ಪಾಕ್ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ವಿರುದ್ಧ ಕೇಸ್ ದಾಖಲು! ಕಾರಣವಾಯ್ತು ಈ ವರ್ತನೆ

Mohammad Rizwan, Cricket News in Kannada: ಅಕ್ಟೋಬರ್ 6 ರಂದು ಹೈದರಾಬಾದ್‌’ನಲ್ಲಿ ನೆದರ್ಲ್ಯಾಂಡ್ಸ್ (ಪಾಕಿಸ್ತಾನ vs ನೆದರ್ಲ್ಯಾಂಡ್ಸ್) ವಿರುದ್ಧ ಪಂದ್ಯ ನಡೆಯುತ್ತಿತ್ತು. ಆ ವೇಳೆ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಕ್ರೀಸ್‌’ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂಬ ಫೋಟೋ ಸಖತ್ ವೈರಲ್ ಆಗಿತ್ತು.

Written by - Bhavishya Shetty | Last Updated : Oct 16, 2023, 04:54 PM IST
    • ಮೊಹಮ್ಮದ್ ರಿಜ್ವಾನ್ ವಿರುದ್ಧ ದೂರು ದಾಖಲಾಗಿದೆ
    • ರಿಜ್ವಾನ್ ಕ್ರೀಸ್‌’ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂಬ ಫೋಟೋ ವೈರಲ್
    • ವಿಶ್ವಕಪ್‌’ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನದ ಪಂದ್ಯದ ವೇಳೆ ಈ ಘಟನೆ ನಡೆದಿದೆ
ಪಾಕ್ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ವಿರುದ್ಧ ಕೇಸ್ ದಾಖಲು! ಕಾರಣವಾಯ್ತು ಈ ವರ್ತನೆ title=
Mohammad Rizwan Namaz Controversy

Mohammad Rizwan: ಐಸಿಸಿ ಕ್ರಿಕೆಟ್ ಏಕದಿನ ವಿಶ್ವಕಪ್ 2023ರಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಈ ಮಧ್ಯೆ ಪಾಕಿಸ್ತಾನದ ವಿಕೆಟ್‌ ಕೀಪರ್ ಬ್ಯಾಟ್ಸ್‌’ಮನ್ ಮೊಹಮ್ಮದ್ ರಿಜ್ವಾನ್ ವಿರುದ್ಧ ದೂರು ಕೂಡ ದಾಖಲಾಗಿದೆ. ಈ ವಿಚಾರ ಇದೀಗ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸಿದ್ದು, ಮುಂದಿನ ಪಂದ್ಯಕ್ಕೆ ಅವರು ಲಭ್ಯವಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನೂ ಓದಿ:  ʼಜಿಎಸ್‌ಟಿʼಯಲ್ಲಿ ನಿವೇದಿತಾ ಘೋಸ್ಟ್‌...! ಮೊದಲಿನಂತೆ ಟ್ರೋಲ್‌ಗಳಿಗೆ ತೆಲೆಕೊಡಲ್ಲವೆಂದ ʼಚಂದನʼದ ಗೊಂಬೆ 

ಅಕ್ಟೋಬರ್ 6 ರಂದು ಹೈದರಾಬಾದ್‌’ನಲ್ಲಿ ನೆದರ್ಲ್ಯಾಂಡ್ಸ್ (ಪಾಕಿಸ್ತಾನ vs ನೆದರ್ಲ್ಯಾಂಡ್ಸ್) ವಿರುದ್ಧ ಪಂದ್ಯ ನಡೆಯುತ್ತಿತ್ತು. ಆ ವೇಳೆ ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ರಿಜ್ವಾನ್ ಕ್ರೀಸ್‌’ನಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂಬ ಫೋಟೋ ಸಖತ್ ವೈರಲ್ ಆಗಿತ್ತು. ಇದೇ ಕಾರಣದಿಂದ ಪಾಕಿಸ್ತಾನಿ ವಿಕೆಟ್ ಕೀಪರ್ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ.

2023ರ ಏಕದಿನ ವಿಶ್ವಕಪ್‌’ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದೀಗ ಪಾಕಿಸ್ತಾನಿ ಬ್ಯಾಟ್ಸ್ ಮನ್ ರಿಜ್ವಾನ್ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.

ಇದನ್ನೂ ಓದಿ: 30 ವರ್ಷಗಳ ಬಳಿಕ ನವರಾತ್ರಿಯಂದು ಅಖಂಡ ಗ್ರಹಯೋಗ! ಈ 3 ರಾಶಿಗೆ ರಾಜರಂತಹ ಜೀವನ, ದುಡ್ಡಿನ ಮಳೆ-ಬಂಪರ್ ಲಾಟರಿ ಭಾಗ್ಯ

ಮಾಧ್ಯಮ ವರದಿಗಳ ಪ್ರಕಾರ, ವಕೀಲ ವಿನೀತ್ ಜಿಂದಾಲ್ ರಿಜ್ವಾನ್ ವಿರುದ್ಧ ಅಧಿಕೃತ ದೂರು ನೀಡಲು ನಿರ್ಧರಿಸಿದ್ದಾರೆ. ಅಕ್ಟೋಬರ್ 6 ರಂದು ನಡೆದ ಪಂದ್ಯದಲ್ಲಿ ರಿಜ್ವಾನ್ ಅವರ ವರ್ತನೆಯನ್ನು ಅನುಸರಿಸಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕ ದೂರು ಸಲ್ಲಿಸಲಾಗಿದ್ದು, ಈ ದೂರಿನ ಪ್ರತಿಗಳನ್ನು ಐಸಿಸಿ ಎಥಿಕ್ಸ್ ಕಮಿಟಿ, ಭಾರತದಲ್ಲಿನ ಬಿಸಿಸಿಐ ಮತ್ತು ಪಾಕಿಸ್ತಾನದ ಪಿಸಿಬಿಗೆ ಕಳುಹಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News