Caribbean premier league 2023: ಎರಡೂ ತಂಡಗಳು ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದವು. ಪಂದ್ಯದಲ್ಲಿ ಮೊದಲು ಆಡಿದ ಸೇಂಟ್ ಕಿಟ್ಸ್ 4 ವಿಕೆಟ್ ಗೆ 220 ರನ್’ಗಳ ಬೃಹತ್ ಸ್ಕೋರ್ ಗಳಿಸಿತ್ತು. ಪ್ರತ್ಯುತ್ತರವಾಗಿ ಕಣಕ್ಕಿಳಿದ 140 ಕೆಜಿ ತೂಕದ ರಹಕೀಮ್ ಕಾರ್ನ್’ವಾಲ್ 12 ಸಿಕ್ಸರ್’ಗಳೊಂದಿಗೆ ಶತಕ ಪೂರೈಸಿದ್ದಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇನ್ನಿಂಗ್ಸ್ನ ಕೆಲ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖ್ಯಾತ ಸಂಖ್ಯಾಶಾಸ್ತ್ರಜ್ಞ ಮೋಹನ್ದಾಸ್ ಮೆನನ್ ಅವರು ಟ್ವೀಟ್ನಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. "ವೆಸ್ಟ್ ಇಂಡಿಯನ್ ರಹಕೀಮ್ ಕಾರ್ನ್ವಾಲ್, ಅಟ್ಲಾಂಟಾ ಫೈರ್ಗಾಗಿ ಆಡುವಾಗ, ಅಟ್ಲಾಂಟಾ ಓಪನ್ ಎಂದು ಕರೆಯಲ್ಪಡುವ ಅಮೇರಿಕನ್ T20 ಸ್ಪರ್ಧೆಯಲ್ಲಿ 22 ಸಿಕ್ಸರ್ಗಳು ಮತ್ತು 17 ಬೌಂಡರಿಗಳನ್ನು ಒಳಗೊಂಡಂತೆ ಕೇವಲ 77 ಎಸೆತಗಳಲ್ಲಿ (SR 266.23) ಅಜೇಯ 205 ರನ್ ಸಿಡಿಸಿದರು" ಎಂದು ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.