ಯಾವುದೇ ಕಾರಣಕ್ಕೂ ಈ ಆಟಗಾರನನ್ನು ತಂಡದಿಂದ ಹೊರಗಿಡುವುದಿಲ್ಲ ರೋಹಿತ್ ! ನಾಳೆಯ ಪಂದ್ಯದ Playing 11 ಚಿತ್ರಣ ಸ್ಪಷ್ಟ !

ಭಾರತ ತಂಡವು ತನ್ನ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವುದು ಇಲ್ಲಿ ಬಹಳ ಮುಖ್ಯ. ನಾಳೆಯ ಪಂದ್ಯದ ಪ್ಲೇಯಿಂಗ್ 11 ಚಿತ್ರಣ ಸ್ಪಷ್ಟವಾಗಿದೆ.   

Written by - Ranjitha R K | Last Updated : Nov 1, 2023, 11:30 AM IST
  • ಈ ಆಟಗಾರನನ್ನು ತಂಡದಿಂದ ಕೈಬಿಡುವುದಿಲ್ಲ ನಾಯಕ ರೋಹಿತ್
  • ಧರ್ಮಶಾಲಾದಲ್ಲಿ ಶಾರ್ಟ್ ಬಾಲ್ ಗೆ ಔಟಾದ ಅಯ್ಯರ್
  • ಸ್ಪಷ್ಟವಾಗಿದೆ ಪ್ಲೇಯಿಂಗ್ 11 ಚಿತ್ರಣ
ಯಾವುದೇ ಕಾರಣಕ್ಕೂ ಈ ಆಟಗಾರನನ್ನು ತಂಡದಿಂದ ಹೊರಗಿಡುವುದಿಲ್ಲ ರೋಹಿತ್ ! ನಾಳೆಯ ಪಂದ್ಯದ Playing 11 ಚಿತ್ರಣ ಸ್ಪಷ್ಟ ! title=

World Cup 2023 : ವಿಶ್ವಕಪ್ 2023ರಲ್ಲಿ ಭಾರತ ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಬೇಕಾಗಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ 2023 ಪಂದ್ಯವು ನವೆಂಬರ್ 2 ರಂದು ಅಂದರೆ ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮಧ್ಯೆ, ಭಾರತ ತಂಡದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗುರುವಾರದ ಪಂದ್ಯಕ್ಕೂ ಮುನ್ನ ವಿಶೇಷ ತರಬೇತಿ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಶಾರ್ಟ್ ಬಾಲ್ ವಿರುದ್ಧದ ಅವರ ದೌರ್ಬಲ್ಯ ಮತ್ತೊಮ್ಮೆ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಈ ತರಬೇತಿ ನಡೆಯುತ್ತಿದೆ ಎನ್ನಲಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಈ ತರಬೇತಿಯಲ್ಲಿ ಭಾಗವಹಿಸಲಿಲ್ಲ. ಆದ್ದರಿಂದ ತರಬೇತಿ ಅವಧಿಯು ಶ್ರೇಯಸ್ ಅಯ್ಯರ್ ವಿರುದ್ಧ ಶಾರ್ಟ್ ಬಾಲ್ ಮೇಲೆ ಕೇಂದ್ರೀಕೃತವಾಗಿತ್ತು. 

