ರಾಷ್ಟ್ರದ ಭದ್ರತೆ ಪ್ರಶ್ನೆ ಬಂದಾಗ ಏಕತೆಯ ಪ್ರದರ್ಶನ ಮಾಡಬೇಕು. ದೇಶದ ಗಡಿಯಲ್ಲಿ ಯೋಧರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುತ್ತಿದ್ದಾರೆ. ಟೆರರಿಸ್ಟ್ ಆದಾಗ ಬಹಳ ಅನುಕಂಪದಿಂದ ಮಾತಾಡಬಾರದು. ಬಾಂಬ್ ಬ್ಲಾಸ್ಟ್ ಆದಾಗ ಪಕ್ಷತೀತವಾಗಿ ಒಟ್ಟಾಗಿ ನಿಲ್ಲಬೇಕು. ಅವನ್ಯಾವನೋ ಟೆರರಿಸ್ಟ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ? ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಲ್ಪಸಂಖ್ಯಾತರ ಓಟ್ ಗಾಗಿ ಡಿಕೆಶಿಯಿಂದ ಓಲೈಕೆ ರಾಜಕಾರಣ ಮಾಡುವ ಮೂಲಕ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಭಯೋತ್ಪಾದಕ ಚಟುವಟಿಕೆ ಎಂದು ಸರ್ಕಾರ ಹೇಳಿರುವುದು ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಮಂಗಳೂರು ನಗರ ಹೊರವಲಯದ ಬಜ್ಪೆ ಸಮೀಪದ ತಲಕಳದ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿಯ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಸಾವಿನ ಕುರಿತು ಅನೇಕ ಸಂದೇಹಗಳು ವ್ಯಕ್ತವಾಗಿವೆ.
ಹಿಜಾಬ್ ಧರಿಸಿ ಸರ್ಕಾರಿ ನಿಯಮಾವಳಿಯನ್ನು ಉಲ್ಲಂಘಿಸಿ ತರಗತಿಗೆ ಪ್ರವೇಶಿಸುತ್ತಿದ್ದ 24 ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿತ್ತು. ಇದಕ್ಕೂ ಮೊದಲು 6 ಜನ ವಿದ್ಯಾರ್ಥಿನಿಯರು ಅಮಾನತು ಆಗಿದ್ದರು, ಅವರು ಇಂದು ಕಾಲೇಜಿಗೆ ಹಾಜರಾಗಿದ್ದಾರೆ.
ಕೊಂಚ ಕಾಲ ತಣ್ಣಗಿದ್ದ ಹಿಜಾಬ್ ವಿವಾದ ಮತ್ತೆ ಗರಿಗೆದರಿದೆ. ಇಂದು ಏಕಾಏಕಿ ಮಂಗಳೂರಿನ ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಕಾಲೇಜಿನಿಂದ ಸಕಾರಾತ್ಮಕ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ, ಹಿಜಾಬ್ ಧರಿಸಲು ಅವಕಾಶ ಕೊಡಬೇಕೆಂದು ವಿದ್ಯಾರ್ಥಿಯರು ಇದೀಗ ಡಿಸಿ ಕಚೇರಿ ಮೆಟ್ಟಿಲೇರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.