ನಾಳೆಯಿಂದ 2023ನೇ ಸಾಲಿನ ವಿಧಾನಸಭಾ ಚುನಾವಣೆಗೆ ಮತದಾನ. ನಾಳೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಿದ ಚುನಾವಣೆ ಅಯೋಗ. ಏಪ್ರಿಲ್ 29ರಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಶುರು. ಏಪ್ರಿಲ್ 29ರಿಂದ ಮೇ 6ರವರೆಗೆ ಬ್ಯಾಲೆಟ್ ಪೇಪರ್ ಮತದಾನಕ್ಕೆ ಅವಕಾಶ. ರಾಜ್ಯ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲೂ ಬ್ಯಾಲೆಟ್ ಪೇಪರ್ ವೋಟಿಂಗ್.
ಕಾಂಗ್ರೆಸ್ ನೆಲಸಮ ಆಗುತ್ತೆ.. ಲಕ್ಷ್ಮಣ್ ಸವದಿ ದ್ರೋಹ ಮಾಡವ್ರೆ. ಅಥಣಿ ಜನರು ನೀವು ಸವದಿ ಸೋಲಿಸಿ ಎಂದು ಕರೆ ನೀಡಿದ ಬಿಎಸ್ವೈ. ಲಕ್ಷ್ಮಣ್ ಸವದಿ ಬಿಜೆಪಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಚಿಕ್ಕೋಡಿ ಬಿಜೆಪಿ ಕಾರ್ಯಕ್ರಮದಲ್ಲಿ ಬಿಜೆಪಿ ರಾಜಾಹುಲಿ ಘರ್ಜನೆ.
ಕಾಂಗ್ರೆಸ್ನವರು ಹತಾಶರಾಗಿ ಈ ರೀತಿ ಹೇಳುತ್ತಿದ್ದಾರೆ. 100 ವರ್ಷದ ಸಂಸ್ಕೃತಿಯನ್ನ ಕಾಂಗ್ರೆಸ್ ಗಾಳಿಗೆ ತೂರಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರು ಅಧಿಕಾರದ ಮದದಲ್ಲಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ರು.
ಪ್ರಧಾನಿ ಮೋದಿ ವಿಷದ ಹಾವು ಎಂಬ ಖರ್ಗೆ ಹೇಳಿಕೆ ವಿಚಾರ. ಮಲ್ಲಿಕಾರ್ಜುನ ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು. ಇಂತಹ ಹೇಳಿಕೆಗಳು ಕಾಂಗ್ರೆಸ್ ಮುಖಂಡರಿಗೆ ಶೋಭೆ ತರೋದಿಲ್ಲ ಎಂದು ಗದಗ ಜಿಲ್ಲೆಯ ನರಗುಂದದಲ್ಲಿ ಸಚಿವ ಸಿ.ಸಿ.ಪಾಟೀಲ್ ಆಕ್ರೋಶ ಹೊರಹಾಕಿದ್ರು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡಿಗೆ ಪ್ರಧಾನಿ ಮೋದಿ ಲೇವಡಿ. ದೇಶದಲ್ಲಿ ಭ್ರಷ್ಟಾಚಾರಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಿಗೆ ಯಾರು ಬಲಿಯಾಗಬೇಡಿ. ಉಚಿತಗಳ ಹೆಸರಿನಲ್ಲಿ ದೇಶ ಲೂಟಿ ಮಾಡಲು ಹೊರಟಿದೆ. ಕಾಂಗ್ರೆಸ್ ಮಾತಿನಲ್ಲೇ ಡೋಲು ಬಾರಿಸುತ್ತದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ರು. ದೇಶದಲ್ಲಿ ಭ್ರಷ್ಟಾಚಾರಕ್ಕಾಗಿ ಕಾಂಗ್ರೆಸ್ ಗ್ಯಾರಂಟಿ ನೀಡುತ್ತಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಿಗೆ ಯಾರು ಬಲಿಯಾಗಬೇಡಿ. ಉಚಿತಗಳ ಹೆಸರಿನಲ್ಲಿ ದೇಶ ಲೂಟಿ ಮಾಡಲು ಹೊರಟಿದೆ. ಕಾಂಗ್ರೆಸ್ ಮಾತಿನಲ್ಲೇ ಡೋಲು ಬಾರಿಸುತ್ತದೆ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ರು
ಕರ್ನಾಟಕದಲ್ಲಿ ಯುವ ಪೀಳಿಗೆಯ ಅಭಿವೃದ್ಧಿ ಯೋಚಿಸಬೇಕು. ಕೋವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ನೀಡಿದ್ದೇವೆ. ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಎಲೆಕ್ಷನ್ ಟಾಸ್ಕ್. ಕರ್ನಾಟಕಕ್ಕೆ ಮುಂದಿನ ದಿನಗಳಲ್ಲಿ ಯೋಜನೆಗಳು ಬರಲಿವೆ. ಕೆಲವು ಪಕ್ಷಗಳು ರಾಜಕೀಯ ಲೂಟಿ ಮಾಡಿವೆ ಎಂದು ಪ್ರಧಾನಿ ಮೋದಿ ಕಿಡಿ.
