ಅಹ್ಮದಾಬಾದ್: ಭಾರತ-ಆಸ್ಟ್ರೇಲಿಯ ನಡುವಿನ ಐತಿಹಾಸಿಕ ವಿಶ್ವಕಪ್ ಕ್ರಿಕೆಟ್ 2023 ಫೈನಲ್ ಪಂದ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನ ಪಂದ್ಯದಲ್ಲಿ ಯಾವ 11 ಆಟಗಾರರು ಟ್ರೋಫಿ ಗೆಲ್ಲಲು ಮೈದಾನಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಹಾಗೆ ನೋಡಿದರೆ ಭಾರತ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರನೂ ಮ್ಯಾಚ್ ವಿನ್ನರ್ ಆಗಿರುತ್ತಾರೆ, ಆದರೆ ಕಡ್ಡಾಯವಾಗಿ 11 ಆಟಗಾರರು ಮಾತ್ರ ಪ್ಲೇಯಿಂಗ್-11 ರಲ್ಲಿ ಆಡುತ್ತಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023 ಪ್ರಶಸ್ತಿ ಪಂದ್ಯದಲ್ಲಿ 4 ಆಟಗಾರರು ಬೆಂಚ್ನಲ್ಲಿ ಉಳಿಯಲು ಇದು ಕಾರಣವಾಗಿದೆ. ಆದರೆ, ಮೊಹಮ್ಮದ್ ಸಿರಾಜ್ ಬದಲಿಗೆ ಅಶ್ವಿನ್ ಪ್ಲೇಯಿಂಗ್-11ರ ಭಾಗವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಪ್ಲೇಯಿಂಗ್-11 ರಿಂದ ಹೊರಗುಳಿದಿರುವ ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (ICC World Cup Final 2023 News In Kannada)
ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್ ಆಗಮನ ಆತ್ಮವಿಶ್ವಾಸ ಹಾಗೂ ಅನುಭವ ನೀಡಿದ್ದು ತಂಡಕ್ಕೆ ಲಾಭದಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದಾಗ್ಯೂ, ಈಗ ವಿಷಯಗಳು ಬದಲಾಗಿವೆ. ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನ ಕಳೆದ ಒಂದು ಪಂದ್ಯದಲ್ಲಿ ಸ್ವಲ್ಪ ಕಳಪೆಯಾಗಿದೆ, ಆದರೆ ವಿನ್ನಿಂಗ್ ಕಾಂಬಿನೇಷನ್ ಬದಲಾವಣೆ ಮಾಡಲು ಇದು ಒಂದು ಕಾರಣವಾಗಿದೆ.
ಇದನ್ನೂ ಓದಿ- World Cup 2023 Final: ಭಾರತದ ಈ ಕ್ರಿಕೆಟ್ ದಿಗ್ಗಜನ ಮಾತು ರೋಹಿತ್ ಪಡೆ ಕೇಳಿದರೆ ಗೆಲುವು ಪಕ್ಕಾ ನಮ್ದೆ!
ಇಶಾನ್ ಕಿಶನ್
ಪ್ಲೇಯಿಂಗ್-11 ರಲ್ಲಿ ಸೂರ್ಯಕುಮಾರ್ ಯಾದವ್ ವೀಕ್ ಲಿಂಕ್, ಆದರೆ ನಾಯಕ ರೋಹಿತ್ ಶರ್ಮಾ ಸೂರ್ಯಕುಮಾರ್ ಮೇಲೆ ಸಾಕಷ್ಟು ನಂಬಿಕೆ ಹೊಂದಿದ್ದಾರೆ. ಅವರು ವಿನ್ನಿಂಗ್ ಕಾಂಬಿನೇಷನ್ ಹಾಳುಮಾಡಲು ಬಯಸುವುದಿಲ್ಲ. ಆದರೆ, ಸೂರ್ಯನಿಗೆ ಸಿಕ್ಕ ಅವಕಾಶಗಳು ಕಡಿಮೆ. ಈ ವಿಷಯ ಅವರ ಪರವಾಗಿ ಹೋಗುತ್ತದೆ. ಇಶಾನ್ ಕಿಶನ್ ಡಗೌಟ್ನಲ್ಲಿ ಕುಳಿತುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಪ್ರಸಿದ್ಧ ಕೃಷ್ಣ
ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಭಾರತವನ್ನು ಅನೇಕ ಪಂದ್ಯಗಳನ್ನು ಸ್ವಂತವಾಗಿ ಗೆಲ್ಲುವಂತೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರನಾಗಿ ಅವರು ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ, ಆದರೆ ಶಮಿ ತನ್ನನ್ನು ತಾನು ಸಾಬೀತುಪಡಿಸಿದ್ದಾರೆ ಮತ್ತು ಇದೀಗ ಪ್ರಸಿದ್ಧ್ಗೆ ಫೈನಲ್ನಲ್ಲಿ ಆಡುವುದು ಅಸಾಧ್ಯವಾಗಿದೆ.
ಇದನ್ನೂ ಓದಿ-ICC World Cup 2003 ಮತ್ತು 2023 ಫೈನಲ್ ಪಂದ್ಯಗಳ ನಡುವೆ ಅದ್ಭುತ ಹೋಲಿಕೆ, ಭಾರತ ಚಾಂಪಿಯನ್ ಆಗುವುದು ಪಕ್ಕಾ!
ಶಾರ್ದೂಲ್ ಠಾಕೂರ್
ಹಾರ್ದಿಕ್ ಪಾಂಡ್ಯ ನಿರ್ಗಮನದ ನಂತರ ಶಾರ್ದೂಲ್ಗೆ ಕೆಲವು ಪಂದ್ಯಗಳಲ್ಲಿ ಅವಕಾಶ ನೀಡಲಾಯಿತು, ಆದರೆ ಶಮಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆ, ಕನಿಷ್ಠ ವೇಗದ ಬೌಲಿಂಗ್ನಲ್ಲಿ ತಂಡದ ಒತ್ತಡವು ದೂರಾಗಿದೆ. ಶಮಿ ಸತತ ಗೆಲುವಿನ ಪ್ರದರ್ಶನ ನೀಡಿದ್ದು, ಟೀಂ ಇಂಡಿಯಾಕ್ಕೆ ಚಿನ್ನದ ಕೈ ಎನ್ನಲಾಗುತ್ತಿದೆ. ಅದೇನೇ ಇದ್ದರೂ ಇಂದು ಒಂದು ವೇಳೆ ಭಾರತ ಈ ವಿಶ್ವ ಕಪ್ ಗೆದ್ದರೆ ಡಗೌಟ್ ನಲ್ಲಿ ಕುಳಿತು ಪಂದ್ಯ ವೀಕ್ಷಿಸುವ ಈ ಆಟಗಾರರೂ ಕೂಡ ಮ್ಯಾಚ್ ವಿನ್ನರ್ಸ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.