ಮಹಿಳಾ IPL ಮಾಧ್ಯಮ ಹಕ್ಕು ಪಡೆದ Viacom 18: 5 ವರ್ಷದ ಒಪ್ಪಂದಕ್ಕೆ BCCI ಪಡೆದ ಹಣವೆಷ್ಟು ಗೊತ್ತಾ?

Women Indian Premier League Media Rights: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ, "ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ್ದಕ್ಕಾಗಿ ವಯಾಕಾಮ್ 18 ಗೆ ಅಭಿನಂದನೆಗಳು. Viacom18 ರೂ 951 ಕೋಟಿ ಭರವಸೆ ನೀಡಿದೆ, ಅಂದರೆ ಮುಂದಿನ 5 ವರ್ಷಗಳವರೆಗೆ (2023-27) ಪ್ರತಿ ಪಂದ್ಯಕ್ಕೆ ರೂ 7.09 ಕೋಟಿ ಮೌಲ್ಯವನ್ನು ನೀಡುತ್ತದೆ. ಮಹಿಳಾ ಕ್ರಿಕೆಟ್‌ಗೆ ಇದು ಮಹತ್ವದ ದಿನ” ಎಂದು ಹೇಳಿದ್ದಾರೆ

Written by - Bhavishya Shetty | Last Updated : Jan 16, 2023, 02:38 PM IST
    • ವಯಕಾಮ್ 18 ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದೆ
    • 951 ಕೋಟಿ ರೂಪಾಯಿಗಳ ಒಪ್ಪಂದ ಖಚಿತ
    • ಐದು ವರ್ಷಗಳವರೆಗೆ ಈ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ ಸಂಸ್ಥೆ
ಮಹಿಳಾ IPL ಮಾಧ್ಯಮ ಹಕ್ಕು ಪಡೆದ Viacom 18: 5 ವರ್ಷದ ಒಪ್ಪಂದಕ್ಕೆ BCCI ಪಡೆದ ಹಣವೆಷ್ಟು ಗೊತ್ತಾ?  title=
Women IPL

Women Indian Premier League Media Rights: ವಯಕಾಮ್ 18 ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದೆ. Viacom18 951 ಕೋಟಿ ರೂಪಾಯಿಗಳ ಒಪ್ಪಂದವನ್ನು ಖಚಿತಪಡಿಸಿದ್ದು, ಐದು ವರ್ಷಗಳವರೆಗೆ (2023 ರಿಂದ 2027) ಈ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ್ದಾರೆ. ಮಹಿಳಾ ಐಪಿಎಲ್ ಈ ವರ್ಷದ ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ಮಾಧ್ಯಮ ಹಕ್ಕುಗಳ ಮಾರಾಟದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರೇ ಮಾಹಿತಿ ನೀಡಿದ್ದಾರೆ.

 ಇದನ್ನೂ ಓದಿ: Virat Kohli: ಪತಿಯ ಸಾಧನೆಗೆ ಪತ್ನಿಯ ಮೆಚ್ಚುಗೆ: ಶತಕ ವೀರ ಕೊಹ್ಲಿಯ ಪೋಸ್ಟ್ ಹಾಕಿ ರೊಮ್ಯಾಂಟಿಕ್ ವಿಶ್ ಮಾಡಿದ ಅನುಷ್ಕಾ

ಬಿಸಿಸಿಐ ಕಾರ್ಯದರ್ಶಿ ಟ್ವೀಟ್:

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ, "ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ್ದಕ್ಕಾಗಿ ವಯಾಕಾಮ್ 18 ಗೆ ಅಭಿನಂದನೆಗಳು. Viacom18 ರೂ 951 ಕೋಟಿ ಭರವಸೆ ನೀಡಿದೆ, ಅಂದರೆ ಮುಂದಿನ 5 ವರ್ಷಗಳವರೆಗೆ (2023-27) ಪ್ರತಿ ಪಂದ್ಯಕ್ಕೆ ರೂ 7.09 ಕೋಟಿ ಮೌಲ್ಯವನ್ನು ನೀಡುತ್ತದೆ. ಮಹಿಳಾ ಕ್ರಿಕೆಟ್‌ಗೆ ಇದು ಮಹತ್ವದ ದಿನ” ಎಂದು ಹೇಳಿದ್ದಾರೆ.

ಮಹಿಳಾ ಆಟಗಾರ್ತಿಯರಿಗೆ ಅನುಕೂಲ:

ಮಹಿಳಾ ಐಪಿಎಲ್‌ ಮಾಧ್ಯಮ ಹಕ್ಕುಗಳಿಗಾಗಿ ಇಂದು ನಡೆದ ಬಿಡ್ ಮತ್ತೊಂದು ಐತಿಹಾಸಿಕ ವಿಷಯಕ್ಕೆ ಸಾಕ್ಷಿಯಾಗಿದೆ. ಇದು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕೆ ಒಂದು ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ. ಇದು ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Virat Kohli: ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ! ‘ವಿರಾಟ್ ದಿ ಬಾಸ್’ ಎಂದ ಪಾಕ್ ಕ್ರಿಕೆಟಿಗ

ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್!

ಈ ವರ್ಷದ ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್ ಅನ್ನು ಆಯೋಜಿಸುವ ಸಾಧ್ಯತೆ ಇದೆ. ಇದರಲ್ಲಿ 5 ತಂಡಗಳು ಆಡುವುದನ್ನು ಕಾಣಬಹುದು. ಇದಕ್ಕೂ ಮುನ್ನ ಮಹಿಳಾ ಟಿ20 ಚಾಲೆಂಜ್ ಪಂದ್ಯಾವಳಿ ನಡೆದಿದ್ದು, ಇದರಲ್ಲಿ ಒಟ್ಟು 3 ತಂಡಗಳು ಆಡಿದ್ದವು. ಮಹಿಳಾ ಐಪಿಎಲ್ ಆಯೋಜನೆಯಿಂದ ಮಹಿಳಾ ಆಟಗಾರ್ತಿಯರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಜನವರಿ 16 ರಂದು ಮಹಿಳಾ ಐಪಿಎಲ್ ನ ಮಾಧ್ಯಮ ಹಕ್ಕುಗಳಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ವಯಾಕಾಮ್ 18 ರ ಹೊರತಾಗಿ, ಸೋನಿ ಮತ್ತು ಡಿಸ್ನಿ ಕೂಡ ಮಾಧ್ಯಮ ಹಕ್ಕುಗಳನ್ನು ಖರೀದಿಸುವ ರೇಸ್‌ನಲ್ಲಿದ್ದವು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News