ವೇಸ್ಟ್ ಎನಿಸಿಕೊಂಡಿದ್ದ RCB ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ?

Yash Dayal Story To Indian Cricket Team: IPL 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು RCB ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್‌ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್‌ʼಗಳ ಅಗತ್ಯವಿತ್ತು.

Written by - Bhavishya Shetty | Last Updated : Sep 9, 2024, 05:44 PM IST
    • ಉತ್ತರ ಪ್ರದೇಶದ ಪರ ಆಡುತ್ತಿರುವ ವೇಗದ ಬೌಲರ್ ಯಶ್ ದಯಾಳ್
    • ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌
    • ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು RCB ನಡುವೆ ನಡೆಯಿತು
ವೇಸ್ಟ್ ಎನಿಸಿಕೊಂಡಿದ್ದ RCB ಬೌಲರ್ ಈಗ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ! ಅದೃಷ್ಟ ಅಂದ್ರೆ ಇದಲ್ವಾ? title=
File Photo

Yash Dayal Story To Indian Cricket Team: ಉತ್ತರ ಪ್ರದೇಶದ ಪರ ಆಡುತ್ತಿರುವ ವೇಗದ ಬೌಲರ್ ಯಶ್ ದಯಾಳ್ ಅವರು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್‌ʼಗೆ ಭಾರತದ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ:  ಬೇರಿನಿಂದಲೇ ದಷ್ಟಪುಷ್ಟ ಕಡುಕಪ್ಪಾದ ಕೂದಲು ಬೆಳೆಯಲು ಹುಣಸೆ ರಸವನ್ನು ಈ ರೀತಿ ಬಳಸಿ! ತಿಂಗಳುಗಟ್ಟಲೆ ಕಪ್ಪಾಗಿಯೇ ಇರುತ್ತದೆ

ಐಪಿಎಲ್ 2023 ರ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್‌ʼನ ರಿಂಕು ಸಿಂಗ್, ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದಾಗ ಯಶ್ ಎಸೆತದಲ್ಲಿ ಸತತ ಐದು ಸಿಕ್ಸರ್‌ʼಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆ 5 ಸಿಕ್ಸರ್ ಯಶ್ ವೃತ್ತಿಜೀವನವನ್ನು ಸಂಕಷ್ಟಕ್ಕೆ ದೂಡಿತ್ತು. ಮುಂದಿನ ಋತುವಿಗೂ ಮುನ್ನ ಗುಜರಾತ್ ಅವರನ್ನು ಬಿಡುಗಡೆ ಮಾಡಿತ್ತು. ನಂತರ 2024 ರಲ್ಲಿ, RCB ಯಶ್ ಅನ್ನು ತಮ್ಮ ತಂಡಕ್ಕೆ ಸೇರಿಸಿತು. ಅಲ್ಲಿಂದ ಅವರ ಅದೃಷ್ಟವೇ ಬದಲಾಯಿತು.

IPL 2024 ರಲ್ಲಿ, ಪಂದ್ಯಾವಳಿಯ 68 ನೇ ಪಂದ್ಯವು ಚೆನ್ನೈ ಮತ್ತು RCB ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಪ್ಲೇ ಆಫ್‌ʼಗೆ ಪ್ರವೇಶಿಸಬೇಕಾಯಿತು. ಕೊನೆಯ ಓವರ್‌ʼನಲ್ಲಿ ಚೆನ್ನೈ ಅರ್ಹತೆ ಪಡೆಯಲು 17 ರನ್‌ʼಗಳ ಅಗತ್ಯವಿತ್ತು. ಆರ್‌ʼಸಿಬಿ ಕೊನೆಯ ಓವರ್‌ʼಗೆ ಯಶ್ ದಯಾಳ್ ಮೇಲೆ ವಿಶ್ವಾಸ ವ್ಯಕ್ತಪಡಿಸಿತ್ತು. ಈ ಸಮಯದಲ್ಲಿ, ಎಂಎಸ್ ಧೋನಿ ಕ್ರೀಸ್‌ನಲ್ಲಿದ್ದರು. ಇನ್ನೊಂದು ಬದಿಯಲ್ಲಿ ರವೀಂದ್ರ ಜಡೇಜಾ ನಾನ್ ಸ್ಟ್ರೈಕ್ ಎಂಡ್‌ನಲ್ಲಿ ನಿಂತಿದ್ದರು.

ಯಶ್ ಬೌಲ್ ಮಾಡಿದ ಓವರ್‌ʼನ ಮೊದಲ ಎಸೆತವನ್ನು ಎಂಎಸ್ ಧೋನಿ ಸಿಕ್ಸರ್‌ʼಗೆ ಅಟ್ಟಿದರು. ಈಗ 5 ಎಸೆತಗಳಲ್ಲಿ ಕೇವಲ 11 ರನ್ ಬೇಕಿತ್ತು. ನಂತರ ಯಶ್ ದಯಾಳ್ ಮುಂದಿನ ಎಸೆತದಲ್ಲಿ ಧೋನಿಯನ್ನು ಔಟ್ ಮಾಡಿದರು. ನಂತರ ಯಶ್ ಮುಂದಿನ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್ ವ್ಯಯಿಸುವ ಮೂಲಕ ಆರ್‌ಸಿಬಿಯನ್ನು ಪ್ಲೇ ಆಫ್‌ಗೆ ಕರೆದೊಯ್ದರು.

ಇದನ್ನೂ ಓದಿ: ಸೆ.8ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನೆಯ ವಿವರ

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾ- ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ ಮತ್ತು ಯಶ್ ದಯಾಳ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News