ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಪ್ರಸ್ತುತ ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವಾಗ,ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಆಡಲು ತಾವು ಸಿದ್ದ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.
ಇದನ್ನೂ ಓದಿ: IPL 2020: ವೀರೇಂದ್ರ ಸೆಹ್ವಾಗ್ ಪಟ್ಟಿದ ಮಾಡಿದ ಐವರು ಫ್ಲಾಫ್ ಆಟಗಾರರು..!
ಗಾಯಗಳ ಸುದೀರ್ಘ ಪಟ್ಟಿಯಿಂದಾಗಿ, ಸ್ಟ್ಯಾಂಡ್-ಇನ್ ನಾಯಕ ಅಜಿಂಕ್ಯ ರಹಾನೆ ಮತ್ತು ತರಬೇತುದಾರ ರವಿಶಾಸ್ತ್ರಿ ಪ್ರಮುಖ ಆಯ್ಕೆ ಸಂದಿಗ್ಧತೆಯನ್ನು ಎದುರಿಸುತ್ತಾರೆ, ಈಗ ಸರಣಿಯೂ 1-1 ರಲ್ಲಿ ಸಮವಾಗಿದೆ ಈ ಹಿನ್ನಲೆಯಲ್ಲಿ ಈಗ ಕೊನೆಯ ಟೆಸ್ಟ್ ಪಂದ್ಯವು ಸಾಕಷ್ಟು ನಿರ್ಣಾಯಕವಾಗಿದೆ.ಇದುವರೆಗೆಗೂ ಭಾರತ ತಂಡವೂ ಪ್ರಮುಖ ಆಟಗಾರರ ಅನುಪಸ್ಥಿತಿಯ ಮಧ್ಯದಲ್ಲಿಯೂ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: 'ಇದನ್ನು ಮರೆಯುವ ಒಟಿಪಿ 49204084041' ಎಂದು ಟೀಮ್ ಇಂಡಿಯಾ ಟ್ರೋಲ್ ಮಾಡಿದ ಸೆಹ್ವಾಗ್
ಈಗ ಈ ಕುರಿತಾಗಿ ಹಿಂದಿಯಲ್ಲಿ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್ (Virender Sehwag) 'ಇಷ್ಟೆಲ್ಲಾ ಆಟಗಾರರು ಗಾಯಗೊಂಡಿದ್ದಾರೆ 11ನೇ ಆಟಗಾರನಾಗಿ ಆಸ್ಟ್ರೇಲಿಯಾಗೆ ಹೋಗಲು ನಾನು ಸಿದ್ದನಾಗಿದ್ದೇನೆ, ಆದರೆ ಬಿಸಿಸಿ ಕ್ವಾರಂಟೈನ್ ನ್ನು ನೋಡಿಕೊಳ್ಳಬೇಕು ಎಂದು 'ಅವರು ಟ್ವೀಟ್ ಮಾಡಿದ್ದಾರೆ.ಸೆಹ್ವಾಗ್ ಅವರ ಟ್ವೀಟ್ ವ್ಯಂಗ್ಯವಾಗಿದೆ, ಒಂದು ವೇಳೆ ಇದು ಗಂಭೀರವಾಗಿದ್ದರೂ ಕೂಡ ಆಸ್ಟ್ರೇಲಿಯಾದ ಕಟ್ಟುನಿಟ್ಟಿನ ಕ್ಯಾರೆಂಟೈನ್ ನಿಯಮಗಳಿಂದಾಗಿ ಅದು ಸಾಧ್ಯವಾಗುವುದಿಲ್ಲ.
ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮತ್ತು ಹನುಮಾ ವಿಹಾರಿ ಈಗ ಗೈರು ಹಾಜರಾಗಿದ್ದಾರೆ. ಜಡೇಜಾ ಕೂಡ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.ಇನ್ನೊಂದೆಡೆಗೆ ಬುಮ್ರಾ ಕೂಡ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು,ಅವರು ಕೂಡ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗೆ ಉಳಿಯಲಿದ್ದಾರೆ ಎಂದು ವರದಿಯಾಗಿದೆ.ಅಲ್ಲದೆ ವಿಹಾರಿಗೆ ಕೂಡ ಗಾಯವಾಗಿದೆ.
ಇದನ್ನೂ ಓದಿ: 10 ಕೋಟಿ ರೂ ಮೌಲ್ಯದ ಚಿಯರ್ ಲೀಡರ್ ಎಂದ ಸೆಹ್ವಾಗ್ ಗೆ ಮ್ಯಾಕ್ಸ್ ವೆಲ್ ಹೇಳಿದ್ದೇನು?
ಬುಮ್ರಾ ಹೊಟ್ಟೆಯ ಒತ್ತಡದಿಂದ ಬಳಲುತ್ತಿದ್ದು, ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ,ವಿಹಾರಿಗೆ ಮಂಡಿರಜ್ಜು ಗಂಭೀರವಾದ ಗಾಯವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.