CORONAVIRUS ಕುರಿತಾಗಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಕಾಲ್ಪನಿಕ ವರದಿಗಳನ್ನು ಹೊಡೆದು ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ, ಶರೀರದಲ್ಲಿ ಒಂದು ಬಾರಿಗೆ ಯಾವುದೇ ವೈರಸ್ ಪ್ರವೇಶಿಸಿದರೆ, ಕ್ಲೋರಿನ್ ಅಥವಾ ಅಲ್ಕೋಹಾಲ್ ಸಿಂಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದೆ.
CORONAVIRUS: ದೂರ ಸಂಪರ್ಕ ಸೇವೆ ಒದಗಿಸುವ ಒಂದು ಕಂಪನಿ ನೀಡಿರುವ ಮಾಹಿತಿ ಪ್ರಕಾರ ಹಣ ನೀಡಿ ಕಾಲರ್ ಟ್ಯೂನ್ ಬಳಸುತ್ತಿರುವ ಗ್ರಾಹಕರ ನಂಬರ್ ಗಳ ಮೇಲೆ ಈ ಆಡಿಯೋ ಸಂದೇಶ ಲಭ್ಯ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ನ ಆತಂಕ ಹೆಚ್ಚಾಗಿದೆ. ರಾಷ್ಟ್ರರಾಜಧಾನಿ ಸಮೇತ ದೇಶದ ಇತರೆ ಭಾಗಗಳಲ್ಲಿ ಸುಮಾರು 29 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ಈ ವೈರಸ್ ನಿಂದ ಬಚಾವಾಗಲು ಹಲವು ಸಲಹೆಗಳು ಇದೀಗ ಮುಂದೆ ಬರಲಾರಂಭಿಸಿವೆ. ಈ ಸಲಹೆಗಳಲ್ಲಿ ಸಾರಾಯಿ ಕುಡಿಯುವವರ ಮೇಲೆ ಈ ಕೊರೊನಾ ವೈರಸ್ ದಾಳಿ ಮಾಡುವುದಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಹಾಗಿದ್ದರೆ ಬನ್ನಿ ಈ ಸಲಹೆಯ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ಅರಿಯೋಣ.
CORONAVIRUS ಇಂದು ವಿಶ್ವಾದ್ಯಂತದ ಸುಮಾರು 60 ದೇಶಗಳಲ್ಲಿ ತನ್ನ ಪ್ರಭಾವ ತೋರಿಸಲು ಆರಂಭಿಸಿದೆ. ಭಾರತವೂ ಕೂಡ ಇದಕ್ಕೆ ಹೊರತಾಗಿಲ್ಲ. ವರದಿಗಳ ಪ್ರಕಾರ ಭಾರತದಲ್ಲಿ ಒಟ್ಟು ಐದು ಜನರು ಈ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಎನ್ನಲಾಗಿದೆ. ಸರ್ಕಾರ ಈ ಪ್ರಕರಣಗಳ ಮೇಲೆ ನಿರಂತರ ನಿಗಾವಹಿಸಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.