ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ನೆದರ್ಲ್ಯಾಂಡ್’ನ ಆ ಬೌಲರ್ ಯಾರು ಗೊತ್ತಾ? ಈತನಿಗಿದೆ RCB ನಂಟು

Who is Van der Merwe, cricket news in kannada: ಅಗ್ರಕ್ರಮಾಂಕದ 5 ಬ್ಯಾಟರ್’ಗಳು ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ಎಲ್ಲದರ ಮಧ್ಯೆ ವಿರಾಟ್ ಕೊಹ್ಲಿಯನ್ನು ನೆದರ್ಲ್ಯಾಂಡ್ ಬೌಲರ್ ಒಬ್ಬ ಕ್ಲೀನ್ ಬೌಲ್ಡ್ ಮಾಡಿದ್ದ. ಆತ ಯಾರು ಗೊತ್ತಾ?

Written by - Bhavishya Shetty | Last Updated : Nov 13, 2023, 12:36 AM IST
    • ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ
    • ನೆದರ್ಲ್ಯಾಂಡ್ ಬೌಲರ್ ಒಬ್ಬ ಕ್ಲೀನ್ ಬೌಲ್ಡ್ ಮಾಡಿದ್ದ. ಆತ ಯಾರು ಗೊತ್ತಾ?
    • ಅನುಭವಿ ಎಡಗೈ ಸ್ಪಿನ್ನರ್ ವ್ಯಾನ್ ಡೆರ್ ಮೆರ್ವೆ
ವಿರಾಟ್ ಕೊಹ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ ನೆದರ್ಲ್ಯಾಂಡ್’ನ ಆ ಬೌಲರ್ ಯಾರು ಗೊತ್ತಾ? ಈತನಿಗಿದೆ RCB ನಂಟು title=
van der merwe

Who is Van der Merwe: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಹಂತದ ಪಂದ್ಯವನ್ನು ಆಡಿದ್ದು, ಗೆಲುವು ಸಾಧಿಸಿದೆ. ಇದು ಭಾರತ-ನೆದರ್ಲೆಂಡ್ಸ್ ನಡುವಿನ ಕೊನೆಯ ಪಂದ್ಯವಾಗಿತ್ತು.

ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಕ್ಕ ದುಡ್ಡು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ದಂಗಾಗೋದು ಗ್ಯಾರಂಟಿ

ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗವು ಅದ್ಭುತವಾಗಿ ಆಟವಾಡಿದ್ದಲ್ಲದೆ, ಡಚ್ಚರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಳ್ಳಲ್ಲ. ಇನ್ನು ಅಗ್ರಕ್ರಮಾಂಕದ 5 ಬ್ಯಾಟರ್’ಗಳು ಅರ್ಧಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ಎಲ್ಲದರ ಮಧ್ಯೆ ವಿರಾಟ್ ಕೊಹ್ಲಿಯನ್ನು ನೆದರ್ಲ್ಯಾಂಡ್ ಬೌಲರ್ ಒಬ್ಬ ಕ್ಲೀನ್ ಬೌಲ್ಡ್ ಮಾಡಿದ್ದ. ಆತ ಯಾರು ಗೊತ್ತಾ?

ಅನುಭವಿ ಎಡಗೈ ಸ್ಪಿನ್ನರ್ ವ್ಯಾನ್ ಡೆರ್ ಮೆರ್ವೆ ನೆದರ್ಲೆಂಡ್ಸ್‌ ಪರ ಬೌಲಿಂಗ್ ಮಾಡಿ, ಕೊಹ್ಲಿಯನ್ನು ಔಟ್ ಮಾಡಿದ್ದರು. ಭಾರತೀಯ ಇನ್ನಿಂಗ್ಸ್‌’ನ 29 ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಅವರು, ಆ ಓವರ್‌ನ ನಾಲ್ಕನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನೆದರ್ಲೆಂಡ್ಸ್ ವಿರುದ್ಧ 91 ಸ್ಟ್ರೈಕ್ ರೇಟ್‌’ನಲ್ಲಿ 56 ಎಸೆತಗಳಲ್ಲಿ 51 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡಿತ್ತು. ವಿರಾಟ್ ಕೊಹ್ಲಿ ಪ್ರಸಕ್ತ ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 9 ಪಂದ್ಯಗಳಲ್ಲಿ 99 ರ ಅದ್ಭುತ ಸರಾಸರಿಯಲ್ಲಿ 594 ರನ್ ಗಳಿಸಿದ್ದಾರೆ. ಇದುವರೆಗೆ 5 ಅರ್ಧ ಶತಕ ಹಾಗೂ 2 ಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: “9 ಬೌಲರ್’ಗಳನ್ನು ಬಳಸಿಕೊಂಡರೂ ಭಾರತದ ಗೆಲುವಿಗೆ ಕಾರಣವಾಗಿದ್ದು ಈತ”- ರೋಹಿತ್ ಶರ್ಮಾ ಹೇಳಿಕೆ

ವ್ಯಾನ್ ಡೆರ್ ಮೆರ್ವೆ ಯಾರು?

ರೋಲೋಫ್ ವ್ಯಾನ್ ಡೆರ್ ಮೆರ್ವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ. 38 ವರ್ಷದ ಈ ಸ್ಪಿನ್ನರ್ ಆರ್’ಸಿಬಿಯಲ್ಲಿ ಒಟ್ಟಾಗಿ ಆಡುತ್ತಿದ್ದ ತನ್ನ ಸಹ ಆಟಗಾರನನ್ನೇ ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News