Virat Kohli: ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ! ‘ವಿರಾಟ್ ದಿ ಬಾಸ್’ ಎಂದ ಪಾಕ್ ಕ್ರಿಕೆಟಿಗ

Virat Kohlis 46th century cheered in Pakistan: ಪಾಕಿಸ್ತಾನಿ ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನೋಡಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ಬೌಲರ್‌ಗಳನ್ನು ತಮ್ಮ ಬ್ಯಾಟ್  ಮೂಲಕ ಬೆಂಡೆತ್ತಿದ್ದಾರೆ. 110 ಎಸೆತಗಳಲ್ಲಿ 166 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡದ ಸ್ಕೋರ್ ಅನ್ನು 391 ರನ್‌ಗಳಿಗೆ ಕೊಂಡೊಯ್ದಿದ್ದಾರೆ.

Written by - Bhavishya Shetty | Last Updated : Jan 16, 2023, 12:43 PM IST
    • ವಿರಾಟ್ ಕೊಹ್ಲಿಯ ಬಿರುಗಾಳಿಯ ಇನ್ನಿಂಗ್ಸ್ ಪ್ರಪಂಚದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ
    • ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲೂ ಕೊಹ್ಲಿಯ ಅಭಿಮಾನಿಗಳು ಸಂಭ್ರಮಾಚರಣೆ
    • ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ ಪಾಕ್ ಕ್ರಿಕೆಟರ್ಸ್
Virat Kohli: ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ! ‘ವಿರಾಟ್ ದಿ ಬಾಸ್’ ಎಂದ ಪಾಕ್ ಕ್ರಿಕೆಟಿಗ title=
Virat Kohli

Virat Kohlis 46th century cheered in Pakistan: ತಿರುವನಂತಪುರಂ ಗ್ರೀನ್ ಫೀಲ್ಡ್ ಕಳೆದ ದಿನ ವಿರಾಟ್ ಕೊಹ್ಲಿಯವರ ಅಬ್ಬರದ ಆಟಕ್ಕರ ಸಾಕ್ಷಿಯಾಗಿತ್ತು. ಶ್ರೀಲಂಕಾ ವಿರುದ್ಧ ಆಡಿದ 166 ರನ್‌ಗಳ ವಿರಾಟ್ ಕೊಹ್ಲಿಯ ಬಿರುಗಾಳಿಯ ಇನ್ನಿಂಗ್ಸ್ ಪ್ರಪಂಚದಾದ್ಯಂತ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯ ವಿರಾಟ್ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದರೆ, ಇತ್ತ ಕೊಹ್ಲಿ ಶತಕ ಬಾರಿಸುತ್ತಿದ್ದಂತೆ ಪಾಕಿಸ್ತಾನದಲ್ಲೂ ಕೊಹ್ಲಿಯ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪಾಕಿಸ್ತಾನಿ ಕ್ರಿಕೆಟಿಗರು ಕೂಡ ವಿರಾಟ್ ಕೊಹ್ಲಿಯ ಇನ್ನಿಂಗ್ಸ್ ನೋಡಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶ್ರೀಲಂಕಾ ಬೌಲರ್‌ಗಳನ್ನು ತಮ್ಮ ಬ್ಯಾಟ್  ಮೂಲಕ ಬೆಂಡೆತ್ತಿದ್ದಾರೆ. 110 ಎಸೆತಗಳಲ್ಲಿ 166 ರನ್‌ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡದ ಸ್ಕೋರ್ ಅನ್ನು 391 ರನ್‌ಗಳಿಗೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ: IND vs SL: ಕೊಹ್ಲಿ ಭೇಟಿಯಾಗಲು ಮೈದಾನಕ್ಕೇ ಓಡೋಡಿ ಬಂದ ಅಭಿಮಾನಿ ಮಾಡಿದ್ದೇನು ಗೊತ್ತಾ?

