ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮಿರಾಬಾಯಿ ಚಾನು ಹೆಸರು ಶಿಫಾರಸ್ಸು

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರನ್ನು ಸೋಮವಾರ ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

Last Updated : Sep 17, 2018, 05:12 PM IST
  ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮಿರಾಬಾಯಿ ಚಾನು ಹೆಸರು ಶಿಫಾರಸ್ಸು title=

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು  ವೇಟ್ ಲಿಫ್ಟಿಂಗ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮಿರಾಬಾಯ್ ಚಾನು ಅವರನ್ನು ಸೋಮವಾರ ಈ ವರ್ಷದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 

2016 ರಲ್ಲಿ ಈ ಪ್ರಶಸ್ತಿ ಪಡೆಯಲು ವಿಫಲವಾಗಿದ್ದ ಕೊಹ್ಲಿ ಎರಡನೇ ಬಾರಿ ಮತ್ತೆ ಅವರ ಹೆಸರನ್ನು ಎರಡನೇ ಬಾರಿಗೆ ಶಿಪಾರಸ್ಸು ಮಾಡಲಾಗಿದೆ.  ಒಂದು ವೇಳೆ ಈ ಪ್ರಶಸ್ತಿಗೆ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ಅವರು ಅನುಮೋದನೆ ನೀಡಿದರೆ ಕೊಹ್ಲಿ ಅವರು  ಸಚಿನ್ ತೆಂಡುಲ್ಕರ್ (1997) ಮತ್ತು ಮಹೇಂದ್ರ ಸಿಂಗ್ ಧೋನಿ (2007) ನಂತರ ಖೇಲ್ ರತ್ನವನ್ನು ಪಡೆಯುವ ಮೂರನೇ ಕ್ರಿಕೆಟಿಗರಾಗುತ್ತಾರೆ.

ಕಳೆದ ವರ್ಷದ ಸೂಪರ್ ಸೀರಿಸ್ ಸರ್ಕ್ಯೂಟ್ನಲ್ಲಿ ಕಿದಾಂಬಿ ಶ್ರೀಕಾಂತ್ ಅವರು ಉತ್ತಮ ಪ್ರದರ್ಶನಕ್ಕಾಗಿ ಸ್ಪರ್ಧೆಯಲ್ಲಿದ್ದರು ಆದರೆ 48 ಕೆಜಿ ವಿಭಾಗದಲ್ಲಿ ವಿಶ್ವಚಾಂಪಿಯನ್ ಆಗಿದ್ದ 24 ವರ್ಷ ವಯಸ್ಸಿನ ಚಾನು ಎದುರು ಅವರು ಸ್ಥಾನಗಳಿಸಲು ವಿಫಲರಾಗಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ ಗಾಯಗೊಂಡು ಏಷ್ಯನ್ ಗೇಮ್ಸ್ ತಪ್ಪಿಸಿಕೊಂಡಿದ್ದ ಮೀರಾಬಾಯಿ ಚಾನುಗೆ  ಇದು ಒಂದು ರೀತಿಯಲ್ಲಿ ನೈತಿಕ ಸ್ಥೈರ್ಯವನ್ನು ತುಂಬಿದೆ ಎಂದು ಹೇಳಬಹುದು. ಚಾನು ಮುಂಬರುವ ಟೋಕಿಯೋ ಒಲಂಪಿಕ್ಸ್ ನಲ್ಲಿ  ವೇಟ್ ಲಿಫ್ಟಿಂಗ್ ನಲ್ಲಿ  ಪದಕ ಗೆಲ್ಲುವ ಸ್ಪರ್ಧಿಯಾಗಿದ್ದಾರೆ.

Trending News