ಡಬಲ್ ಇಂಜಿನ್ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಆಗುತ್ತಿದೆ. ಬಿಜೆಪಿ ಸರ್ಕಾರ ಯಾವುದೇ ಶಾರ್ಟ್ ಕಟ್ ಹಿಡಿಯೋದಿಲ್ಲ. ಶ್ರಮದಿಂದಲೇ ದೇಶದ ಅಭಿವೃದ್ಧಿ ಮಾಡುತ್ತೇವೆ ಎಂದ ಪ್ರಧಾನಿ ಮೋದಿ. ಬಿಜೆಪಿ ಪಕ್ಷ ದೂರದೃಷ್ಟಿಯಿಂದ ಅಭಿವೃದ್ಧಿ ಮಾಡುತ್ತಿದೆ. ಮೆಟ್ರೋ.. ಏರ್ಪೋರ್ಟ್.. ರೈಲ್ವೇ.. ಮೆಡಿಕಲ್.. ಐಐಟಿ ಸೇರಿ ಹಲವು ಯೋಜನೆಗಳನ್ನ BJP ಸರ್ಕಾರ ಸ್ಥಾಪನೆ ಮಾಡಿದೆ ಎಂದ ಪ್ರಧಾನಿ ಮೋದಿ.
ಪ್ರಧಾನಿ ಮೋದಿ ರಾಜ್ಯದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. 2-3 ದಿನದಲ್ಲಿ ರಾಜ್ಯದ ಚುನಾವಣಾ ಚಿತ್ರಣ ಬದಲಾಗಲಿದೆಎಂದು ಪ್ರಧಾನಿ ಮೋದಿ ಸಂವಾದದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ರು.
ನಟ ಧ್ರುವ ಸರ್ಜಾ ಕೂಡಾ ಚುನಾವಣಾ ಪ್ರಚಾರ ಅಖಾಡಕ್ಕಿಳಿಯಲಿದ್ದಾರೆ.. ಇದೇ ತಿಂಗಳ 28ರಿಂದ0ಸ್ನೇಹಿತರ ಪರ ಧ್ರುವ ಸರ್ಜಾ ಮತಬೇಟೆ ನಡೆಸಲಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಕ್ಯಾಂಪೇನ್ ಮಾಡಲಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಜಗಳೂರಿನಲ್ಲಿ ರಾಮಚಂದ್ರ ಗೆದ್ದೇ ಗೆಲ್ತಾರೆ ಎಂದು ಜಗಳೂರಿನಲ್ಲಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.. 140 ಸೀಟು ಗೆದ್ದು ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ 65 ರಿಂದ 70 ಸ್ಥಾನ ದಾಟೋದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ..
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕ್ಷಮೆ ಕೇಳಿಲ್ಲ. ನಾವು ಕೇಳು ಅಂತ ಕೂಡ ಹೇಳಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಮ್ಮ ಗುರಿ ಒಂದೇ ಚುನಾವಣೆ ಗೆಲ್ಲಬೇಕು. ಶೆಟ್ಟರ್ ಕ್ಷಮೆಯ ಪ್ರಮೇಯವೇ ಬಂದಿಲ್ಲ ಎಂದಿದ್ದಾರೆ.
ಕರ್ನಾಟಕ ಚುನಾವಣೆ 2023, ಕರ್ನಾಟಕ ಚುನಾವಣೆ ವಿಡಿಯೋ 2023, ದಾವಣಗೆರೆ ಜಗಳೂರಿನಲ್ಲಿ ರಾಜಾಹುಲಿ BSY ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ SV ರಾಮಚಂದ್ರ BSY ಪರ ಪ್ರಚಾರ ನಡೆಸಿದ್ದಾರೆ. ಜಗಳೂರು ಪಟ್ಟಣದ ಗಾಂಧಿ ಸರ್ಕಲ್ನಿಂದ ರೋಡ್ ಶೋ ಮಾಡಿದ್ದಾರೆ..
ತೇರದಾಳ ಕ್ಷೇತ್ರದಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ.. ರಬಕವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಮಿತ್ ಶಾ ಪ್ರಚಾರ ನಡೆಸಿದ್ದು ಈ ವೇಳೆ ʻಲಿಂಗಾಯತʼ ಅಸ್ತ್ರ ಪ್ರಯೋಗಿಸಿದ್ದಾರೆ..
ಕರುನಾಡ ಕುರುಕ್ಷೇತ್ರದಲ್ಲಿ ಚುನಾವಣಾ ಚಾಣಕ್ಯನ ಪವರ್ ಶೋ. ಗುಂಡ್ಲುಪೇಟೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ. BJP ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಪರ ಅಮಿತ್ ಶಾ ಪ್ರಚಾರ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ. ಇಂದು ಅಧಿಕೃತವಾಗಿ ಪ್ರಚಾರ ಆರಂಭಿಸಿದ ಚುನಾವಣಾ ಚಾಣಕ್ಯ. ಕಾಂಗ್ರೆಸ್ ನಾಯಕರ ವಿರುದ್ಧ ಅಮಿತ್ ಶಾ ವಾಗ್ದಾಳಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.