H3N2 virus Death Cases: ಕೊರೊನಾ ಮಹಾಮಾರಿಯ ಬಳಿಕ ಇದೀಗ ದೇಶವು H3N2 ವೈರಸ್ ವಿರುದ್ಧ ಹೋರಾಡುತ್ತಿದೆ. ಕಳೆದ ಕೆಲವು ವಾರಗಳಲ್ಲಿ, ಭಾರತದಲ್ಲಿ ಇನ್ಫ್ಲುಯೆನ್ಸ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ದೇಶದ ರಾಷ್ಟ್ರೀಯ ಮತ್ತು ಆರ್ಥಿಕ ರಾಜಧಾನಿಯಲ್ಲಿ ಜ್ವರ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ.
Influenza First Death In India: ಪ್ರಸ್ತುತ, ಹಾಂಗ್ ಕಾಂಗ್ ಜ್ವರ ಎಂದೂ ಕರೆಯಲ್ಪಡುವ H3N2 ವೈರಸ್ನ 90 ಪ್ರಕರಣಗಳು ದೇಶದಲ್ಲಿ ದೃಢಪಟ್ಟಿವೆ. ಇದಲ್ಲದೇ ಎಂಟು ಎಚ್1ಎನ್1 ಪ್ರಕರಣಗಳು ವರದಿಯಾಗಿವೆ.
ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರು, ಕರೋನಾವೈರಸ್ ಶೀಘ್ರದಲ್ಲೇ ಸಾಮಾನ್ಯ ಕಾಯಿಲೆಗಳಂತೆ ಅಂದರೆ ಜ್ವರ, ಕೆಮ್ಮು, ನೆಗಡಿಯಂತೆ ಆಗುತ್ತದೆ. ಏಕೆಂದರೆ ಈಗ ಈ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಜನರಲ್ಲಿ ಸಿದ್ಧಪಡಿಸಲಾಗಿದೆ. ಆದರೆ ಅನಾರೋಗ್ಯ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಕಾಯಿಲೆಯಿಂದ ಜೀವಕ್ಕೆ ಅಪಾಯವನ್ನು ಎದುರಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.