Virat Kohli-Rishab Pant Relay Catch Video: ಇಂದು ಬಾಂಗ್ಲಾ ಮತ್ತು ಭಾರತ ನಡುವಿನ ಎರಡನೇ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಗಿ ಅದ್ಭುತ ಸಾಧನೆ ಮಾಡಿದ್ದರಿಂದ ಇಂದು ವಿಕೆಟ್‌ಕೀಪಿಂಗ್ ಬಗ್ಗೆ ಪ್ರಸ್ತಾಪಿಸಲೇ ಬೇಕು. ಟೀಂ ಇಂಡಿಯಾಗೆ ಅಗತ್ಯವಾಗಿ ಬೇಕಾಗಿದ್ದ ಕ್ಯಾಚ್ ಅನ್ನು ರಿಷಭ್ ಪಡೆಸಿದ್ದಾರೆ. ಈ ಕ್ಯಾಚ್ ಹಿಡಿಯುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಕೈಯಿಂದ ಚೆಂಡು ನೆಲಕ್ಕೆ ಬೀಳುವ ಹಂತದಲ್ಲಿತ್ತು.
ಬಾಂಗ್ಲಾದೇಶದ ಎರಡನೇ ಇನಿಂಗ್ಸ್‌ನ 47ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. 513 ರನ್‌ಗಳ ಬೃಹತ್ ಗುರಿಗೆ ಉತ್ತರವಾಗಿ ಆರಂಭಿಕರಿಬ್ಬರೂ ಕ್ರೀಸ್‌ನಲ್ಲಿ ಹೋರಾಡಲು ಸಜ್ಜಾಗಿದ್ದರು. ಭಾರತ ತಂಡ ಟೆನ್ಷನ್‌ನಲ್ಲಿತ್ತು. ಮೊದಲ ವಿಕೆಟ್ ಪಡೆಯಲಿ ಟೀಂ ಇಂಡಿಯಾ ಹೋರಾಡುತ್ತಿತ್ತು. ನಜ್ಮುಲ್ ಹಸನ್ ಶಾಂಟೊ ಮತ್ತು ಜಾಕಿರ್ ಹಸನ್ ಇಬ್ಬರೂ ಅರ್ಧಶತಕ ಗಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಉಮೇಶ್ ಯಾದವ್ ಉತ್ತಮ ಎಸೆತದಲ್ಲಿ ಶಾಂಟೊ ಅವರನ್ನು ಬಲೆಗೆ ಬೀಳಿಸಿದರು.
Brilliant Catch From Rishabh Pant! 🫡
Virat Kohli dropped this🫠#BANvIND #INDvsBAN #RishabhPant pic.twitter.com/KtecqzFZE2
— Divyansh khanna (@meme_lord2663) December 17, 2022
ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಬ್ಯಾಟ್‌ನ ಹೊರ ಅಂಚನ್ನು ತಗುಲಿ ಬಂದ ಚೆಂಡನ್ನು ಕ್ಯಾಚ್ ಹಿಡಿಯಲು ಮುಂದಾದರು. ಆದರೆ ವಿರಾಟ್ ಕೊಹ್ಲಿಯ ಕೈ ತಪ್ಪಿ ಹೋಯಿತು. ತಕ್ಷಣವೇ ಎಚ್ಚೆತ್ತ ವಿಕೆಟ್ ಕೀಪರ್ ರಿಷಬ್ ಪಂತ್, ಕ್ಯಾಚ್ ಹಿಡಿದರು. ಹೀಗಾಗಿ ಶಾಂಟೊ ಅವರ ಇನ್ನಿಂಗ್ಸ್ 67 ರನ್‌ಗಳಿಗೆ ಅಂತ್ಯಗೊಂಡಿತು.
ಇದನ್ನೂ ಓದಿ: Team India : ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾ!
ಬಾಂಗ್ಲಾದೇಶದ ಆರಂಭಿಕರು ಉತ್ತಮ ಆರಂಭ ನೀಡಿದ್ದರೂ, 513 ರನ್‌ಗಳ ಗುರಿಯನ್ನು ತಲುಪುವುದು ಇನ್ನೂ ಕಷ್ಟಕರವಾಗಿದೆ. ಶಾಂಟೊ ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳನ್ನು ಬಾರಿಸಿದ್ದಾರೆ. ಜಾಕಿರ್ ಹಾಸನ್ ಚೆನ್ನಾಗಿ ಆಡಿದ್ದಾರೆ. ಇವರಿಬ್ಬರ ಶತಕದ ಜೊತೆಯಾಟ ಭಾರತದ ವಿರುದ್ಧ ಬಾಂಗ್ಲಾದೇಶದ ಮೊದಲ ವಿಕೆಟ್‌ಗೆ ಅತ್ಯಧಿಕ ಜೊತೆಯಾಟವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲೂ ರಿಷಬ್ ಪಂತ್ ಶಾಂಟೊ ಅವರ ಅದ್ಭುತ ಕ್ಯಾಚ್ ಪಡೆದರು. ಆಗ ಬೌಲರ್ ಮೊಹಮ್ಮದ್ ಸಿರಾಜ್ ಆಗಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.