ವಿರಾಟ್ ಕೊಹ್ಲಿ ಈ ಶತಕದ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಅವರು ಸಚಿನ್ ತೆಂಡೂಲ್ಕರ್‌ಗಿಂತ ಕೇವಲ ಮೂರು ಶತಕಗಳ ಹಿಂದೆ ಇದ್ದಾರೆ. ವಿರಾಟ್ ಕೊಹ್ಲಿ ಖಾತೆಯಲ್ಲಿ 46 ಶತಕಗಳನ್ನು ಹೊಂದಿದ್ದಾರೆ. ಇನ್ನು ನಾಲ್ಕು ಶತಕ ಗಳಿಸಿದ ತಕ್ಷಣ ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ.

ಕಮ್ರಾನ್ ಅಕ್ಮಲ್ ಹೇಳಿದ್ದೇನು ಗೊತ್ತಾ ?

ಹಲವು ಪಾಕಿಸ್ತಾನಿ ಆಟಗಾರರು ಕೊಹ್ಲಿಯ ಬ್ಯಾಟಿಂಗ್ ಅನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅತ್ಯಂತ ವಿಶೇಷವಾದ ಟ್ವೀಟ್ ಕಮ್ರಾನ್ ಅಕ್ಮಲ್ ಅವರದ್ದಾಗಿದ್ದು, ಅವರು ವಿರಾಟ್ ಕೊಹ್ಲಿಯನ್ನು ‘ಈ ಯುಗದ ಬಾಸ್’ ಎಂದು ಬಣ್ಣಿಸಿದ್ದಾರೆ. ಕೊಹ್ಲಿಯನ್ನು ಶ್ಲಾಘಿಸುತ್ತಲೇ ಕಮ್ರಾನ್ ಅಕ್ಮಲ್ ತಮ್ಮ ಟ್ವೀಟ್‌ನಲ್ಲಿ, “ರನ್ ಮೆಷಿನ್, ದಿ ಕಿಂಗ್, ಕೊಹ್ಲಿಯ 46 ನೇ ಏಕದಿನ ಶತಕ... ಅವರು ಈ ಯುಗದ ಬಾಸ್” ಎಂದು ಬರೆದಿದ್ದಾರೆ.

ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗ ಹಸನ್ ಅಲಿ ಕೂಡ ಕೊಹ್ಲಿಯನ್ನು ಹೊಗಳಿ ಟ್ವೀಟ್ ಮಾಡಿದ್ದು, ಅದರಲ್ಲಿ “ಕೊಹ್ಲಿಯ 46ನೇ ಶತಕ. ಅಭಿನಂದನೆಗಳು” ಎಂದು ಬರೆದುಕೊಂಡಿದ್ದಾರೆ. ಇನ್ನು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಕೂಡ ಟ್ವೀಟ್ ಮಾಡಿದ್ದು, “ಸರಣಿಯನ್ನು ಶತಕದಿಂದ ಆರಂಭಿಸಿ, ಶತಕದಿಂದಲೇ ಅಂತ್ಯಗೊಳಿಸಿದರು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: U19 T20 World Cup: 12 ಓವರ್, 25 ರನ್… ಟೀಂ ಆಲೌಟ್: ಟಿ20 ಕ್ರಿಕೆಟ್ ನಲ್ಲಿ ಹಿಂದೆಂದೂ ಸಂಭವಿಸಿಲ್ಲ ಇಂತಹ ಕಳಪೆ ಪ್ರದರ್ಶನ

ಈ ಪಂದ್ಯದಲ್ಲಿ ಕೊಹ್ಲಿ 110 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ ಅಜೇಯ 166 ರನ್ ಗಳಿಸಿದರು. ಇದು ಅವರ ವೃತ್ತಿ ಜೀವನದ ಎರಡನೇ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ. ಜೊತೆಗೆ  ಶ್ರೀಲಂಕಾದ ಆಟಗಾರ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿದ್ದಾರೆ. ಒಟ್ಟಾರೆ ವಿರಾಟ್ ಕೊಹ್ಲಿ ಏಕದಿನ ಪಂದ್ಯದಲ್ಲಿ 12,754 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News