್ಮಾಂಗಕ್ಕೆ ಕೋಲು ಬಡಿದು ಫೈನಲ್‌ನಿಂದ ಹೊರಬಿದ್ದ ಪೋಲ್‌ವಾಲ್ಟ್ ಸ್ಪರ್ಧಿ! title=
ಅಂಥೋನಿ ಅಮ್ಮಿರತಿ ವಿಡಿಯೋ ವೈರಲ್!

Paris Olympics Pole Vault: ಮರ್ಮಾಂಗಕ್ಕೆ ಕೋಲು(Pole vault bar) ಬಡಿದು ಫ್ರಾನ್ಸ್‌ನ ಪೋಲ್‌ವಾಲ್ಟ್ ಸ್ಪರ್ಧಿ ಫೈನಲ್‌ನಿಂದ ಹೊರಬಿದ್ದಿರುವ ಘಟನೆ ನಡೆದಿದೆ. ಫ್ರೆಂಚ್ ಪೋಲ್ ವಾಲ್ಟರ್ ಆಂಥೋನಿ ಅಮ್ಮಿರತಿ ಅವರು ದುರದೃಷ್ಟಕರ ರೀತಿಯ ಘಟನೆಯಿಂದ ಪುರುಷರ ಪೋಲ್‌ವಾಲ್ಟ್ ಸ್ಪರ್ಧೆಯ ಫೈನಲ್‌ ರೇಸ್‌ನಿಂದ ಹೊರಬಿದ್ದಿದ್ದಾರೆ.  

ಭಾನುವಾರ ನಡೆದ ಸ್ಪರ್ಧೆಯಲ್ಲಿ ಅಂಥೋನಿ ಅಮ್ಮಿರತಿ ಅರ್ಹತಾ ಸುತ್ತಿನಲ್ಲಿ 5.70M ಎತ್ತರ ಜಿಗಿಯುವ ವೇಳೆ ಅವರ ಮರ್ಮಾಂಗಕ್ಕೆ ಕೋಲು ಬಡಿದು ಫೈನಲ್ ಪ್ರವೇಶಿಸಲು ವಿಫರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. 

ಇದನ್ನೂ ಓದಿ: ಬ್ರಿಟನ್ ಸೋಲಿಸಿ ಒಲಂಪಿಕ್ಸ್ ಸೆಮಿಫೈನಲ್ ಗೆ ಲಗ್ಗೆ ಇಟ್ಟ 'ಚೆಕ್ ದೇ ಇಂಡಿಯಾ' 

ಪೋಲ್‌ವಾಲ್ಟ್‌ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಭರವಸೆಯ ಸ್ಪರ್ಧಿಯಾಗಿದ್ದ ಅಂಥೋನಿ ಅಮ್ಮಿರತಿ ತವರು ಅಭಿಮಾನಿಗಳಿಂದ ತುಂಬಿ ತುಳುಕುತ್ತಿದ್ದ ಕ್ರೀಡಾಂಗಣದಲ್ಲಿ ಎಡವಟ್ಟಿನಿಂದ ಮುಜುಗರದ ಜೊತೆಗೆ ನೋವಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದ್ದಾರೆ.

21 ವರ್ಷದ ಅಂಥೋನಿ ಅಮ್ಮಿರತಿಯವರು 5.70M ಎತ್ತರ ಜಿಗಿತದ ೩ ಪ್ರಯತ್ನಗಳ ಪೈಕಿ ೨ನೇ ಪ್ರಯತ್ನದಲ್ಲಿ ಜಿಗಿಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚೆನ್ನಾಗಿಯೇ ಜಂಪ್‌ ಮಾಡಿದ್ದ ಅಂಥೋನಿಯವರು ಇನ್ನೇನು ಪದಕ ಗೆದ್ದೇ ಬಿಟ್ಟರೂ ಅನ್ನುವಷ್ಟರಲ್ಲಿಯೇ ಯಡವಟ್ಟು ಆಗಿದೆ. ಅವರ ಶಿಶ್ನವು ಪೋಲ್‌ವಾಲ್ಟ್‌ನ ಬಾರ್‌ಗೆ ತಾಗಿದ ಪರಿಣಾಮ ಅದು ಕೆಳಗೆ ಉರುಳಿತು. ಕೆಳಕ್ಕೆ ಬಿದ್ದ ನಂತರ ಅಂಥೋನಿಯವರು ನೋವಿನಿಂದ ಬಳಲುತ್ತಿರುವುದು ಕಂಡುಬಂದಿತು. 

ಇದನ್ನೂ ಓದಿ: ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...

ಈ ಸ್ಪರ್ಧೆಯಲ್ಲಿ ಅಂಥೋನಿಯವರು ತಮ್ಮದಲ್ಲದ ತಪ್ಪಿಗೆ ಪದಕ ಕಳೆದುಕೊಳ್ಳುವಂತಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಅಂಥೋನಿಯವರ ದುರದುಷ್ಟಕರ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News