Ajinkya Rahane ಕೊಟ್ಟ ಉತ್ತರಕ್ಕೆ ಶಹಬ್ಬಾಸ್ ಎಂದ ಕ್ರಿಕೆಟ್ ಫ್ಯಾನ್ಸ್

ವಿರಾಟ್ ಕೊಹ್ಲಿ ಯಾವಾಗಲೂ  ತಂಡದ ನಾಯಕನಾಗಿರುತ್ತಾನೆ ಮತ್ತು ಅಗತ್ಯವಿದ್ದಾಗ ಮಾತ್ರ ನಾನು ತಂಡವನ್ನು ಮುನ್ನಡೆಸುವುದಾಗಿ ಅಜಿಂಕ್ಯ ರಹಾನೆ ಹೇಳಿದ್ದಾರೆ.   

Written by - Ranjitha R K | Last Updated : Jan 27, 2021, 07:19 PM IST
  • 'ವಿರಾಟ್ ಕೊಹ್ಲಿಯೇ ತಂಡದ ನಾಯಕ': ಅಜಿಂಕ್ಯಾ ರಹಾನೆ ಮಾತು
  • ಅಗತ್ಯಬಿದ್ದಾಗ ತಂಡವನ್ನು ಮುನ್ನಡೆಸುತ್ತೇನೆ : ರಹಾನೆ
  • ವಿರಾಟ್ ಕೊಹ್ಲಿಯನ್ನು ಹಾಡಿಹೊಗಳಿದ ರಹಾನೆ
Ajinkya Rahane ಕೊಟ್ಟ ಉತ್ತರಕ್ಕೆ ಶಹಬ್ಬಾಸ್ ಎಂದ ಕ್ರಿಕೆಟ್ ಫ್ಯಾನ್ಸ್

ನವದೆಹಲಿ: ಆಸ್ಟ್ರೇಲಿಯಾ ನೆಲದಲ್ಲಿ ತನ್ನ ನಾಯಕತ್ವದಲ್ಲಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದ ಅಜಿಂಕ್ಯ ರಹಾನೆ (Ajinkya Rahane),  ವಿರಾಟ್ ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸಿದವರಿಗೆ ಸರಿಯಾದ ಉತ್ತರ ನೀಡಿದ್ದಾರೆ. ಅಜಿಂಕ್ಯ ನೀಡಿರುವ ಉತ್ತರ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿರಾಟ್ ಕೊಹ್ಲಿ (Virat Kohli) ಯಾವಾಗಲೂ  ತಂಡದ ನಾಯಕನಾಗಿರುತ್ತಾನೆ ಮತ್ತು ಅಗತ್ಯವಿದ್ದಾಗ ಮಾತ್ರ ನಾನು ತಂಡವನ್ನು ಮುನ್ನಡೆಸುವುದಾಗಿ ರಹಾನೆ ಹೇಳಿದ್ದಾರೆ. 

'ವಿರಾಟ್ ಕೊಹ್ಲಿಯೇ ತಂಡದ ನಾಯಕ' :
ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡ (Team India) ಅದ್ಭುತ ಗೆಲುವು ಸಾಧಿಸಿದ ನಂತರ, ವಿರಾಟ್ ಕೊಹ್ಲಿ ಬದಲಿಗೆ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ಟೆಸ್ಟ್ ತಂಡದ ನಾಯಕತ್ವವನ್ನು ನೀಡಬೇಕು ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಅನೇಕ ಆಟಗಾರರು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ(Social Media) ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಈ ಬಗ್ಗೆ ಮಾತನಾಡಿದ ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ (Virat Kohli) ತಂಡದ ನಾಯಕ.. ಮತ್ತು ಯಾವಾಗಲೂ ಅವರೇ ನಾಯಕರಾಗಿರುತ್ತಾರೆ  ನಾನು ಉಪನಾಯಕ ಎಂದು ಹೇಳಿದ್ದಾರೆ. ವಿರಾಟ್ ಅನುಪಸ್ಥಿತಿಯಲ್ಲಿ, ಭಾರತೀಯ ತಂಡವನ್ನು ಮುನ್ನಡೆಸಿದ್ದೇನೆ. ತಂಡದ ಗೆಲುವಿಗಾಗಿ ಉತ್ತಮ ಪ್ರದರ್ಶನ  ನೀಡುವುದು ನನ್ನ ಜವಾಬ್ದಾರಿಯಾಗಿತ್ತು ಎಂದು ಹೇಳಿದ್ದಾರೆ.  

