ಅರ್ಧ ಮೀಸೆ ಬೋಳಿಸುವುದಾಗಿ ರವಿಚಂದ್ರನ್ ಅಶ್ವಿನ್ ಹೇಳಿದ್ದೇಕೆ ?

ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾವುದೇ ಸ್ಪಿನ್ನರ್ ವಿರುದ್ಧ ಟಾಪ್ ಓವರ್ ನಲ್ಲಿ ಹೊಡೆದರೆ ಅರ್ಧ ಮೀಸೆ ಬೋಳಿಸುವುದಾಗಿ ರವಿಚಂದ್ರನ್ ಆಶ್ವಿನ್ ಚೇತೆಶ್ವರ್ ಪೂಜಾರ್ ಗೆ ಸವಾಲು ಹಾಕಿದ್ದಾರೆ.

Last Updated : Jan 26, 2021, 12:56 PM IST
  • 'ನಾವು ಆಡಲಿರುವ ಈ ಇಂಗ್ಲಿಷ್ ಸರಣಿಯಲ್ಲಿ ಮೊಯೀನ್ ಅಲಿ ಅಥವಾ ಇನ್ನಾವುದೇ ಸ್ಪಿನ್ನರ್ ವಿರುದ್ಧ ಹೀಗೆ ಮಾಡಿದಲ್ಲಿ ನಾನು ಅರ್ಧ ಮೀಸೆ ಬೋಳಿಸಿ ಆಟವಾಡಲು ಬರುತ್ತೇನೆ. ಇದು ನನ್ನಾ ಮುಕ್ತ ಸವಾಲು"
  • ಅಶ್ವಿನ್ ಮತ್ತು ಪೂಜಾರಾ ಇಬ್ಬರೂ ಈಗ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್ ಫೆಬ್ರವರಿ 5 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿದೆ.
ಅರ್ಧ ಮೀಸೆ ಬೋಳಿಸುವುದಾಗಿ ರವಿಚಂದ್ರನ್ ಅಶ್ವಿನ್ ಹೇಳಿದ್ದೇಕೆ ? title=
file photo

ನವದೆಹಲಿ: ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಾವುದೇ ಸ್ಪಿನ್ನರ್ ವಿರುದ್ಧ ಟಾಪ್ ಓವರ್ ನಲ್ಲಿ ಹೊಡೆದರೆ ಅರ್ಧ ಮೀಸೆ ಬೋಳಿಸುವುದಾಗಿ ರವಿಚಂದ್ರನ್ ಆಶ್ವಿನ್ ಚೇತೆಶ್ವರ್ ಪೂಜಾರ್ ಗೆ ಸವಾಲು ಹಾಕಿದ್ದಾರೆ.

ಭಾರತದ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೌರ್ ಅವರೊಂದಿಗಿನ ಸಂವಾದದಲ್ಲಿ, ಪೂಜಾರಾ ಸವಾಲನ್ನು ಪೂರ್ಣಗೊಳಿಸಿದರೆ  ಅಶ್ವಿನ್ (Ravichandran Ashwin) ಅವರು ತಮ್ಮ ಅರ್ಧದಷ್ಟು ಮೀಸೆ ಕ್ಷೌರ ಮಾಡುವುದಾಗಿ ಹೇಳಿದರು.'ಪೂಜಾರಾ ಆಫ್ ಸ್ಪಿನ್ನರ್ ಅನ್ನು ಮೇಲಿಂದ ಮೇಲೆ ಹೊಡೆಯುವುದನ್ನು ನಾವು ಎಂದಾದರೂ ನೋಡುತ್ತೇವೆಯೇ?"ಎಂದರು ಇದಕ್ಕೆ ಉತ್ತರಿಸಿದ ರಾಥೌರ್ 'ಕೆಲಸ ಪ್ರಗತಿಯಲ್ಲಿದೆ. ಒಮ್ಮೆಯಾದರೂ ಟಾಪ್ ಓವರ್ ನಲ್ಲಿ ಹೋಗಲು ಅವನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವನಿಗೆ ಇನ್ನೂ ಮನವರಿಕೆಯಾಗಿಲ್ಲ, ಅವನು ನನಗೆ ದೊಡ್ಡ ಕಾರಣಗಳನ್ನು ನೀಡುತ್ತಿದ್ದಾನೆ' ಎಂದು ಹೇಳಿದರು.

