ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ!

ಐಸಿಸಿ ಟೆಸ್ಟ್  ರ್ಯಾಂಕಿಂಗ್ ನಲ್ಲಿ  ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ರಾಜ್ ಕೋಟನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 139 ರನ್ ಗಳಿಸಿದ್ದ ಕೊಹ್ಲಿ ಈಗ 936 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನವನ್ನು  ಉಳಿಸಿಕೊಂಡಿದ್ದಾರೆ

Last Updated : Oct 12, 2018, 06:34 PM IST
ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ!  title=
Photo:Reuters

ನವದೆಹಲಿ: ಐಸಿಸಿ ಟೆಸ್ಟ್  ರ್ಯಾಂಕಿಂಗ್ ನಲ್ಲಿ  ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ರಾಜ್ ಕೋಟನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 139 ರನ್ ಗಳಿಸಿದ್ದ ಕೊಹ್ಲಿ ಈಗ 936 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನವನ್ನು  ಉಳಿಸಿಕೊಂಡಿದ್ದಾರೆ

ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ 919 ಪಾಯಿಂಟ್ಗಳನ್ನು ಗಳಿಸುವ ಮೂಲಕ  ಎರಡನೇ ಸ್ಥಾನದಲ್ಲಿದ್ದಾರೆ.ಚೆಂಡನ್ನು ವಿರೂಪಗೊಳಿಸಿದ ಆರೋಪಗಳ ನಂತರ ಅವರು ಹೆಚ್ಚಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಹಿಸಿಲ್ಲ. ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ 847 ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಜೊಯಿ ರೂಟ್ ಮತ್ತು ಡೇವಿಡ್ ವಾರ್ನರ್ ಕ್ರಮವಾಗಿ 835 ಮತ್ತು 812 ಅಂಕಗಳೊಂದಿಗೆ ಟಾಪ್ 5 ರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ .

ಇನ್ನು ಯುವ ಭಾರತೀಯ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರು ರಾಜ್ಕೋಟ್ನಲ್ಲಿ ಚೊಚ್ಚಲ ಪಂದ್ಯದಲ್ಲಿಶತಕಗಳಿಸಿ ಮಿಂಚಿದ್ದ ಅವರು ಈಗ 73 ನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಬೌಲಿಂಗ್ ವಿಭಾಗದಲ್ಲಿ  ಜೇಮ್ಸ್ ಆಂಡರ್ಸನ್ ಅವರು 899 ಅಂಕಗಳ ಮೂಲಕ ಅಗ್ರಸ್ತಾನದಲ್ಲಿದ್ದಾರೆ.

Trending News