ಇದನ್ನೂ ಓದಿ :IPL 2021 Auction: ಚೆನ್ನೈನಲ್ಲಿ ನಡೆಯಲಿದೆ IPL ಆಟಗಾರರ ಹರಾಜು ಪ್ರಕ್ರಿಯೆ, ಇಲ್ಲಿದೇ ದಿನಾಂಕಗಳ ಮಾಹಿತಿ

ವಿರಾಟ್ ಜೊತೆಗಿನ ಸಂಬಂಧದ ಬಗ್ಗೆ  ರಹಾನೆ ಮಾತು :
ಕ್ಯಾಪ್ಟನ್ ಕೊಹ್ಲಿ  ಅವರೊಂದಿಗಿನ ಸಂಬಂಧ ಹೇಗಿದೆ ಎಂದು ಅಜಿಂಕ್ಯ ರಹಾನೆ ಅವರನ್ನು ಕೇಳಿದಾಗ, 'ವಿರಾಟ್ ಅವರೊಂದಿಗಿನ ನನ್ನ ಸಂಬಂಧ ಉತ್ತಮವಾಗಿದೆ.  ನಾವು ಭಾರತ ಮತ್ತು ವಿದೇಶಗಳಲ್ಲಿ ಭಾರತಕ್ಕಾಗಿ (India) ಅನೇಕ ಸ್ಮರಣೀಯ ಇನ್ನಿಂಗ್ಸ್ ಆಡಿದ್ದೇವೆ. ಕೊಹ್ಲಿ ಯಾವಾಗಲೂ ನನ್ನ ಬ್ಯಾಟಿಂಗ್ ಅನ್ನು ಹೊಗಳುತ್ತಾರೆ. ನಾವು  ಪರಸ್ಪರರ ಆಟವನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿಯನ್ನು ಹೊಗಳಾಡಿದ ರಹಾನೆ :
 ಕೊಹ್ಲಿ ಯಾವಾಗಲೂ ನನ್ನ ನಿರ್ಧಾರಗಳ ಮೇಲೆ ವಿಶ್ವಾಸ ಇಡುತ್ತಾರೆ.   ಕೊಹ್ಲಿ ಬಹಳ ಬುದ್ಧಿವಂತ ನಾಯಕ ಎಂದಿದ್ದಾರೆ. ಕೋಹ್ಲಿ  ಯಾವತ್ತೂ ನನ್ನೊಂದಿಗೆ ಗೌರವದಿಂದ ನಡೆದುಕೊಂಡಿದ್ದಾರೆ. ವಿರಾಟ್ ಅವರ ನಿರೀಕ್ಷೆಗಳನ್ನು ಪೂರೈಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :BCCI ಮುಖ್ಯಸ್ಥ ಸೌರವ್​ ಗಂಗೂಲಿ ಮತ್ತೆ ಆಸ್ಪತ್ರೆಗೆ ದಾಖಲು!

ರಹಾನೆ ನಾಯಕತ್ವದಲ್ಲಿ ಆಡಿದ ಯಾವ ಪಂದ್ಯದಲ್ಲೂ ಭಾರತ ಸೋತಿಲ್ಲ. ಇಂಗ್ಲೆಂಡ್ (England) ವಿರುದ್ಧದ ಭಾರತದ ಟೆಸ್ಟ್ ಸರಣಿ ಫೆಬ್ರವರಿ 5 ರಿಂದ ಪ್ರಾರಂಭವಾಗುತ್ತದೆ. ಸರಣಿಯ ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ (Chennai) ನಡೆಯಲಿದ್ದು, ಕೊನೆಯ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News