ಚನ್ನಪಟ್ಟಣ ಉಪಚುನಾವಣೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು ಇದೀಗ ಯಾರು ಗೆಲ್ಲಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಆದರೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ.
ಗೊಂಬೆನಾಡಲ್ಲಿ ಹೈವೋಲ್ಟೇಜ್ ಮಿನಿ ಕದನ ಶುರು!
ಕಾಂಗ್ರೆಸ್ v/s ದೋಸ್ತಿಗಳ ನಡುವೆ ನೇರಾನೇರ ಫೈಟ್
ಸಿಪಿವೈ v/s ನಿಖಿಲ್ ಯಾರ ಕೈ ಹಿಡಿತಾರೆ ಮತದಾರರು
ಚನ್ನಪಟ್ಟಣ ಚುನಾವಣೆ ಕಣದಲ್ಲಿ 31 ಜನ ಅಭ್ಯರ್ಥಿಗಳು
ಜಿದ್ದಾ ಜಿದ್ದಿನ ಅಖಾಡವಾಗಿ ಮಾರ್ಪಟ್ಟಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದೆ. ಇಂದು ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದ್ದು, ಬುಧವಾರ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ
ಬಹಿರಂಗ ಪ್ರಚಾರದ ಕೊನೆಯ ಗಳಿಗೆಯಲ್ಲಿ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ವಿರುದ್ಧ ನೀಡಿದ ಹೇಳಿಕೆ ಸಾಕಷ್ಟು ಸದ್ದು ಗದ್ದಲಕ್ಕೆ ಕಾರಣವಾಗುತ್ತಿದೆ. ಕುಮಾರಸ್ವಾಮಿಯವರನ್ನು ನಾನು ಪ್ರೀತಿಯಿಂದ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಿದ್ರು” ಎಂದು ಜಮೀರ್ ಅಹ್ಮದ್ ಖಾನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ದಿನದಿಂದ ದಿನಕ್ಕೆ ರಂಗೇರಿದ ಬೊಂಬೆನಾಡು ಕಣ
ʻಸೈನಿಕʼನ ಪರ ಕಾಂಗ್ರೆಸ್ ಜೋಡೆತ್ತು ಕ್ಯಾಂಪೇನ್
ಚನ್ನಪಟ್ಟಣದಲ್ಲಿಂದು ಬೃಹತ್ ಸಭೆ ಆಯೋಜನೆ
ಯೋಗೇಶ್ವರ್ ಮತಯಾಚನೆ ಮಾಡಲಿರುವ ಸಿಎಂ-ಡಿಸಿಎಂ
ಉಪಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣ ಎಂದ್ರೆ ಅದು ಚನ್ನಪಟ್ಟಣ ಕ್ಷೇತ್ರ ತಮ್ಮ ಮಗನನ್ನು ಶತಾಯ ಗತಾಯ ಗೆಲ್ಲಿಸಿಕೊಳ್ಳು ಪಣ ತೊಟ್ಟಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.. ಎಸ್ ಎಂ ಹಳ್ಳಿ ಗ್ರಾಮದಲ್ಲಿ ಕೇಂದ್ರ ಸಚಿವರಾದ ಎಚ್ಡಿ ಕುಮಾರಸ್ವಾಮಿ ಬೃಹತ್ ಪ್ರಚಾರ ಸಭೆ ನಡೆಸಿದ್ರು.. ನಿಖಿಲ್ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ರು..
ಇಂದು ಚನ್ನಪಟ್ಟಣದಲ್ಲಿ ಎನ್ಡಿಎ ಶಕ್ತಿ ಪ್ರದರ್ಶನ
ನಿಖಿಲ್ ಕುಮಾರಸ್ವಾಮಿ ಇಂದು ನಾಮಿನೇಷನ್
ನಾಮಿನೇಷನ್ಗೂ ಮೊದಲು ಬೃಹತ್ ರೋಡ್ ಶೋ
ರೋಡ್ ಶೋದಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಭಾಗಿ
ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ಪಕ್ಷ ಎರಡು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಬಿಜೆಪಿ ತೊರೆದು ಇಂದಷ್ಟೇ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಸಿಪಿ ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.
