ICC Cricket World Cup 2023: ಬಾಂಗ್ಲಾ ವಿರುದ್ಧ ಪಾಕ್ ಗೆ ಏಳು ವಿಕೆಟ್ ಗಳ ಸುಲಭ ಜಯ

ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ತಂಡವು ಬಾಂಗ್ಲಾ ವಿರುದ್ಧ ಏಳು ವಿಕೆಟ್ ಗಳ ಸುಲಭ ಗೆಲುವು ಸಾಧಿಸಿದೆ.

Written by - Manjunath N | Last Updated : Oct 31, 2023, 09:40 PM IST
  • ಟಾಸ್ ಗೆದ್ದ ಬಾಂಗ್ಲಾ ದೇಶದ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
  • ಶಹೀನ್ ಆಫ್ರಿದಿ 3, ಮೊಹಮ್ಮದ್ ವಾಸಿಂ ಜೂನಿಯರ್ 3,ಹಾಗೂ ಹರೀಶ್ ರಾಫ್ 2 ವಿಕೆಟ್ ಗಳನ್ನು ಕಬಳಿಸುವ ಮೂಲಕ ಬಾಂಗ್ಲಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ICC Cricket World Cup 2023: ಬಾಂಗ್ಲಾ ವಿರುದ್ಧ ಪಾಕ್ ಗೆ ಏಳು ವಿಕೆಟ್ ಗಳ ಸುಲಭ ಜಯ title=

ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕ್ ತಂಡವು ಬಾಂಗ್ಲಾ ವಿರುದ್ಧ ಏಳು ವಿಕೆಟ್ ಗಳ ಸುಲಭ ಗೆಲುವು ಸಾಧಿಸಿದೆ.

ಟಾಸ್ ಗೆದ್ದ ಬಾಂಗ್ಲಾ ದೇಶದ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಪಾಕ್ ತಂಡದ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶವು ತಂಡದ ಮೊತ್ತ 23 ಆಗುವಷ್ಟರಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು.ಈ ಸಂದರ್ಭದಲ್ಲಿ ಬಾಂಗ್ಲಾ ಪರವಾಗಿ ಮಹಮುದುಲ್ಲಾ 56, ಲಿಟ್ಟನ್ ದಾಸ್ 45,ಹಾಗೂ ಶಕೀಬ್ 43 ರನ್ ಗಳಿಸಿದರೆ ಉಳಿದ ಯಾವ ಆಟಗಾರನು ಕೂಡ 10 ರನ್ ಗಳ ಗಡಿ ದಾಟಲಿಲ್ಲ ಇದರಿಂದಾಗಿ ಅಂತಿಮವಾಗಿ 45.1 ಓವರ್ ಗಳಲ್ಲಿ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು 204 ರನ್ ಗಳಿಸಿತು.

ಪಾಕ್ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಶಹೀನ್ ಆಫ್ರಿದಿ 3, ಮೊಹಮ್ಮದ್ ವಾಸಿಂ ಜೂನಿಯರ್ 3,ಹಾಗೂ ಹರೀಶ್ ರಾಫ್ 2 ವಿಕೆಟ್ ಗಳನ್ನು ಕಬಳಿಸುವ ಮೂಲಕ ಬಾಂಗ್ಲಾ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಬಾಂಗ್ಲಾದೇಶವು ನೀಡಿದ 205 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನವು ಕೇವಲ ಮೂರು ವಿಕೆಟ್ ಗಳನ್ನು ಕಳೆದುಕೊಂಡು 32.3 ಓವರ್ ಗಳಲ್ಲಿ 205 ರನ್ ಗಳನ್ನು ಗಳಿಸಿತು. ಪಾಕ್ ಪರವಾಗಿ ಅಬ್ದುಲ್ಲಾ ಶಫಿಕ್ 68, ಹಾಗೂ ಫಕರ್ ಜಮಾನ್ 81 ರನ್ ಗಳನ್ನು ಗಳನ್ನು ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News