Viral Kohli Life Lessons: ಭಾರತೀಯ ದಿಗ್ಗಜ ವಿರಾಟ್ ಕೊಹ್ಲಿ ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅಚಲ ನಿರ್ಧಾರಕ್ಕೆ ಹೆಸರುವಾಸಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಯುಗದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಕೊಹ್ಲಿ ಭಾರತೀಯ ಕ್ರಿಕೆಟ್ನಲ್ಲಿ ತನಗಾಗಿ ಒಂದು ಸ್ಥಾನವನ್ನು ಕೆತ್ತಿಕೊಂಡಿದ್ದಾರೆ.
ಆಗಸ್ಟ್ 27 ರಿಂದ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಶ್ರೀಲಂಕಾ ಪ್ರವಾಸಕ್ಕೆ ಭಾರತ ಈಗಾಗಲೇ ತಯಾರಿ ನಡೆಸುತ್ತಿದ್ದು, ಆಗಸ್ಟ್ 3 ರಿಂದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ ಶ್ರೀಲಂಕಾದ ವಿರುದ್ಧ ಆಡಲಿದೆ. ಈ ಸರಣಿಯಿಂದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಕೋಚ್ ಆಗಿ ತಮ್ಮ ಜವಾಬ್ದಾರಿ ನಿರ್ವಹಿಸಿಲಿದ್ದಾರೆ. ತಂಡದ ಆಯ್ಕೆ ಸಂದರ್ಭದಲ್ಲಿ ಟಿ20 ನಾಯಕತ್ವದ ಕುರಿತು ಮಹತ್ವದ ಘೋಷಣೆಯಾಗುವ ನಿರೀಕ್ಷೆಯಿದೆ.
Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಂ ಇಂಡಿಯಾ ಬಾಲ್ ಟ್ಯಾಂಪರ್ ಮಾಡುತ್ತಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಪಾಕ್ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
T20 Worldcup 2024: ಶುಕ್ರವಾರ ಐರ್ಲೆಂಡ್ vs ಯುಎಸ್ಎ ನಡುವೆ ನಡೆಯಬೇಕಿದ್ದ ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಯಿತು. ಉಭಯ ತಂಡಗಳಿಗೆ ತಲಾ ಒಂದು ಅಂಕ ಹಂಚಲಾಯಿತು. ಈ ಮೂಲಕ 5 ಅಂಕ ಕಲೆಹಾಕಿದ ಯುಎಸ್ಎ ಸೂಪರ್ 8ಕ್ಕೆ ಪ್ವೇಶ ಪಡೆಯಿತು.
T20 World Cup records: ಟಿ ೨೦ ವಿಶ್ವಕಪ್ ನಲ್ಲಿನ ಬ್ಯಾಟಿಂಗ್ ದಾಖಲೆಗಳನ್ನು ನೋಡುತ್ತಾ ಹೋದಾಗ ವಿರಾಟ್ ಕೊಹ್ಲಿ 2022 ರ ಹಿಂದಿನ ಆವೃತ್ತಿಯ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮುರಿದರು. ಕೊಹ್ಲಿ ಕೇವಲ 25 ಇನ್ನಿಂಗ್ಸ್ಗಳಲ್ಲಿ 1141 ರನ್ಗಳೊಂದಿಗೆ ಅತಿ ಹೆಚ್ಚು ರನ್ಗಳ ಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದಾರೆ
Virat Kohli-Rohit Sharma: ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗುಂಪಿನಲ್ಲಿವೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಟೀಂ ಇಂಡಿಯಾ ಅಮೆರಿಕ ಪ್ರವೇಶಿಸಿದೆ.
T20 World Cup 2024: ಬಾಂಗ್ಲಾದೇಶದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024ಕ್ಕೆ ಎಂಟು ತಂಡಗಳು ಅರ್ಹತೆ ಪಡೆದಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ದೃಢಪಡಿಸಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಗ್ರೂಪ್ 1 ರಿಂದ ಅಗ್ರ ಮೂರು ತಂಡಗಳಾಗಿ ನೇರವಾಗಿ ಅರ್ಹತೆ ಪಡೆದ ತಂಡಗಳಾಗಿದ್ದು, ಇಂಗ್ಲೆಂಡ್, ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು 2 ನೇ ಗುಂಪಿನ ಮೂಲಕ ಸಮಾನವಾಗಿ ಪ್ರವೇಶಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.