ವಿಶ್ವಕಪ್ ಸೋಲಿನ ನಂತರವೂ ಕೊಹ್ಲಿ ತಂಡದ ನಾಯಕನಾಗಿರುವುದೇಕೆ?- ಗವಾಸ್ಕರ್ ಪ್ರಶ್ನೆ

ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ನಂತರ ವೆಸ್ಟ್ ಇಂಡೀಸ್ ಸರಣಿಗೂ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರನ್ನು ಮುಂದುವರೆಸಿದ್ದರ ಬಗ್ಗೆ ಭಾರತದ ದಂತಕಥೆ ಆಟಗಾರ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jul 29, 2019, 06:16 PM IST
ವಿಶ್ವಕಪ್ ಸೋಲಿನ ನಂತರವೂ ಕೊಹ್ಲಿ ತಂಡದ ನಾಯಕನಾಗಿರುವುದೇಕೆ?- ಗವಾಸ್ಕರ್ ಪ್ರಶ್ನೆ  title=

ನವದೆಹಲಿ: ವಿಶ್ವಕಪ್ ನಲ್ಲಿ ಸೆಮಿಫೈನಲ್ ನಲ್ಲಿ ಭಾರತ ತಂಡ ಸೋತ ನಂತರ ವೆಸ್ಟ್ ಇಂಡೀಸ್ ಸರಣಿಗೂ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ಅವರನ್ನು ಮುಂದುವರೆಸಿದ್ದರ ಬಗ್ಗೆ ಭಾರತದ ದಂತಕಥೆ ಆಟಗಾರ ಸುನಿಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಿಡ್ ಡೇಗೆ ಬರೆದಿರುವ ಅಂಕಣದಲ್ಲಿ 'ವೆಸ್ಟ್ ಇಂಡೀಸ್ ಸರಣಿಗೂ ಮೊದಲು ಯಾವುದೇ ಔಪಚಾರಿಕ ಸಭೆಯನ್ನು ನಡೆಸದೆ ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ಮುಂದುವರೆಸಿದ್ದರ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಅವರು ಮೊದಲು ನಾಯಕನನ್ನು ಆಯ್ಕೆ ಮಾಡಲು ಸಭೆ ನಡೆಸದೆ ವೆಸ್ಟ್ ಇಂಡೀಸ್‌ಗೆ ತಂಡವನ್ನು ಆಯ್ಕೆ ಮಾಡಿರುವುದು ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಮುಂದುವರೆಸಿರುವುದು ಆಯ್ಕೆ ಸಮಿತಿಯ ಸಂತೋಷಕ್ಕಾಗಿಯೇ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ" ಎಂದು ಗವಾಸ್ಕರ್ ಅಂಕಣದಲ್ಲಿ ಬರೆದಿದ್ದಾರೆ .

' ನನಗೆ ತಿಳಿದ ಮಟ್ಟಿಗೆ ಕೊಹ್ಲಿ ನೇಮಕಾತಿ ವಿಶ್ವಕಪ್ ವರಗೆ ಇತ್ತು, ಅದರ ನಂತರ  ಮರು ನೇಮಕಾತಿಗಾಗಿ ಐದು ನಿಮಿಷಗಳಾದರೂ ಭೇಟಿ ಮಾಡುವುದು ಆಯ್ಕೆದಾರರು ಮಾಡಬೇಕಾಗಿತ್ತು  ಎಂದು ಅವರು ಹೇಳಿದರು. ಆದಾಗ್ಯೂ ಎಂ.ಎಸ್.ಕೆ ಪ್ರಸಾದ ನೇತೃತ್ವದ ಆಯ್ಕೆ ಸಮಿತಿಯು ಎಲ್ಲಾ ಸ್ವರೂಪದ ಆಟಕ್ಕೆ ವಿರಾಟ್ ಕೊಹ್ಲಿಯವರನ್ನು ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಲ್ಲದೆ, ಸುಪ್ರೀಂ ಕೋರ್ಟ್ ನೇಮಕ ಮಾಡಿದ ನಿರ್ವಾಹಕರ ಸಮಿತಿ (ಸಿಒಎ) ಅವರು ವಿಶ್ವಕಪ್ ನಲ್ಲಿನ ತಂಡದ ಸಾಧನೆಯನ್ನು ಪರಿಶೀಲಿಸುವುದಿಲ್ಲ ಮತ್ತು ವ್ಯವಸ್ಥಾಪಕರ ವರದಿಯನ್ನು ಮಾತ್ರ ಪರಿಶೀಲಿಸಲಾಗುವುದು ಎಂದು ಹೇಳಿತ್ತು.

ಭಾರತ ತಂಡ ಆಯ್ಕೆ ಸಮಿತಿಯನ್ನು ಟೀಕಿಸಿದ ಗವಾಸ್ಕರ್ ಅವರು ಅದನ್ನು ಕುಂಟ ಬಾತುಕೋಳಿ ಎಂದು ವ್ಯಂಗ್ಯವಾಡಿದರು.

Trending News