77 ಎಸೆತ, 22 ಸಿಕ್ಸರ್, 205 ರನ್..ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು!

ಇನ್ನಿಂಗ್ಸ್‌ನ ಕೆಲ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್‌ದಾಸ್ ಮೆನನ್ ಅವರು ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. "ವೆಸ್ಟ್ ಇಂಡಿಯನ್ ರಹಕೀಮ್ ಕಾರ್ನ್‌ವಾಲ್, ಅಟ್ಲಾಂಟಾ ಫೈರ್‌ಗಾಗಿ ಆಡುವಾಗ, ಅಟ್ಲಾಂಟಾ ಓಪನ್ ಎಂದು ಕರೆಯಲ್ಪಡುವ ಅಮೇರಿಕನ್ T20 ಸ್ಪರ್ಧೆಯಲ್ಲಿ 22 ಸಿಕ್ಸರ್‌ಗಳು ಮತ್ತು 17 ಬೌಂಡರಿಗಳನ್ನು ಒಳಗೊಂಡಂತೆ ಕೇವಲ 77 ಎಸೆತಗಳಲ್ಲಿ (SR 266.23) ಅಜೇಯ 205 ರನ್ ಸಿಡಿಸಿದರು" ಎಂದು ಬರೆದಿದ್ದಾರೆ.

Written by - Bhavishya Shetty | Last Updated : Oct 7, 2022, 12:08 AM IST
    • ಅಟ್ಲಾಂಟಾ ಓಪನ್ T20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅಪರೂಪದ ಸಾಧನೆ
    • 77 ಎಸೆತಕ್ಕೆ 205 ರನ್ ಬಾರಿಸಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ
    • ರಹಕೀಮ್ ಕಾರ್ನ್‌ವಾಲ್ 77 ಎಸೆತಕ್ಕೆ 22 ಸಿಕ್ಸರ್ ಒಳಗೊಂಡಂತೆ 205 ರನ್ ಬಾರಿಸಿದ್ದಾರೆ
77 ಎಸೆತ, 22 ಸಿಕ್ಸರ್, 205 ರನ್..ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು! title=
Raheem Cornwall,

ಅಮೇರಿಕಾದಲ್ಲಿ ನಡೆದ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಟಗಾರ 77 ಎಸೆತಗಳಲ್ಲಿ ಅಜೇಯ 205 ರನ್ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟಿಗ ರಹಕೀಮ್ ಕಾರ್ನ್‌ವಾಲ್ ಯುಎಸ್‌ಎಯಲ್ಲಿ ನಡೆದ ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅಟ್ಲಾಂಟಾ ಓಪನ್ T20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಡುವಾಗ ಕಾರ್ನ್‌ವಾಲ್ 22 ಬೃಹತ್ ಸಿಕ್ಸರ್‌ಗಳನ್ನು ಸಿಡಿಸಿ ಕೇವಲ 77 ಎಸೆತಗಳಲ್ಲಿ 205 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. 

ಇದನ್ನೂ ಓದಿ: 2022 ರ ಫಿಫಾ ವಿಶ್ವಕಪ್ ಲಾಸ್ಟ್ ಎಂದ ಲಿಯೋನೆಲ್ ಮೆಸ್ಸಿ!

ಇನ್ನಿಂಗ್ಸ್‌ನ ಕೆಲ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್‌ದಾಸ್ ಮೆನನ್ ಅವರು ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. "ವೆಸ್ಟ್ ಇಂಡಿಯನ್ ರಹಕೀಮ್ ಕಾರ್ನ್‌ವಾಲ್, ಅಟ್ಲಾಂಟಾ ಫೈರ್‌ಗಾಗಿ ಆಡುವಾಗ, ಅಟ್ಲಾಂಟಾ ಓಪನ್ ಎಂದು ಕರೆಯಲ್ಪಡುವ ಅಮೇರಿಕನ್ T20 ಸ್ಪರ್ಧೆಯಲ್ಲಿ 22 ಸಿಕ್ಸರ್‌ಗಳು ಮತ್ತು 17 ಬೌಂಡರಿಗಳನ್ನು ಒಳಗೊಂಡಂತೆ ಕೇವಲ 77 ಎಸೆತಗಳಲ್ಲಿ (SR 266.23) ಅಜೇಯ 205 ರನ್ ಸಿಡಿಸಿದರು" ಎಂದು ಬರೆದಿದ್ದಾರೆ.

ರಹಕೀಮ್ ಕಾರ್ನ್‌ವಾಲ್ ಅವರು 22 ಬೃಹತ್ ಸಿಕ್ಸರ್‌ಗಳೊಂದಿಗೆ 205*(77) ದ್ವಿಶತಕದೊಂದಿಗೆ ಅಟ್ಲಾಂಟಾ ಫೈರ್ ಅನ್ನು ಅಗ್ರಸ್ಥಾನದಲ್ಲಿಟ್ಟರು ಎಂದು ಮೈನರ್ ಲೀಗ್ ಕ್ರಿಕೆಟ್ ಟ್ವೀಟ್ ಮೂಲಕ ಹೇಳಿದೆ. 

ಇದನ್ನೂ ಓದಿ: ಸೋತರೂ ದಾಖಲೆ ಬರೆದ ಟೀಂ ಇಂಡಿಯಾ: ಏಕದಿನ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಇವರೇ

ಅಟ್ಲಾಂಟಾ ಫೈರ್ ಒಂದು ವಿಕೆಟ್ ನಷ್ಟಕ್ಕೆ 326 ರನ್ ಪೇರಿಸಿದೆ. ಆದರೆ ಎದುರಾಳಿ ತಂಡವಾದ ಸ್ಕ್ವೇರ್ ಡ್ರೈವ್ ಎಂಟು ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಲಷ್ಟೇ ಶಕ್ತವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News