ಈ ಆಟಗಾರನನ್ನು ತಂಡದಿಂದ ಕೈಬಿಡುವುದಿಲ್ಲ ನಾಯಕ ರೋಹಿತ್ :
ಭಾರತ ತಂಡವು 2023 ರ ವಿಶ್ವಕಪ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಿಂದಾಗಿ ಸೆಮಿಫೈನಲ್‌ನಲ್ಲಿ ಅದರ ಸ್ಥಾನವು ಬಹುತೇಕ ಖಚಿತವಾಗಿದೆ. ಆದರೆ ತಂಡವು ತನ್ನ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವುದು ಇಲ್ಲಿ ಬಹಳ ಮುಖ್ಯ. ಶಾರ್ಟ್ ಬಾಲ್‌ನ ವಿರುದ್ಧ ಅಯ್ಯರ್ ಅವರ ಸಮಸ್ಯೆ ದೂರವಾಗಬೇಕು ಎನ್ನುವುದು  ಟೀಮ್ ಮ್ಯಾನೇಜ್‌ಮೆಂಟ್ ಬಯಕೆ. ಇನ್ನು  ತಾನು ಎದುರಿಸುತ್ತಿರುವ ಈ ಸಮಸ್ಯೆಯಿಂದ ಹೊರಗೆ ಬರಲೇ ಬೇಕು ಎನ್ನುವ ಅಯ್ಯರ್ ತುಡಿತ ಮಂಗಳವಾರದ  ಸೆಷನ್ ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತವರು ನೆಲದಲ್ಲಿ, ಸುಡು ಬಿಸಿಲಿನಲ್ಲಿ ಈ ಬಲ ಗೈ ಬ್ಯಾಟ್ಸ್ ಮ್ಯಾನ್ ಸುಮಾರು ಎರಡು ಗಂಟೆಗಳ ಕಾಲ ಥ್ರೋಡೌನ್ ತಜ್ಞರಿಂದ ಸಾಕಷ್ಟು ಶಾರ್ಟ್ ಬಾಲ್‌ಗಳನ್ನು ಎದುರಿಸಿದರು.

ಇದನ್ನೂ ಓದಿ : ICC Cricket World Cup 2023: ಬಾಂಗ್ಲಾ ವಿರುದ್ಧ ಪಾಕ್ ಗೆ ಏಳು ವಿಕೆಟ್ ಗಳ ಸುಲಭ ಜಯ
 
ಸ್ಪಷ್ಟವಾಗಿದೆ ಚಿತ್ರಣ :  
ಅಯ್ಯರ್ ಆರಂಭದಲ್ಲಿ ಕೆಲವು ಸ್ಥಳೀಯ ನೆಟ್ ಬೌಲರ್‌ಗಳಿಂದ ಚೆಂಡುಗಳನ್ನು ಎದುರಿಸಿದರು. ಆದರೆ ನಂತರ ಅವರು ಭಾರತದ ಥ್ರೋಡೌನ್ ಸ್ಪೆಷಲಿಸ್ಟ್ ಡಿ ರಾಘವೇಂದ್ರ, ಶ್ರೀಲಂಕಾದ ನುವಾನ್ ಸೆನೆವಿರತ್ನೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಇತರರಿಂದ ಸಾಕಷ್ಟು ಶಾರ್ಟ್ ಬಾಲ್‌ಗಳನ್ನು ಎದುರಿಸಿದರು. ಕೊನೆಯಲ್ಲಿ, ಅಯ್ಯರ್‌ಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಥ್ರೋಡೌನ್ ನೀಡಿದರು. ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ  ಈ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದರು.

ಧರ್ಮಶಾಲಾದಲ್ಲಿ ಶಾರ್ಟ್ ಬಾಲ್ ಗೆ ಔಟಾದ ಅಯ್ಯರ್ :
ಥ್ರೋಡೌನ್ ಬೌಲರ್‌ಗಳಲ್ಲಿ ತಂಡದ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಕೂಡಾ ಇದ್ದರು. ಅಯ್ಯರ್ ಧರ್ಮಶಾಲಾದಲ್ಲಿ ಶಾರ್ಟ್ ಬಾಲ್‌ ಗೆ ಔಟಾಗಿದ್ದು, ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಇದೇ ಸಮಸ್ಯೆ ಮರುಕಳಿಸಿತ್ತು. ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡಾ ಸುದೀರ್ಘ ಕಾಲ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಇಶಾನ್ ಕಿಶನ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಕೂಡಾ ನಿಯಮಿತವಾಗಿ ಅಭ್ಯಾಸ ನಡೆಸಿದರು. ಆಲ್ ರೌಂಡರ್ ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ ಗಿಂತ ಹೆಚ್ಚಾಗಿ ಬ್ಯಾಟಿಂಗ್ ಅಭ್ಯಾಸಕ್ಕಿಳಿದಿದ್ದರು.  

ಇದನ್ನೂ ಓದಿ : ಗೆಲುವಿನ ನಾಗಾಲೋಟದಲ್ಲಿದ್ದರೂ ಈ ಸಣ್ಣ ತಪ್ಪು ಭಾರತವನ್ನು ವಿಶ್ವಕಪ್ ಸೆಮಿಫೈನಲ್ ನಿಂದ ಹೊರ ಹಾಕಬಹುದು !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News