ಇದನ್ನೂ ಓದಿ: ICC Test Ranking: ಸ್ಥಾನೋನ್ನತಿ ಪಡೆದ ವಿರಾಟ್ ಕೊಹ್ಲಿ, ಟಾಪ್ 10 ನಲ್ಲಿ ಶಾಮೀಲಾದ ಪೂಜಾರಾ ಹಾಗೂ ರಹಾಣೆ

'ನಾವು ಆಡಲಿರುವ ಈ ಇಂಗ್ಲಿಷ್ ಸರಣಿಯಲ್ಲಿ ಮೊಯೀನ್ ಅಲಿ ಅಥವಾ ಇನ್ನಾವುದೇ ಸ್ಪಿನ್ನರ್ ವಿರುದ್ಧ ಹೀಗೆ ಮಾಡಿದಲ್ಲಿ ನಾನು ಅರ್ಧ ಮೀಸೆ ಬೋಳಿಸಿ ಆಟವಾಡಲು ಬರುತ್ತೇನೆ. ಇದು ನನ್ನಾ ಮುಕ್ತ ಸವಾಲು" ಎಂದು ಅಶ್ವಿನ್ ತಮಾಷೆಯಾಗಿ ಹೇಳಿದರು."ಅದನ್ನು ಎದುರಿಸಲು ಒಂದು ದೊಡ್ಡ ಸವಾಲು. ಅವನು ಅದನ್ನು ತೆಗೆದುಕೊಳ್ಳುತ್ತಾನೆ ಎಂದು ಭಾವಿಸೋಣ. ಅವನು ಅದನ್ನು ತೆಗೆದುಕೊಳ್ಳುತ್ತಾನೆ ಎಂದು ನಾನು ಭಾವಿಸುವುದಿಲ್ಲ" ಎಂದು ರಾಥೌರ್ ಹೇಳಿದರು.

ಇದನ್ನೂ ಓದಿ: ಜನ್ಮ ದಿನದ ಸಂಭ್ರಮದಲ್ಲಿ ಭಾರತದ ಟೆಸ್ಟ್ ತಜ್ಞ Cheteshwar Pujara

ಪೂಜಾರಾ (Cheteshwar Pujara) ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅಂತಿಮ ಟೆಸ್ಟ್ ನಲ್ಲಿನ ಅವರ ರಕ್ಷಣಾತ್ಮಕ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಅವರ ರಕ್ಷಣಾತ್ಮಕ ವಿಧಾನಕ್ಕಾಗಿ ಆಗಾಗ್ಗೆ ಟೀಕಿಸಲ್ಪಟ್ಟ ಪೂಜಾರ, ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಯೋಧನಂತೆ ಬ್ಯಾಟಿಂಗ್ ಮಾಡಿದರು. ಅವರು ದೇಹ, ಬೆರಳುಗಳು ಮತ್ತು ತಲೆಗೆ ವೇಗದ ಬೌಲ್ ಗಳು ಅಪ್ಪಳಿಸಿದವು ,ಆದರೂ ಅವರು ಧೃತಿಗೆಡದೆ ಬ್ಯಾಟಿಂಗ್ ಮಾಡಿದರು. 

ಅಶ್ವಿನ್ ಮತ್ತು ಪೂಜಾರಾ ಇಬ್ಬರೂ ಈಗ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಟೆಸ್ಟ್ ಫೆಬ್ರವರಿ 5 ರಂದು ಚೆನ್ನೈನಲ್ಲಿ ಪ್ರಾರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News