Rishabh Pant funny sledging with Kuldeep Yadav: ಸ್ಟಂಪ್ ಹಿಂದುಗಡೆ ಎದುರಾಳಿ ಆಟಗಾರರನ್ನು ಕೆಣುಕುವುದರಲ್ಲಿ ರಿಷಭ್ ಪಂತ್ ನಂ.1. ಆಸ್ಟ್ರೇಲಿಯಾ ಸೇರಿದಂತೆ ಅನೇಕ ಎದುರಾಳಿ ಟೀಂಗಳ ಆಟಗಾರರನ್ನು ಪಂತ್ ಬಿಟ್ಟಿಲ್ಲ. ಇದೀಗ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಕುಲದೀಪ್ ಯಾದವ್‌ಗೆ ಬೇಗ ಔಟಾಗು ಅಂತಾ ಪಂತ್ ಕಿಚಾಯಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನಲ್ಲಿ ನಡೆದ ಭಾರತ ʼAʼ ಮತ್ತು ಭಾರತ ʼBʼ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯದ ೪ನೇ ದಿನದಾಟದಲ್ಲಿ ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ ನಡುವಿನ ತಮಾಷೆಯ ಮಾತುಕತೆ ಸ್ಟಂಪ್ ಮೈಕ್‌ನಲ್ಲಿ ಸೆರೆಯಾಗಿದೆ. ಕುಲದೀಪ್ ಯಾದವ್ ಭಾರತ ʼAʼ ತಂಡದ ಪರ ಆಡಿದರೆ ರಿಷಭ್ ಪಂತ್ ಭಾರತ ʼBʼ ತಂಡದ ಪರ ಆಡುತ್ತಿದ್ದರು.
ಇದನ್ನೂ ಓದಿ: ಭಾರತ-ಬಾಂಗ್ಲಾದೇಶ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ
Rishabh Pant : “Isko single lene do bht tagda plan banaya hai iske liye”
Kuldeep : “Kyu pareshan kra hai yaar”
Rishabh : “Out ho na jaldiiii” 😭 pic.twitter.com/SEXj5zWdVa
— Rp17 (@HarshadSarode13) September 8, 2024
ಭಾರತ ʼAʼ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದಾಗ ಸ್ಲೋ ಆಗಿ ಆಟವಾಡುತ್ತಿದ್ದ ಕುಲದೀಪ್ ಯಾದವ್‌ರನ್ನು ಪಂತ್ ಕೆಣಕಿದ್ದಾರೆ. ವಿಕೆಟ್ ಕೀಪರ್ ಆಗಿ ವಿಕೆಟ್ ಹಿಂದುಗಡೆ ನಿಂತು ಕುಲದೀಪ್‌ಗೆ ಕೇಳುವಂತೆ ತಮ್ಮ ಸಹ ಆಟಗಾರನಿಗೆ ʼಇವನಿಗೆ ಸಿಂಗಲ್ಸ್ ತೆಗೆಯಲು ಬಿಡು. ಇವನಿಗಾಗಿ ನಾನು ಜಬರ್ದಸ್ತ್ ಪ್ಲ್ಯಾನ್ ಮಾಡಿದ್ದೇನೆ' ಎಂದು ಕಿಚಾಯಿಸಿದ್ದಾರೆ.
ರಿಷಭ್ ಮಾತು ಕೇಳಿ ಕುಲದೀಪ್ ಸಹ ಸುಮ್ಮನೆ ಕೂತಿಲ್ಲ. ʼಆಯ್ತು ಮಾರಾಯಾ, ನೀನು ಸ್ವಲ್ಪ ಹೊತ್ತು ಸುಮ್ಮನಿರು' ಅಂತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಂತ್, ʼಹಾಗಿದ್ದರೆ ಬೇಗ ಔಟಾಗು' ಎಂದಿದ್ದಾರೆ. ಮತ್ತೊಮ್ಮೆ ಮಾತನಾಡಿ, 'ಎಲ್ಲರೂ ಹತ್ತಿರ ಬನ್ನಿ, ಇವನು ಸಿಂಗಲ್ಸ್ ತೆಗೆದುಕೊಳ್ಳುತ್ತಾನೆ' ಅಂತಾ ಪಂತ್ ಹೇಳಿದ್ದಾನೆ. ʼನಾನು ತೆಗೆದುಕೊಳ್ಳಲ್ಲʼ ಎಂದಿದ್ದಾರೆ ಕುಲದೀಪ್. ಆಗ ಪಂತ್ 'ಹಾಗಿದ್ದರೆ ಅಮ್ಮನ ಮೇಲೆ ಆಣೆ ಮಾಡು' ಎಂದಿದ್ದಾರೆ. ಇದೇ ರೀತಿ ಕುಲದೀಪ್ ಕ್ರೀಸ್‌ನಲ್ಲಿದ್ದಷ್ಟು ಹೊತ್ತು ಇಬ್ಬರ ನಡುವೆ ತಮಾಷೆ ನಡೆಯುತ್ತಲೇ ಇತ್ತು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.