ಮೋದಿಯವರ ಟಕ್ಕರ್ ಆಗಲಿ, ಅಮಿತ್ ಶಾ ಟಕ್ಕರ್ ಆಗಲಿ ನಮ್ಮತ್ರ ನಡೆಯೊಲ್ಲ. ಕರ್ನಾಟಕದ ಜನ ಬುದ್ದಿವಂತರಿದ್ದಾರೆ. ರಾಮನಗರ ಜಿಲ್ಲೆಯ ಜನ ಎಲ್ಲರನ್ನೂ ನೋಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಬಿಜೆಪಿ ಹೈಕಮಾಂಡ್ ಮಾಜಿ ಡಿಸಿಎಂ ಆರ್.ಅಶೋಕ್ ರನ್ನ ಕನಕಪುರ ಅಭ್ಯರ್ಥಿ ಮಾಡಿದೆ. ಏನಾಗುತ್ತೋ ನೋಡೊಣ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಲಕ್ಷ್ಮಣ್ ಸವದಿ ಅವರಿಗೆ ಬಿಜೆಪಿ ಟಿಕೆಟ್ ನೀಡದೇ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಪಕ್ಷದ ಮೇಲೆ ಈ ಮೂವರು ನಾಯಕರು ಹರಿಹಾಯ್ದಿದ್ದಾರೆ. ಇದರ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಒಂದು ವೇಳೆ ಗಾಲಿ ಜನಾರ್ಧನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಈ ಮೂವರು ದಿಗ್ಗಜರು ಸೇರಿದಂತೆ ಅಸಮಾಧಾನಿತ ಬಿಜೆಪಿ ನಾಯಕರು ಸಾಥ್ ನೀಡಿದ್ರೆ, ಈ ಭಾಗದಲ್ಲಿ ಬಿಜೆಪಿ ಗೆಲ್ಲುವು ಕಷ್ಟಕರವಾಗಲಿದೆ.
189 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿದೆ. ಅಲ್ಲದೆ, ಈ ಬಾಗಿ ಬರೋಬ್ಬರಿ 52 ಹೊಸ ಮುಖಗಳಿಗೆ ಕಮಲ ಪಾಳಯ ಮಣೆ ಹಾಕಿದೆ. ಇದರ ನಡುವೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನ ತುಂಬಿದ್ದ ದಿಗ್ಗಜ ನಾಯಕರಿಗೆ ಟಿಕೆಟ್ ನೀಡದೇ ಹೈಕಮಾಂಡ್ ಶಾಕ್ ನೀಡಿದೆ.
ಬಿಜೆಪಿಯವರು ಬರೀ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಿದ್ದಾರೆ, ಕಾಂಗ್ರೆಸ್ ಅಭಿವೃದ್ಧಿ ಪರದ ಸರ್ಕಾರ ನೋಡಿದ್ದಾರೆ ಆದ್ದರಿಂದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲಿದ್ದು ಕಾಂಗ್ರೆಸ್ ಗೆಲ್ಲಲಿದೆ ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿಯವರು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.