ನ. 13ರಂದು ಚನ್ನಪಟ್ಟಣ ಉಪಚುನಾವಣೆ
ಇಂದು ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ
ಮಧ್ಯಾಹ್ನ 12 ಗಂಟೆಗೆ ʻಸೈನಿಕʼ ನಾಮಿನೇಷನ್
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ
ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವು ಸಚಿವರು ಭಾಗಿ
ಈ ಲೋಕಸಭೆಯಲ್ಲಿ ಮೈತ್ರಿಕೂಟದ ಭಾಗವಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಹೊಂದಾಣಿಕೆ ಬೆಳೆದಿದೆ. ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಯಾವುದೇ ತೀರ್ಮಾನ ಕೈಗೊಳ್ಳುವ ಉದ್ವೇಗಕ್ಕೆ ಒಳಗಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Channapatna by-election: ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಸೀಟು ಅವರದ್ದೇ ಆಗಿರುವುದರಿಂದ ಹಾಗೂ ಎನ್ಡಿಎ ಪಾರ್ಟ್ನರ್ ಆಗಿರುವುದರಿಂದ ಜೆಡಿಎಸ್ನವರ ಸಲಹೆ ಪ್ರಮುಖವಾಗಿರುತ್ತದೆ. ಇನ್ನು ಎರಡು ದಿನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದರು.
Channapatna By-Election 2024: ರಾಜೀನಾಮೆ ನೀಡಿದ ಬಳಿಕ ತಾವು ಸ್ವತಂತ್ರ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದೇನೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯೋಗೇಶ್ವರ್ ದೊಡ್ಡವರು, ಅವರ ಬಗ್ಗೆ ಏನು ಚರ್ಚೆ ಮಾಡಲಿ
ಯೋಗೇಶ್ವರ್ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ
ಪಕ್ಷೇತರ ಅಭ್ಯರ್ಥಿಯಾಗ್ತಾರೆ ಅನ್ನೋ ಸುದ್ದಿಯೂ ಇದೆ
ಅವರ ನಿರ್ಧಾರದ ಬಗ್ಗೆ ನನ್ನ ಬಳಿ ಚರ್ಚೆ ನಡೆಸಿಲ್ಲ
ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎಚ್ಡಿಕೆ ಹೇಳಿಕೆ
ಚನ್ನಪಟ್ಟಣದ ವಿಚಾರ ಯಾವುದೇ ಚರ್ಚೆ ಆಗಿಲ್ಲ
ಎರಡು ವಿರೋಧ ಪಕ್ಷಗಳು ಒಂದಾಗಿವೆ ಎಂದು ಕೇಳಿದಾಗ "ಒಂದು, ಎರಡು, ಮೂರಾದರೂ ಆಗಲಿ ನಮಗೆ ಅದು ಸಂಬಂಧವಿಲ್ಲ. ನಾವು ಜನಸೇವೆ ಮಾಡುತ್ತೇವೆ, ಅದರ ಮೇಲೆ ಮಿಕ್ಕಿದ್ದನ್ನು ಜನರ ತೀರ್ಮಾನಕ್ಕೆ ಬಿಟ್ಟಿದ್ದು" ಎಂದರು.
ಇನ್ನೊಂದೆಡೆಗೆ ಸ್ಥಳೀಯವಾಗಿಯೂ ಕಾರ್ಯಕರ್ತರು ಡಿಕೆಶಿವಕುಮಾರ್ ಅವರೇ ಸ್ಪರ್ಧೆ ಮಾಡಬೇಕೆಂಬ ಒತ್ತಾಯಿಸಿದ್ದಾರೆ. ಜೊತೆಗೆ ಡಿಕೆಶಿ ಸ್ಪರ್ಧಿಸಿದರೆ ಮಾತ್ರ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲುವ ಅವಕಾಶವಿದೆ ಎನ್ನುವ ವರದಿ ಇದ್ದಿರುವುದರಿಂದಾಗಿ ಈಗ ಅವರು ರಾಜಕಾರಣದಲ್ಲಿ ಮತ್ತೊಮ್ಮೆ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.