ದೇಶದಲ್ಲಿ ಬಿಜೆಪಿ ಸಂಘಟನೆ ಬಲಿಷ್ಠವಾಗಿದೆ. ಕಾರ್ಯಕರ್ತರ ಪಡೆ ಇದೆ ಅತ್ಯಂತ ದೊಡ್ಡದಿದೆ. ರಾಜ್ಯದಲ್ಲಿ ಬೊಮ್ಮಾಯಿ ಅವರ ನಾಯಕತ್ವ ಇದೆ ಎಂದು ಬೆಂಗಳೂರಲ್ಲಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ರು. ಲಕ್ಷ್ಮಣ ಸವದಿ ಅವರು ಸೋತು ಸುಣ್ಣ ಆಗಿದ್ರು. ಅಂತವರನ್ನ ಡಿಸಿಎಂ ಮಾಡಿ ಪರಿಷತ್ ಸದಸ್ಯರಾಗಿ ಮಾಡಿದ್ರು. ಉಪ ಮುಖ್ಯಮಂತ್ರಿ ಆದಮೇಲೆ ಜನರಿಗೆ ಸವದಿ ಗೊತ್ತಾಗಿದ್ದು. ಶೆಟ್ಟರ್ ಹಿರಿಯರು.. ವಿಪಕ್ಷ ನಾಯಕರಾಗಿ, ಸಿಎಂ ಆಗಿದ್ದರು. ವೀರಶೈವ ಲಿಂಗಾಯತರನ್ನ ಮುಂದಿನ ಸಿಎಂ ಆಗಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ರೇಣುಕಾಚಾರ್ಯ.
ಬಾಕಿ ಉಳಿದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ BJP. ಶಿವಮೊಗ್ಗದಲ್ಲಿ ಚನ್ನಬಸಪ್ಪ, ಮಾನ್ವಿ ಕ್ಷೇತ್ರಕ್ಕೆ B.V. ನಾಯಕ್ಗೆ ಮಣೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಕುಟುಂಬಕ್ಕೆ ಕೈತಪ್ಪಿದ ಬಿಜೆಪಿ ಟಿಕೆಟ್. ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ತೆರೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಚೆನ್ನಬಸಪ್ಪಗೆ ಟಿಕೆಟ್ ಘೋಷಣೆ.
ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ. ಅಂತಿಮಗೊಳಿಸಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ. ಜಾತಿವಾರು ಲೆಕ್ಕಾಚಾರದ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ. ಬಿಜೆಪಿಗೆ ಲಿಂಗಾಯತ ವಿರೋಧಿ ಹಣೆಪಟ್ಟಿ ಕಟ್ಟಲು ʻಕೈʼ ಪ್ಲಾನ್. ಲಿಂಗಾಯತರಿಗೆ ಅನ್ಯಾಯವಾಗಿಲ್ಲ ಎಂಬ ಸಂದೇಶ ರವಾನೆ. ಜಾತಿವಾರು ಪಟ್ಟಿ ಬಿಡುಗಡೆ ಮಾಡಿದ ಹೈಕಮಾಂಡ್ ನಾಯಕರು.
Karnataka assembly Election: ಪಕ್ಷದ ಘಟಾನುಘಟಿ ಲಿಂಗಾಯತ ನಾಯಕರಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ದಶಕಗಳಿಂದ ಬಿಜೆಪಿಯಲ್ಲಿ ನಿರತರಾಗಿದ್ದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ನಾಯಕರು ಬಿಜೆಪಿ ತೊರೆದಿದ್ದಾರೆ. ಇದರೊಂದಿಗೆ ವಿರೋಧ ಪಕ್ಷಗಳು ಬಿಜೆಪಿ ಲಿಂಗಾಯತ ವಿರೋಧಿ ಪಕ್ಷ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.