Omicron sub-variant BA.4 and BA.5: ಒಮಿಕ್ರಾನ್ನ ಉಪ-ವೇರಿಯಂಟ್ ಬಿಎ.4 ಮತ್ತು ಬಿಎ.5 ಗೆ ಸಂಬಂಧಿಸಿದಂತೆ, ಸೋಂಕನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅದರ ಪ್ರಕರಣಗಳು ಹೆಚ್ಚಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಆರಂಭದ ಎರಡು ಕೋವಿಡ್ ಅಲೆಗಳಲ್ಲಿ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಕರೋನಾ ಮೂರನೇ ಅಲೆಯಲ್ಲಿ ಕರೋನಾದಿಂದಾಗಿ ಹೆಚ್ಚು ಸಾವು-ನೋವು ಆಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಯಿತು. ಅದಾಗ್ಯೂ, ಕರೋನಾವೈರಸ್ ಹೊಸ ರೂಪಾಂತರವೂ ದೇಶದಲ್ಲಿ ಕೋವಿಡ್ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದ್ದು ಕೊರೋನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದು ಕೇವಲ ಸರ್ಕಾರದ ಕೆಲಸವಲ್ಲ, ಸಾರ್ವಜನಿಕರ ಕರ್ತವ್ಯವೂ ಹೌದು ಎಂಬುದರಲ್ಲಿ ಎರಡು ಮಾತಿಲ್ಲ.
ಕರೋನಾ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ. ಇದಕ್ಕೆ ನಿದರ್ಶನ ಎಂಬಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್ ನಲ್ಲಿ ಫ್ಯಾಮಿಲಿಯೊಂದು ಕೊರೊನಾ ವಿಶೇಷ ಜಾಗೃತಿಯೊಂದಿಗೆ ಮದುವೆ ಕಾರ್ಯಕ್ರಮ ಮಾಡಿದೆ.
Covid 19 XE Variant symptoms: ಭಾರತದಲ್ಲೂ ಕೂಡ ಕೊರೊನಾ ವೈರಸ್ನ ಹೊಸ ರೂಪಾಂತರ ಎಕ್ಸ್ಇ ಯ ರೋಗಿಗಳು ಪತ್ತೆಯಾಗಲು ಪ್ರಾರಂಭಿಸಿದ್ದಾರೆ. ಹಾಗಾಗಿ, ಕರೋನಾ ಹೊಸ ರೂಪಾಂತರವನ್ನು ತಡೆಯುವ ಮಾರ್ಗಗಳನ್ನು ತಿಳಿದುಕೊಳ್ಳುವ ಆತುರ ಎಲ್ಲರಿಗೂ ಇರುತ್ತದೆ. ಹಾಗಾದರೆ ಈ ರೂಪಾಂತರದ ಲಕ್ಷಣಗಳು ಯಾವುವು ಮತ್ತು ಅದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.