Team India ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಆಯ್ಕೆ ಆಗಲ್ಲ! ಇದು ಕಾರಣ…

Virender Sehwag: ಇತ್ತೀಚಿನ ವರದಿಗಳನ್ನು ತಳ್ಳಿಹಾಕಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, “ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಖ್ಯ ಆಯ್ಕೆಗಾರ ಹುದ್ದೆಗೆ ಯಾರೂ ನನ್ನನ್ನು ಕೇಳಿಲ್ಲ” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Jun 23, 2023, 12:16 PM IST
    • ಆಯ್ಕೆದಾರರ ಹುದ್ದೆ ಕುರಿತು ನಡೆಯುತ್ತಿರುವ ಮಾತುಕತೆಗಳೆಲ್ಲವೂ ಅರ್ಥಹೀನ
    • ಇತ್ತೀಚಿನ ವರದಿಗಳನ್ನು ತಳ್ಳಿಹಾಕಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್
    • ಕ್ರಿಕೆಟ್‌ ನ ಮುಖ್ಯ ಆಯ್ಕೆಗಾರರ ​​ಹುದ್ದೆಯಿಂದ ಚೇತನ್ ಶರ್ಮಾ ಅವರನ್ನು ತೆಗೆದುಹಾಕಲಾಗಿತ್ತು
Team India ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ವೀರೇಂದ್ರ ಸೆಹ್ವಾಗ್ ಆಯ್ಕೆ ಆಗಲ್ಲ! ಇದು ಕಾರಣ… title=
Virender Sehwag

Virender Sehwag: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮುಖ್ಯ ಆಯ್ಕೆದಾರರಾಗುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೇ ವೇಳೆ ಈ ಬಗ್ಗೆ ಮಾಹಿತಿಯೊಂದನ್ನು ಅವರೇ ಬಹಿರಂಗಪಡಿಸಿದ್ದಾರೆ. ಮುಖ್ಯ ಆಯ್ಕೆದಾರರ ಹುದ್ದೆ ಕುರಿತು ನಡೆಯುತ್ತಿರುವ ಮಾತುಕತೆಗಳೆಲ್ಲವೂ ಅರ್ಥಹೀನ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 5 ವರ್ಷಗಳ ಬಳಿಕ ನಡೆದ ಭಾರತ-ಪಾಕ್ ಪಂದ್ಯದಲ್ಲಿ ಹೊಡೆದಾಡಿಕೊಂಡ ಕೋಚ್-ಆಟಗಾರರು! ವಿಡಿಯೋ

ಇತ್ತೀಚಿನ ವರದಿಗಳನ್ನು ತಳ್ಳಿಹಾಕಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, “ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮುಖ್ಯ ಆಯ್ಕೆಗಾರ ಹುದ್ದೆಗೆ ಯಾರೂ ನನ್ನನ್ನು ಕೇಳಿಲ್ಲ” ಎಂದು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ. Zee News ನ ಕುಟುಕು ಕಾರ್ಯಾಚರಣೆಯ ನಂತರ ಭಾರತೀಯ ಕ್ರಿಕೆಟ್‌ ನ ಮುಖ್ಯ ಆಯ್ಕೆಗಾರರ ​​ಹುದ್ದೆಯಿಂದ ಚೇತನ್ ಶರ್ಮಾ ಅವರನ್ನು ತೆಗೆದುಹಾಕಲಾಗಿತ್ತು.

ಚೇತನ್ ಶರ್ಮಾ ಅವರನ್ನು ಈ ಹುದ್ದೆಯಿಂದ ತೆಗೆದು ಹಾಕಿದಾಗಿನಿಂದ, ಬಿಸಿಸಿಐ ಇದಕ್ಕೆ ಸೂಕ್ತ ವ್ಯಕ್ತಿಯನ್ನು ಹುಡುಕಲು ಪ್ರಯತ್ನಿಸುತ್ತಿದೆ. ಅಂದಿನಿಂದ, ಭಾರತದ ಮಾಜಿ ಆರಂಭಿಕ ಆಟಗಾರ ಶಿವಸುಂದರ್ ದಾಸ್ ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ಜವಾಬ್ದಾರಿಯನ್ನು ಹೊರುತ್ತಿದ್ದಾರೆ. ಆಯ್ಕೆ ಸಮಿತಿಯಲ್ಲಿ ಎಸ್ ಶರತ್ (ದಕ್ಷಿಣ), ಸುಬ್ರೊತೋ ಬ್ಯಾನರ್ಜಿ (ಮಧ್ಯ), ಸಲೀಲ್ ಅಂಕೋಲಾ (ಪಶ್ಚಿಮ) ಸದಸ್ಯರಾಗಿದ್ದಾರೆ.

ಇದನ್ನೂ ಓದಿ:  33 ಎಸೆತ, 14 ಸಿಕ್ಸರ್, 9 ಬೌಂಡರಿ! ಅತೀ ವೇಗವಾಗಿ ಶತಕ ಸಿಡಿಸಿ ತಲ್ಲಣ ಮೂಡಿಸಿದ್ದು ಭಾರತದ ಈ ಕಿಲಾಡಿ!

ವೀರೇಂದ್ರ ಸೆಹ್ವಾಗ್ ಮುಖ್ಯ ಆಯ್ಕೆಗಾರ ಏಕೆ ಆಗುವುದಿಲ್ಲ?

ಬಿಸಿಸಿಐ ಇತ್ತೀಚೆಗೆ ಆಯ್ಕೆಗಾರರ ​​ಹುದ್ದೆಗೆ ಅರ್ಜಿಯನ್ನು ತೆರೆದಿದೆ. ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ವೀರೇಂದ್ರ ಸೆಹ್ವಾಗ್ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಆದರೆ ಕಡಿಮೆ ಸಂಬಳದ ಕಾರಣ, ಅವರು ಈ ಜವಾಬ್ದಾರಿಗೆ ಸಿದ್ಧರಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಆಯ್ಕೆ ಸಮಿತಿಯ ಮುಖ್ಯಸ್ಥರು ಅಂದರೆ ಮುಖ್ಯ ಆಯ್ಕೆದಾರರ ವಾರ್ಷಿಕ ವೇತನವು ಒಂದು ಕೋಟಿ ರೂಪಾಯಿ ಇದ್ದು, ಉಳಿದ ನಾಲ್ಕು ಸದಸ್ಯರು ತಿಂಗಳಿಗೆ 90 ಲಕ್ಷ ರೂ. ಸಂಬಳ ಪಡೆಯುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News